ಒಳ್ಳೆ ಸಿನಿಮಾ ಮಾಡಿದ್ರೂ ಆಗ್ತಿದೆ ಅನ್ಯಾಯ : 'ಒಂದಲ್ಲಾ ಎರಡಲ್ಲಾ' 56 ಶೋಗಳು ರದ್ದು!

By Naveen

ಒಳ್ಳೆಯ ಸಿನಿಮಾ ಮಾಡಿದ್ರೆ ಗೆಲ್ಲುತ್ತದೆ ಎನ್ನುತ್ತಾರೆ. ಆದರೆ, ಕೆಲವು ಬಾರಿ ಒಳ್ಳೆಯ ಸಿನಿಮಾಗಳು ಸಹ ಕೆಲ ಕಾರಣಗಳಿಗೆ ಪ್ರೇಕ್ಷಕರಿಗೆ ತಲುಪುವುದಿಲ್ಲ. ಇದೀಗ 'ಒಂದಲ್ಲಾ ಎರಡಲ್ಲಾ' ಚಿತ್ರತಂಡ ಕೂಡ ತಮ್ಮದಲ್ಲದ ತಪ್ಪಿಗೆ ಸಮಸ್ಯೆ ಎದುರಿಸುತ್ತಿದೆ.

'ಒಂದಲ್ಲಾ ಎರಡಲ್ಲಾ' ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ, ಸಿನಿಮಾದ 56 ಪ್ರದರ್ಶನಗಳು ರದ್ದಾಗಿವೆ. ಯೂ ಎಫ್ ಓ ದಲ್ಲಿ ಆಗಿರುವ ಸಮಸ್ಯೆಯಿಂದ ಸಿನಿಮಾ ಪ್ರದರ್ಶನವಾಗಿಲ್ಲ. ಮಣಿಪಾಲ್, ಶಿವಮೊಗ್ಗ, ಮಂಗಳೂರು ಸೇರಿದಂತೆ ಸಾಕಷ್ಟು ಜಿಲ್ಲೆಗಳಲ್ಲಿ ಸಿನಿಮಾ ಇಂದು ಬಿಡುಗಡೆಯಾಗಿಲ್ಲ.

'ಒಂದಲ್ಲಾ ಎರಡಲ್ಲಾ' ಸಿನಿಮಾದ ವಿಶೇಷ ಪ್ರದರ್ಶನ ಕಳೆದ ಬುದವಾರ ನಡೆದಿದೆ. ಸಿನಿಮಾವನ್ನು ಎಲ್ಲರೂ ಹೊಗಳುತ್ತಿದ್ದಾರೆ. ಇದೊಂದು ಅದ್ಬುತ ಸಿನಿಮಾ ಎಂಬ ಪ್ರತಿಕ್ರಿಯೆ ಸಿಕ್ಕಿದೆ. ಇಷ್ಟೆಲ್ಲ ಆದರೂ ಯೂ ಎಫ್ ಓ ಸಮಸ್ಯೆಯಿಂದ ಸಿನಿಮಾ ಪ್ರದರ್ಶನ ಆಗಲಿಲ್ಲ.

UFO issue : ondalla eradalla kannada movie 56 shows canceled

80ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೇವಲ 23 ಸೆಂಟರ್ ಗಳಲ್ಲಿ ಚಿತ್ರ ರಿಲೀಸ್ ಆಗಿದೆ. ಈ ವಿಚಾರದ ಬಗ್ಗೆ ಅಸಮಾಧಾನಗೊಂಡಿರುವ ಚಿತ್ರತಂಡ ಫಿಲ್ಮ್ ಚೆಂಬರ್ ಗೆ ದೂರು ನೀಡುವ ನಿರ್ಧಾರ ಮಾಡಿದೆ. ಜೊತೆಗೆ ಯೂ ಎಫ್ ಓ ಕಚೇರಿಗೆ ಭೇಟಿ ನೀಡಿ ಮಾತುಕತೆ ನಡೆಸಿದೆ.

More from Filmibeat

English summary
UFO issue : Director D.Sathya Prakash's 'Ondalla Eradalla' kannada movie 56 shows canceled.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X