twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಮಂದಿರ ಭರ್ತಿ ಆದೇಶದ ಮೊದಲ ದಿನ: ಉಡುಪಿ ಥಿಯೇಟರ್‌ಗಳಲ್ಲಿ ಪ್ರೇಕ್ಷಕರಿಗೆ ಬರ

    By ಉಡುಪಿ ಪ್ರತಿನಿಧಿ
    |

    ಉಡುಪಿಯಲ್ಲಿ ಬಹುತೇಕ ಥಿಯೇಟರುಗಳು ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿವೆ. ಕಳೆದ 11 ತಿಂಗಳಿಂದ ಬಂದ್ ಆಗಿದ್ದ ಥಿಯೇಟರ್ ಗಳು ಪೂರ್ಣ ಪ್ರಮಾಣದಲ್ಲಿ ತೆರೆದಿದ್ದರೂ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ನಗರದ ಕಲ್ಪನಾ ಚಿತ್ರಮಂದಿರದಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ 'ಇನ್ಸ್‌ಪೆಕ್ಟರ್ ವಿಕ್ರಂ' ಸಿನೆಮಾ ಬಿಡುಗಡೆ ಮಾಡಲಾಗಿದೆ, ಆದರೆ ಸಿನಿಮಾ ನೋಡಲು ಮೊದಲ ಶೋ ಗೆ ಬಂದಿದ್ದು ಕೇವಲ 40 ಜನ.

    ಇನ್ನು ಅಲಂಕಾರ್ ಚಿತ್ರ ಮಂದಿರದಲ್ಲಿವಿನೋದ್ ಪ್ರಭಾಕರ್ ನಟನೆಯ 'ಶ್ಯಾಡೋ' ಸಿನೆಮಾ ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ ಸ್ಟೇ ಬಂದಿರುವುದರಿಂದ ಮಾರ್ನಿಂಗ್ ಶೋ ರದ್ಧಾಗಿದೆ. ಹೀಗಾಗಿ ಜನಕ್ಕೆ ನಿರಾಶೆಯಾಗಿದೆ. ಸುದೀಪ್ ,ದರ್ಶನ್ , ಯಶ್ ಶಿವರಾಜ್ ಕುಮಾರ್, ಪುನೀತ್, ಧೃವ ಸರ್ಜಾ ಚಿತ್ರಗಳು ಬಂದರೆ ಥಿಯೇಟರ್ ನತ್ತ ಜನ ಬರುತ್ತಾರೆ ಅನ್ನುವುದು ಚಿತ್ರಮಂದಿರದ ಮಾಲೀಕರ ಅಭಿಪ್ರಾಯ.

     Udupi: Only Few People Came To Theaters On February 05

    Recommended Video

    ನಗಿಸೋಕೆ ಇನ್ನೊಂದು ದಾರಿ ಹಿಡಿದ ಸಿಲ್ಲಿಲಲ್ಲಿಯ ಮಂಜುಭಾಷಿಣಿ | Filmibeat Kannada

    ಕೋವಿಡ್ ನಿಯಮಾವಳಿಯಂತೆ ಶುಚಿತ್ವ ಮತ್ತು ಮಾಸ್ಕ್ ಕಡ್ಡಾಯ ಮುಂದುವರೆದಿದೆ. ಚಿತ್ರಮಂದಿರಗಳಲ್ಲಿ ಕೊರೋನಾ ಪೂರ್ವದಲ್ಲಿದ್ದಂತೆ ಪ್ರೇಕ್ಷಕರಿಗೆ ಸಿನೆಮಾ ನೋಡಲು ಅವಕಾಶವಿದ್ದರೂ, ಸಿನೆಮಾ ಪ್ರಿಯರು ಮಾತ್ರ ಕೊರೋನಾ ಕಾಲದ ಮನಸ್ಥಿತಿಯಲ್ಲೇ ಇದ್ದು, ಚಿತ್ರಮಂದಿರಗಳತ್ತ ಬರಲು ಇನ್ನೂ ಮನಸು ಮಾಡಿಲ್ಲ.

    English summary
    After the government order to use 100% seating capacity of theaters very few people came to theaters to watch movie in Udupi.
    Friday, February 5, 2021, 16:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X