For Quick Alerts
  ALLOW NOTIFICATIONS  
  For Daily Alerts

  ಇವರು ರಕ್ಷಿತ್ ಶೆಟ್ಟಿ ಥರಾನೇ..: ಯೂಟ್ಯೂಬ್‌ನಲ್ಲಿ 777 ಚಾರ್ಲಿ ಟೀಸರ್ ಕ್ರೇಜ್

  By ಮಂಗಳೂರು ಪ್ರತಿನಿಧಿ
  |

  ಕನ್ನಡದ ಬಹು ನಿರೀಕ್ಷಿತ ಚಲನಚಿತ್ರ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರದ ಟೀಸರ್ ಬಿಡುಗಡೆಯಾಗಿ ಎರಡು ದಿನ ಕಳೆದಿದೆ. ಮುದ್ದು ನಾಯಿಯನ್ನೇ ಇಡೀ ಟೀಸರ್ ಶೇ‌ 80ರಷ್ಟು ತೋರಿಸಿದ ರಕ್ಷಿತ್ ಶೆಟ್ಟಿಯ ಕಲಾ ಚಾತುರ್ಯತೆಗೆ ಲಕ್ಷಾಂತರ ಜನ ಸಿನಿರಸಿಕರು ಫಿದಾ ಆಗಿದ್ದಾರೆ.

  ಎರಡು ದಿನದಲ್ಲಿ ಟೀಸರ್‌ನ್ನು ಯೂಟ್ಯೂಬ್ ನಲ್ಲಿ 40 ಲಕ್ಷ ನೋಡಿದ್ದು, ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಅಧ್ಭುತವಾದ ಹಾಡು, ನಾಯಿಯ ತುಂಟಾಟ, ಓಡಾಟವೆಲ್ಲವೂ ಟೀಸರ್ ನಲ್ಲಿ ಅಷ್ಟೇ ಅಚ್ಚುಕಟ್ಟಾಗಿ ಮೂಡಿ ಬಂದಿದ್ದು ಚಿತ್ರದ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ.

  ಚಿತ್ರಮಂದಿರದಲ್ಲಾ? ಒಟಿಟಿಯಲ್ಲಾ? '777 ಚಾರ್ಲಿ' ಬಿಡುಗಡೆ ಯಾವಾಗ? ರಕ್ಷಿತ್ ಶೆಟ್ಟಿ ಕೊಟ್ಟ ಉತ್ತರಚಿತ್ರಮಂದಿರದಲ್ಲಾ? ಒಟಿಟಿಯಲ್ಲಾ? '777 ಚಾರ್ಲಿ' ಬಿಡುಗಡೆ ಯಾವಾಗ? ರಕ್ಷಿತ್ ಶೆಟ್ಟಿ ಕೊಟ್ಟ ಉತ್ತರ

  ಚಾರ್ಲಿ‌ 777 ನ ಟೀಸರ್‌ನ್ನೆ ಆಧರಿಸಿ ಕರಾವಳಿಯ ಹೆಸರಾಂತ ಯೂಟ್ಯೂಬರ್‌ರೊಬ್ಬರು ಒರಿಜಿನಲ್ ಟೀಸರ್ ತರವೇ ತಮ್ಮ ನಾಯಿಯನ್ನು ಬಳಸಿ ವಿಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಹಾಕಿದ್ದು, ಈ ಪ್ರಯತ್ನಕ್ಕೆ ಸ್ವತಃ ರಕ್ಷಿತ್ ಶೆಟ್ಟಿಯವರೇ ಟ್ವಿಟ್ಟರ್‌ನಲ್ಲಿ ಯೂಟ್ಯೂಬ್ ಲಿಂಕ್ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಉಡುಪಿಯ ಕಾಪುವಿನ ಫೋಟೋಗ್ರಾಫರ್ ಆಗಿರುವ ಸಚಿನ್ ಶೆಟ್ಟಿ ತನ್ನ ಮುದ್ದಿನ ನಾಯಿ 'ಚೊಂಟ'ವನ್ನು ಬಳಸಿ ಅದ್ಭುತವಾಗಿ ಚಿತ್ರೀಕರಣ ಮಾಡಿ, ಸತಃ ಎಡಿಟಿಂಗ್ ಮಾಡಿದ್ದಾರೆ. ಗದ್ದೆ, ತೋಟ, ನೀರಿನ ಹಳ್ಳ,‌ ಹೀಗೆ ತನ್ನೂರಿನ ಸುತ್ತಾ-ಮುತ್ತಲಿನಲ್ಲೇ ಚಿತ್ರೀಕರಣ ಮಾಡಿದ್ದಾರೆ.

  ಸಿನಿಮಾಟೋಗ್ರಾಫಿಯಲ್ಲೂ ಪರಿಣತಿ ಹೊಂದಿರುವ ಸಚಿನ್ ಶೆಟ್ಟಿ, ಅದ್ಭುತ ಪ್ರಯತ್ನದಿಂದ ಮೂಲ ಟೀಸರ್‌ನಂತೆಯೇ ವಿಡಿಯೋ ಮೂಡಿ ಬಂದಿದ್ದ ಟೀಸರ್ ಕೊನೆಗೆ ತನ್ನ ಮಿತ್ರ ರಕ್ಷಿತ್ ಶೆಟ್ಟಿಯವರ ರೀತಿಯೇ ಮುಖಭಾವ ಹೊಂದಿರುವ ಸ್ನೇಹಿತನನ್ನು ಬಳಸಿ ಟೀಸರ್ ಗೆ ನವೀನಸ್ಪರ್ಶ ನೀಡಿದ್ದಾರೆ.

  ಅಲ್ಲದೇ ಇಡೀ ವಿಡಿಯೋ ಉದ್ದಕ್ಕೂ ಚಾರ್ಲಿ777 ಹಾಡನ್ನೇ ಬಳಸಿ ಅದ್ಭುತವಾಗಿ ಸಂಕಲನ ಮಾಡಿದ್ದಾರೆ.

  ಸಚಿನ್ ಶೆಟ್ಟಿ 'ಶಟರ್ ಬಾಕ್ಸ್ ಫಿಲಂಸ್' ಎಂಬ ಯೂಟ್ಯೂಬ್ ಚಾನೆಲ್ ನ್ನು ಹೊಂದಿದ್ದು, 80 ಸಾವಿರಕ್ಕೂ ಹೆಚ್ಚು ಸಬ್ ಸ್ಕ್ರೈಬರ್ ಗಳನ್ನು ಹೊಂದಿದ್ದಾರೆ. ಅಲ್ಲದೇ ಹವ್ಯಾಸಿ ಬೈಕ್ ರೈಡರ್ ಕೂಡಾ ಆಗಿದ್ದು, ಭಾರತಾದ್ಯಂತ ಬೈಕ್ ನಲ್ಲೇ ಸುತ್ತಿ ಪ್ರಸಿದ್ಧಿಗಳಿಸಿದ್ದಾರೆ.

  ಅಲ್ಲು ಅರ್ಜುನ್ ಜೊತೆ ನಟಿಸೋ ಅವಕಾಶ ಸಿಕ್ಕಿದ್ದು ಹೇಗೆ ಅನ್ನೋದನ್ನ ಹೇಳಿದ ಡಾಲಿ | Filmibeat Kannada

  ಚಾರ್ಲಿ777 ನ ಟೀಸರ್ ವಿಡಿಯೋ ಒಂದು ಗಂಟೆಯಲ್ಲೇ 30 ಸಾವಿರಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ಸ್ವತಃ ನಟ ರಕ್ಷಿತ್ ಶೆಟ್ಟಿಯವರೇ ಮೆಚ್ಚುಗೆ ವ್ಯಕ್ತಪಡಿಸಿ ಯೂಟ್ಯೂಬ್ ವಿಡಿಯೋ ಲಿಂಕ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ಪ್ರಯತ್ನಕ್ಕೆ ಶಹಬ್ಬಾಸ್ ಅಂದಿದ್ದಾರೆ.

  English summary
  Udupi Based Youtuber Recreates 777 Charlie Movie Teaser using his own dog; spoof goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X