For Quick Alerts
  ALLOW NOTIFICATIONS  
  For Daily Alerts

  ಕಹಿಯೇ ಹೆಚ್ಚಿದ್ದರು ಸಿಹಿಯಾಗಿ ಯುಗಾದಿ ಶುಭಾಶಯ ಕೋರಿದ ಸಿನಿ ತಾರೆಯರು

  |

  ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬಂದಿದೆ. ಸಿನಿರಂಗದ ಪಾಲಿಗೆ ಈ ಯುಗಾದಿ ಸಿಹಿಗಿಂತಲೂ ತುಸು ಕಹಿಯನ್ನೇ ಹೆಚ್ಚು ತಂದಿದೆ.

  ಪ್ರತಿವರ್ಷ ಯುಗಾದಿಗೆ ಸಾಲು-ಸಾಲು ಸಿನಿಮಾಗಳು ತೆರೆಗೆ ಬರುತ್ತಿದ್ದವು. ಆದರೆ ಕೊರೊನಾ ಕಾರಣದಿಂದಾಗಿ ಈ ಯುಗಾದಿಗೆ ಕನ್ನಡದ ಯಾವ ಸಿನಿಮಾಗಳು ಬಿಡುಗಡೆ ಆದಂತಿಲ್ಲ. ಆದರೆ ಸಿನಿ ತಾರೆಯರು ಯುಗಾದಿ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ, ರಾಜ್ಯದ ಜನರಿಗೆ ಶುಭಾಶಯಗಳನ್ನು ಕೋರುವುದನ್ನು ಮರೆತಿಲ್ಲ.

  'ತಂದೆತಾಯಿ ರಾಯರ ಕೃಪೆಯಿಂದ ಈ ಸಂವತ್ಸರ ಸಮಸ್ತ ಮನುಕುಲದ ಮನೋವಾಂಛ ಪಲಗಳನ್ನು ಈಡೇರಿಸಿ..ನಮ್ಮ ಕಾಡುತ್ತಿರುವ ಕೊರೋನ ವಿಶ್ವದಿಂದ ತೊಲಗಿ.. ಕ್ಷೇಮ ವಿಜಯ ಆಯು ಆರೋಗ್ಯ ಮಳೆ ಬೆಳೆ ಧನಕನಕ ವಸ್ತುವಾಹನ ಸಂತಸ ದೈವಭಕ್ತಿ ಸರ್ವರಿಗೂ ಪ್ರಾಪ್ತವಾಗಲಿ ಎಂದು ರಾಯರಲ್ಲಿ ಪ್ರಾರ್ಥನೆ ಹಿಂದುಗಳ ನಿಜ ಹೊಸವರ್ಷ ಯುಗಾದಿ ಹಬ್ಬದ ಶುಭಾಶಯಗಳು' ಎಂದಿದ್ದಾರೆ ಹಿರಿಯ ನಟ ಜಗ್ಗೇಶ್.

  ಮಾಸ್ಕೇ ಬೆಲ್ಲ, ಸ್ಯಾನಿಟೈಸರ್ ಬೇವು ಎಂದ ಗಣೇಶ್

  ಮಾಸ್ಕೇ ಬೆಲ್ಲ, ಸ್ಯಾನಿಟೈಸರ್ ಬೇವು ಎಂದ ಗಣೇಶ್

  ''ಚೈತ್ರಮಾಸದ ಪ್ರಾರಂಭದ ಸೂರ್ಯೋದಯದ ವೇಳೆ; ಚತುರ್ಮುಖ ಬ್ರಹ್ಮನು ಸಂಪೂರ್ಣ ಜಗತ್ತಿನ ಸೃಷ್ಟಿ ಮಾಡಿದನು ಎಂಬುದಾಗಿ ಯುಗಾದಿ ಬಗ್ಗೆ ಸಂಸ್ಕೃತ ಶ್ಲೋಕ ಹೇಳುತ್ತದೆ. ಹೊಸ ವರ್ಷದ ಬದುಕು ಹಬ್ಬವಾಗಿರಲು ವಾಸ್ತವಕ್ಕೆ, ಮಾಸ್ಕೇ ಬೆಲ್ಲ, ಸ್ಯಾನಿಟೈಸರೇ ಬೇವು. ನವ ವಸಂತದ ಅಲೆಯಲಿ ಜಗತ್ತಿನ ಸಂಕಷ್ಟಗಳು ದೂರಾಗಲಿ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು' ಎಂದಿರುವವರು ಗೋಲ್ಡನ್ ಸ್ಟಾರ್ ಗಣೇಶ್.

  ನಟ ದರ್ಶನ್ ಕೋರಿದ್ದಾರೆ ಹಬ್ಬದ ಶುಭಾಶಯ

  ನಟ ದರ್ಶನ್ ಕೋರಿದ್ದಾರೆ ಹಬ್ಬದ ಶುಭಾಶಯ

  ''ಸರ್ವರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು. ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಿರಲಿ. ಸುಖ, ಸಮೃದ್ಧಿ, ಶಾಂತಿ ನಿಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ'' ಎಂದು ಆಶಿಸಿರುವುದು ಕರುನಾಡ ದಾಸ ದರ್ಶನ್. ಶುಭಾಶಯಗಳ ಜೊತೆಗೆ 'ರಾಬರ್ಟ್‌' ಸಿನಿಮಾದ ತಮ್ಮ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

  ಕಿಚ್ಚ ಮತ್ತು ಶ್ರೀಮುರಳಿ ಶುಭಾಶಯ ಹೀಗಿತ್ತು

  ಕಿಚ್ಚ ಮತ್ತು ಶ್ರೀಮುರಳಿ ಶುಭಾಶಯ ಹೀಗಿತ್ತು

  'ನನ್ನ ಪ್ರೀತಿಯ ಕನ್ನಡ ಕುಟುಂಬಕ್ಕೆ ಈ ನಿಮ್ಮ ಕಿಚ್ಚನಿಂದ ಯುಗಾದಿ ಹಬ್ಬದ ಶುಭಾಶಯ' ಎಂದು ಸರಳವಾಗಿ ಶುಭ ಹಾರೈಸಿದ್ದಾರೆ ನಟ ಸುದೀಪ್. 'ಯುಗಾದಿ ಹಬ್ಬದ ಶುಭಾಶಯ' ಎಂದು ತಮ್ಮ ಸಿನಿಮಾ 'ಮದಗಜ'ದ ಚೆಂದದ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ ಶ್ರೀಮುರಳಿ.

  ಹರಿಪ್ರಿಯ ಶುಭಾಶಯ ಕೋರಿದ್ದು ಹೀಗೆ

  ಹರಿಪ್ರಿಯ ಶುಭಾಶಯ ಕೋರಿದ್ದು ಹೀಗೆ

  ''ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಈ ಯುಗಾದಿ, ಎಲ್ಲರ ಬದುಕಿನಲ್ಲಿ ಹೊಸ ಸಂತೋಷ ಸಂಭ್ರಮ ತರಲಿ, ನಿಮ್ಮ ಜೀವನದ ಸಿಹಿ ಹೆಚ್ಚಿಸಲಿ'' ಎಂದು ಶುಭ ಹಾರೈಸಿದ್ದಾರೆ ನಟಿ ಹರಿಪ್ರಿಯ. ಜೊತೆಗೆ ತಾವು ಉಪೇಂದ್ರ ಜೊತೆಗೆ ನಟಿಸುತ್ತಿರುವ ಹೊಸ ಸಿನಿಮಾ 'ಲಗಾಮ್‌'ನ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದ್ದಾರೆ.

   ರಕ್ಷಿತ್-ರಿಷಬ್ ಶೆಟ್ಟಿ ಸಹ ಶುಭಾಶಯ ಕೋರಿದ್ದಾರೆ

  ರಕ್ಷಿತ್-ರಿಷಬ್ ಶೆಟ್ಟಿ ಸಹ ಶುಭಾಶಯ ಕೋರಿದ್ದಾರೆ

  'ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ವರುಷ, ಹರುಷದಿಂದ ತುಂಬಿರಲಿ'' ಎಂದು ಶುಭ ಹಾರೈಸಿದ್ದಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ. ತಮ್ಮ ಮುಂದಿನ ಸಿನಿಮಾ 'ಚಾರ್ಲಿ 777' ಪೋಸ್ಟರ್‌ ಹಂಚಿಕೊಂಡು, 'ಸಮಸ್ತ ನಾಡಿನ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಲ್ಲರಿಗೂ ಶುಭವ ತರಲಿ ಯುಗಾದಿ'' ಎಂದು ವಿಷ್ ಮಾಡಿದ್ದಾರೆ ರಕ್ಷಿತ್ ಶೆಟ್ಟಿ.

  ಅಮಿತಾಬ್ ಜೊತೆ ನಟಿಸುವ ಆಫರ್ ಬಂದಾಗ ರಶ್ಮಿಕಾ ಪೋಷಕರು ಏನ್ ಹೇಳಿದ್ರು ಗೊತ್ತಾ | Filmibeat Kannada
  ಕೊರೊನಾ ಮಹಾಮಾರಿ ದೂರಾಗಲಿ: ಮಾಳವಿಕಾ

  ಕೊರೊನಾ ಮಹಾಮಾರಿ ದೂರಾಗಲಿ: ಮಾಳವಿಕಾ

  ''ಯುಗಾದಿ ಹಬ್ಬದ ಶುಭಾಶಯಗಳು ಎಲ್ಲರಿಗೂ'' ಎಂದಿರುವ ನಟಿ ಮೇಘನಾ ಗಾಂವ್ಕರ್, 'ಈ ವರ್ಷ ಎಲ್ಲರಿಗೂ ಶುಭಾವಗಲಿ' ಎಂದು ಹಾರೈಸಿದ್ದಾರೆ. 'ಪ್ಲವಮಾನ ಸಂವಂತ್ಸರದಲ್ಲಿ ಕೊರೊರನಾ ಮಹಾಮಾರಿ ಕೊನೆಯಾಗಲಿ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ದೊರೆಯಲಿ ಎಂದು ಶುಭ ಹಾರೈಸಿದ್ದಾರೆ ನಟಿ, ರಾಜಕಾರಣಿ ಮಾಳವಿಕ ಅವಿನಾಶ್.

  English summary
  Many movie stars convey their best wished for Ugadi through social media. This Ugadi is not so good for movie industry due to coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X