For Quick Alerts
  ALLOW NOTIFICATIONS  
  For Daily Alerts

  ಉಪ್ಪಿ ಹುಟ್ಟುಹಬ್ಬಕ್ಕೆ 'ಯುಐ' ಚಿತ್ರದ ವಿಶೇಷ ವಿಡಿಯೋ ಬಿಡುಗಡೆ; ದಿನಾಂಕ, ಸಮಯದ ಮಾಹಿತಿ ಇಲ್ಲಿದೆ

  |

  ಉಪ್ಪಿ 2 ಚಿತ್ರ ನಿರ್ದೇಶನ ಮಾಡಿ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದ ಉಪೇಂದ್ರ 7 ವರ್ಷಗಳ ಬಳಿಕ ಮತ್ತೆ ನಿರ್ದೇಶಕನ ಕ್ಯಾಪ್ ತೊಡುತ್ತಿದ್ದಾರೆ. ಈ ಬಾರಿ ಕೂಡ ತಮ್ಮ ಚಿತ್ರಕ್ಕೆ ವಿಭಿನ್ನವಾದ ಟೈಟಲ್ ಇಡುವುದರ ಮೂಲಕ ಉಪೇಂದ್ರ ಸದ್ದು ಮಾಡಿದ್ದರು. 'ಯು ಐ' ಎಂಬ ಶೀರ್ಷಿಕೆಯನ್ನು ತಮ್ಮ ಮುಂದಿನ ನಿರ್ದೇಶನದ ಸಿನಿಮಾಗೆ ಇಟ್ಟಿರುವ ಉಪೇಂದ್ರ ನಾಳೆ ( ಸೆಪ್ಟೆಂಬರ್‌ 18 ) 54ನೇ ವಸಂತಕ್ಕೆ ಕಾಲಿಡಲಿದ್ದಾರೆ.

  ಹೀಗೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಯುಐ ಚಿತ್ರತಂಡ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಶುಭಾಶಯ ಕೋರಲು ತೀರ್ಮಾನಿಸಿದೆ. ಈ ಕುರಿತಾಗಿ ಚಿತ್ರತಂಡ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ವಿಶ್ವ ಸಿನಿಮಾದ ಸ್ವಯಂ ಚಿಂತಕನ ಹುಟ್ಟುಹಬ್ಬವನ್ನು ಆಚರಿಸಲು ವಿಶೇಷ ವಿಡಿಯೋವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಬರೆದುಕೊಂಡಿದೆ.

  ಈ ವಿಡಿಯೋ ನಾಳೆ ( ಸೆಪ್ಟೆಂಬರ್ 18 ) ಬೆಳಿಗ್ಗೆ 9 ಗಂಟೆಗೆ ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಜಿ ಮನೋಹರನ್ ಹಾಗೂ ಟಗರು ಖ್ಯಾತಿಯ ಕೆ ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ ಹಾಗೂ ಚಿತ್ರ ಮುಂದಿನ ವರ್ಷ ತೆರೆಕಾಣಲಿದೆ.

  ಕಬ್ಜ ಟೀಸರ್ ಬಿಡುಗಡೆ:

  ಇನ್ನು ಉಪೇಂದ್ರ ಅಭಿನಯಿಸಿರುವ ಕಬ್ಜ ಚಿತ್ರದ ಟೀಸರ್ ಇಂದು ( ಸೆಪ್ಟೆಂಬರ್ 17 ) ಸಂಜೆ 5:04ಕ್ಕೆ ಬಿಡುಗಡೆಗೊಳ್ಳಲಿದೆ. ಆರ್ ಚಂದ್ರು ನಿರ್ದೇಶಿಸಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಏಕೈಕ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಟಾಲಿವುಡ್ ಖ್ಯಾತ ನಟ ರಾಣಾ ದಗ್ಗುಬಾಟಿ ಹಾಗೂ ಚಂದನವನದಿಂದ ಶಿವರಾಜ್ ಕುಮಾರ್ ಅತಿಥಿಗಳಾಗಿ ಆಗಮಿಸಲಿದ್ದಾರೆ.

  ಹುಟ್ಟುಹಬ್ಬಕ್ಕೆ ಹಾರ, ಹೂಗುಚ್ಛ ತರಬೇಡಿ!

  ಇನ್ನು ಸದಾ ಒಂದಿಲ್ಲೊಂದು ಬದಲಾವಣೆ ಬಯಸುವ ಉಪೇಂದ್ರ ಈ ಬಾರಿಯ ತಮ್ಮ ಹುಟ್ಟುಹಬ್ಬಕ್ಕೆ ಯಾರು ಸಹ ಕೇಕ್, ಹಾರ ಹಾಗೂ ಹೂಗುಚ್ಚಗಳನ್ನು ತರಬೇಡಿ, ಅದರ ಬದಲಾಗಿ 18 ಪದಗಳುಳ್ಳ ಒಂದೊಳ್ಳೆ ಸಂದೇಶದ ವಾಕ್ಯವನ್ನು ಒಂದು ಹಾಳೆಯಲ್ಲಿ ಬರೆದು ತನ್ನಿ ಎಂದು ಮನವಿಯನ್ನು ಮಾಡಿದ್ದರು. ಹೀಗೆ ಈ ಬಾರಿಯ ಉಪೇಂದ್ರ ಹುಟ್ಟುಹಬ್ಬಕ್ಕೆ ಒಂದೆಡೆ ಸಾಲು ಸಾಲು ಸಿನಿಮಾಗಳ ಟೀಸರ್ ಮತ್ತು ಪೋಸ್ಟರ್ ಬಿಡುಗಡೆಯಾದರೆ ಮತ್ತೊಂದೆಡೆ ಭಿನ್ನವಾಗಿ ಉಪೇಂದ್ರ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ.

  English summary
  'UI' movie team will release a special video on the occasion of Upendra birthday. Read on,
  Saturday, September 17, 2022, 11:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X