ಮೃತ್ಯುಂಜಯ ಹೋಮ, ಆಶ್ಲೇಷಾಬಲಿ ಮಾಡಿದ್ರೆ ಅಂಬಿ ಬದುಕುತ್ತಿದ್ದರೆ.?

ಸಾವು ಹೇಳಿ ಕೇಳಿ ಬರುವುದಿಲ್ಲ.. ಕಾಲನ ಕರೆ ಬಂದಾಗ ಹೋಗದೆ ಬೇರೆ ದಾರಿ ಇಲ್ಲ.! ವಿಧಿ ಅನ್ನೋದೇ ಹೀಗೇ ಅಲ್ವೇ.!

ಸಾವನ್ನ ತಪ್ಪಿಸೋಕೆ ಯಾರಿಂದಾದರೂ ಸಾಧ್ಯವೇ.? ಖಂಡಿತ ಇಲ್ಲ.! ಸಾವಿನ ಮುಂದೆ ಎಲ್ಲರೂ ತಲೆ ಬಾಗಲೇಬೇಕು. ಇದೇ ವಾಸ್ತವ.!

ಸಾವು ಮತ್ತು ವಿಧಿ ಬಗ್ಗೆ ನಾವು ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ. ಅದು ಅಂಬರೀಶ್ ಸಾವಿನ ಕುರಿತು.

ಕಾಲನ ಕರೆಗೆ ಓಗೊಟ್ಟು ಅಂಬರೀಶ್ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಅಂಬರೀಶ್ ಅಗಲಿದ್ದಾರೆ. ಶನಿವಾರ ರಾತ್ರಿ ವಿಧಿವಶರಾದ ಅಂಬರೀಶ್ ಇನ್ನೂ ನೆನಪು ಮಾತ್ರ.

ಹೀಗಿರುವಾಗಲೇ, ಪ್ರಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ತಮ್ಮ ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಮೃತ್ಯುಂಜಯ ಹೋಮ ಮತ್ತು ಆಶ್ಲೇಷಾಬಲಿ ಮಾಡಲು ಅಂಬರೀಶ್ ಗೆ ಪ್ರಕಾಶ್ ಅಮ್ಮಣ್ಣಾಯ ಸೂಚಿಸಿದ್ದರಂತೆ. ಆದ್ರೆ, ಕಾರಣಾಂತರಗಳಿಂದ ಅದು ನಡೆಯಲಿಲ್ಲ. ಒಂದ್ವೇಳೆ ನಡೆದಿದ್ದರೆ, ಅಂಬರೀಶ್ ಬದುಕುತ್ತಿದ್ದರೆ.? ಮುಂದೆ ಓದಿರಿ...

ಫೇಸ್ ಬುಕ್ ನಲ್ಲಿ ಪ್ರಕಾಶ್ ಅಮ್ಮಣ್ಣಾಯ ಪೋಸ್ಟ್

ಫೇಸ್ ಬುಕ್ ನಲ್ಲಿ ಪ್ರಕಾಶ್ ಅಮ್ಮಣ್ಣಾಯ ಪೋಸ್ಟ್

ಕಳೆದ ತಿಂಗಳಷ್ಟೇ ಅಂಬರೀಶ್ ಜೊತೆಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಮಾತನಾಡಿದ್ದರಂತೆ. ಮೃತ್ಯುಂಜಯ ಹೋಮ ಮತ್ತು ಆಶ್ಲೇಷಾಬಲಿ ಮಾಡಲು ಅಂಬರೀಶ್ ಗೆ ಪ್ರಕಾಶ್ ಅಮ್ಮಣ್ಣಾಯ ಸೂಚಿಸಿದ್ದರಂತೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಪ್ರಕಾಶ್ ಅಮ್ಮಣ್ಣಾಯ ಬರೆದುಕೊಂಡಿರುವ ಪೋಸ್ಟ್ ಇಲ್ಲಿದೆ, ಓದಿರಿ...

ಅಂಬರೀಶ್ ಜಾತಕ

ಅಂಬರೀಶ್ ಜಾತಕ

''ಇದಕ್ಕೇ ಹೇಳುವುದು ನಾವು ನಿಮಿತ್ತ ಮಾತ್ರ ಎಂದು. ಅಕ್ಟೋಬರ್ 10ನೇ ತಾರೀಖು ಅಂಬರೀಶ್ ಅವರೊಡನೆ ಪ್ರಥಮ ಬಾರಿ ಫೋನಿನಲ್ಲಿ ಸಂಭಾಷಣೆ ಮಾಡಿದ್ದೆ. ದೊಡ್ಡಣ್ಣ ರವರ ಮೂಲಕ ಪರಿಚಯವಾಯ್ತು. ಜಾತಕ ನೋಡಿ, ಲಗ್ನಾಷ್ಟಮದಲ್ಲಿ ಶನಿ ಸಂಚಾರ ಕಾಲ, ದಶಾಧಿಪತಿ ಬುಧನಿಗೆ ಚತುರ್ಥದಲ್ಲಿ ಕೇತು ಇರುವುದು ಅಪಾಯ ಎಂದು ತಿಳಿದು ಅವರಿಗೆ ಮೃತ್ಯುಂಜಯ ಹೋಮ ಮತ್ತು ಆಶ್ಲೇಷಾಬಲಿ ಮಾಡಲು ಸೂಚಿಸಿದ್ದೆ'' - ಪ್ರಕಾಶ್ ಅಮ್ಮಣ್ಣಾಯ

ಅಡೆ-ತಡೆ

ಅಡೆ-ತಡೆ

''ಆ ಪ್ರಕಾರ 12ನೇ ತಾರೀಕು ನನ್ನ ಮೂಲಕವೇ ಮಾಡುವುದೆಂದೂ ದಿನ ನಿಗದಿಯೂ ಆಯ್ತು. ಆದರೆ ಆದಿನ ಬೆಂಗಳೂರಲ್ಲಿ ನನಗೆ ಜ್ವರ ಬಂದು ಆರೋಗ್ಯವೂ ಕೈ ಕೊಟ್ಟಿತು. ಆದರೂ ಮಾಡೇ ಬಿಡೋಣ ಅಂತ ನನ್ನ ಜತೆ ಬಂದಿದ್ದ ಪುರೋಹಿತರು ಹೇಳಿಯೂ ಇದ್ದರು. ಆದರೆ ಮಾನ್ಯ ಅನಂತಕುಮಾರ್ ಅವರ ಅಂತ್ಯಕ್ರಿಯೆಯ ಕಾರಣ ಮುಂದಿನ ಸಲ ಮಾಡೋಣ ಎಂದು ಅಂಬರೀಶ್ ಹೇಳಿದರು. ನಾನೂ ಇದೂ ಹೌದು ಎಂದು ಸುಮ್ಮನಾದೆ'' - ಪ್ರಕಾಶ್ ಅಮ್ಮಣ್ಣಾಯ

ದೈವ ಚಿತ್ತ

ದೈವ ಚಿತ್ತ

''ಈ ನಂತರ ಯಾವಾಗ ಮಾಡೋಣ ಎಂದು ಮತ್ತೆ ಕೇಳಿದ್ದರು. ನಾನು ಇನ್ನೂ ಡೇಟ್ ಕೊಡದೆ ಮುಂದೆ ಹಾಕಿದ್ದೆ. ಈಗ ನಮ್ಮ ನೆಚ್ಚಿನ ಅಂಬರೀಶ್ ಇನ್ನಿಲ್ಲ. ಇದನ್ನೇ ದೈವ ಚಿತ್ತ ಎನ್ನುವುದು'' - ಪ್ರಕಾಶ್ ಅಮ್ಮಣ್ಣಾಯ

ಆಯುಷ್ಯ ಮುಗಿದಿದ್ದಾಗ.?

ಆಯುಷ್ಯ ಮುಗಿದಿದ್ದಾಗ.?

''ನಾನೇನೂ ಜೀವ ಉಳಿಸುವವನಲ್ಲ. ಆದರೆ ಭಕ್ತಿಶ್ರದ್ಧೆಯಿಂದ ಮಾಡುವ ಆ ಹೋಮ ಪೂಜೆಗಳಿಗೆ ಆ ಶಕ್ತಿ ಇತ್ತು. ಹಾಗಾಗಿ ಆಯುಷ್ಯ ಮುಗಿದಿದ್ದಾಗ ಪೂಜೆ ಮಾಡುವ ಯೋಗ ಬರಲಿಲ್ಲ. ಅಂತೂ ಸಜ್ಜನರೊಬ್ಬರನ್ನು ಕಳೆದುಕೊಂಡ ದುಃಖವು ನನಗಿದೆ. ಹಾಗಾಗಿ ಇದನ್ನು ಬರೆಯಬೇಕೆಂದೆನಿಸಿತು. ಸಜ್ಜನರನ್ನು ಉಳಿಸಿಕೊಳ್ಳುವ ಯೋಗಭಾಗ್ಯವು ನಮಗೂ ಬೇಕು. ಅದು ಇಲ್ಲದಂತಾಯ್ತು. ಅವರ ದಿವ್ಯಾತ್ಮಕ್ಕೆ ಅಕ್ಷಯ ಪುಣ್ಯಲೋಕ ಸಿಗಲಿ ಎಂದು ದೇವರಲ್ಲಿ ನನ್ನ ಪ್ರಾರ್ಥನೆ'' - ಪ್ರಕಾಶ್ ಅಮ್ಮಣ್ಣಾಯ

More from Filmibeat

English summary
Udupi Astrologer Prakash Ammanaya Facebook post on Ambareesh death goes viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X