Ramya: ಯುಗಾದಿ ಹಬ್ಬಕ್ಕೆ ನಟಿ ರಮ್ಯಾ ಸಿಹಿಯಾದ ಪ್ರಶ್ನೆ!
ಕನ್ನಡದ ರಮ್ಯಾ ಇತ್ತೀಚೆಗೆ ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿ ಇದ್ದಾರೆ. ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ನಟಿ ರಮ್ಯಾ ಸಕ್ರಿಯವಾಗಿ ಇರುತ್ತಾರೆ. ಯುಗಾದಿ ಹಬ್ಬದ ಪ್ರಯುಕ್ತ ನಟಿ ರಮ್ಯಾ ಎಲ್ಲರಿಗೂ ಒಂದು ಪ್ರಶ್ನೆ ಕೇಳಿದ್ದಾರೆ. ಅದು ಸಿಹಿಯಾದ ಪ್ರಶ್ನೆ.
ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ರಮ್ಯಾ ತಮ್ಮ ಫಾಲೋವರ್‌ಗಳಿಗೆ ಹೋಳಿಗೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಯಾರಿಗೆ ಯಾವ ಹೋಳಿಗೆ ಇಷ್ಟ ಎಂದು ಕೇಳಿದ್ದಾರೆ. ಅದಕ್ಕೆ ಆಪ್ಷನ್ ಕೂಡ ಅವರೇ ಕೊಟ್ಟಿದ್ದಾರೆ. ಕಾಯಿ ಹೋಳಿಗೆ ಮತ್ತು ಬೇಳೆ ಹೋಳಿಗೆ ಎನ್ನುವ ಆಪ್ಷನ್ ಕೊಟ್ಟು, ಇದರಲ್ಲಿ ನಿಮಗೆ ಯಾವ ಹೋಳಿಗೆ ಇಷ್ಟ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಕಮೆಂಟ್‌ಗಳು ಬಂದಿವೆ.
ರಮ್ಯಾ ತಮಗೆ ಯಾವ ಹೋಳಿಗೆ ಇಷ್ಟ ಎನ್ನುವ ಬಗ್ಗೆ ಕೂಡ ಹೇಳಿದ್ದಾರೆ. ರಮ್ಯಾಗೆ ಕಾಯಿ ಹೆಚ್ಚು ಇಷ್ಟವಂತೆ. ಈ ವಿಚಾರವನ್ನು ಅದೇ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ. ರಮ್ಯಾ ಅಭಿಮಾನಿಗಳು ರಮ್ಯಾ ಕೇಳಿದ ಪ್ರಶ್ನೆಗೆ ಹುಮ್ಮಸ್ಸಿನಿಂದ ಉತ್ತರ ಕೊಟ್ಟಿದ್ದಾರೆ.
ಬರಿ ರಮ್ಯಾ ಪ್ರಶ್ನೆ ಉತ್ತರ ಕೊಡುವುದಷ್ಟೇ ಅಲ್ಲಾ, ರಮ್ಯಾಗೂ ಜನ ಪ್ರಶ್ನೆ ಮಾಡುತ್ತಿದ್ದಾರೆ. ಹೌದು ನಟಿ ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಿವುದು ಯಾವಾಗ?. ಯಾವ ಚಿತ್ರದ ಮೂಲಕ ರಮ್ಯಾ ರೀ ಎಂಟ್ರಿ ಕೊಡ್ತಾರೆ ಎನ್ನುವ ಪ್ರಶ್ನೆಗಳು ಎದುರಾಗಿವೆ.

ನಟಿ ರಮ್ಯಾ ಚಿತ್ರದಲ್ಲಿ ಅಭಿನಯಿಸುವುದು ಬಿಟ್ಟು ಹಲವು ವರ್ಷಗಳು ಕಳೆದಿವೆ. ಆದರೆ ರಮ್ಯಾಗೆ ಇರುವ ಬೇಡಿಕೆ ಮಾತ್ರ ಒಂದಿಷ್ಟು ಕಡಿಮೆ ಆಗಿಲ್ಲ. ಚಿತ್ರರಂಗದಲ್ಲಿ ಕೂಡ ಹಲವರು ರಮ್ಯಾ ಅವರನ್ನು ಹಾಕಿ ಸಿನಿಮಾ ಮಾಡಲು ಕಾಯುತ್ತಾ ಇದ್ದಾರೆ. ಸಿನಿಮಾದ ಕಥೆಗಳನ್ನು ಕೇಳುತ್ತಿರುವುದಾಗಿ ಈ ಹಿಂದೆ ರಮ್ಯಾ ಹೇಳಿಕೊಂಡಿದ್ದರು.
ಹಾಗಾಗಿ ಸದ್ಯದಲ್ಲೇ ನಟಿ ರಮ್ಯಾ ತಮ್ಮ ಮುಂದಿನ ಚಿತ್ರವನ್ನು ಪ್ರಕಟ ಮಾಡುವ ಸಾಧ್ಯತೆ ಇದೆ. ಹಾಗಾಗಿ ರಮ್ಯಾ ಕಮ್ ಬ್ಯಾಕ್ ಹೇಗೆ ಇರಲಿದೆ ಎನ್ನುವ ಬಗ್ಗೆ ಚಿತ್ರರಂಗದಲ್ಲೂ, ಅಭಿಮಾನಿ ಬಳಗದಲ್ಲೂ ಸಾಕಷ್ಟು ಕುತೂಹಲ ಮೂಡಿದೆ. ಇಲ್ಲಿ ತನಕ ರಮ್ಯಾ ಹಲವಾರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications