UI vs Max: ಕ್ರಿಸ್‌ಮಸ್ ಬಾಕ್ಸಾಫೀಸ್ ವಿನ್ನರ್ ಯಾರು ಗೊತ್ತಾ?

ಕ್ರಿಸ್‌ಮಸ್ ಸಂಭ್ರಮದಲ್ಲಿ ತೆರೆಗೆ ಬಂದ ಕನ್ನಡದ 'ಯುಐ' ಹಾಗೂ 'ಮ್ಯಾಕ್ಸ್' ಚಿತ್ರಗಳು ಗೆದ್ದಿದೆ. ಉಪೇಂದ್ರ ತಮ್ಮ ನಿರ್ದೇಶನದಿಂದ ಮ್ಯಾಜಿಕ್ ಮಾಡಿದರೆ ಸುದೀಪ್ ತಮ್ಮ ಮಾಸ್ ಸ್ಕ್ರೀನ್‌ ಪ್ರಸೆನ್ಸ್‌ನಿಂದ ಬಾಕ್ಸಾಫೀಸ್ ಶೇಕ್ ಮಾಡುತ್ತಿದ್ದಾರೆ. ಎರಡೂ ಸಿನಿಮಾಗಳನ್ನು ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ.

ಉಪೇಂದ್ರ ನಿರ್ದೇಶಿಸಿ ನಟಿಸಿದ 'ಯುಐ' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಜನ ಸಿನಿಮಾ ನೋಡಲು ಮುಗಿಬಿದ್ದರು. ಇತ್ತ 'ಮ್ಯಾಕ್ಸ್' ಮೊದಲ ಶೋನಿಂದಲೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಎರಡನ್ನು ಪ್ಯಾನ್ ಇಂಡಿಯಾ ಸಿನಿಮಾ ಎಂದು ಘೋಷಿಸಿದ್ದರು. ಆದರೆ ಹೊರ ರಾಜ್ಯಗಳಲ್ಲಿ ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿ ರಿಲೀಸ್ ಮಾಡಲಿಲ್ಲ.

UI vs Max Collection Which film won the 2024 Christmas Box Office battle

ತೆಲುಗು ಹಾಗೂ ತಮಿಳಿನಲ್ಲಿ 'ಯುಐ' ಹಾಗೂ 'ಮ್ಯಾಕ್ಸ್' ಎರಡೂ ಚಿತ್ರಗಳು ತೆರೆಕಂಡು ತಕ್ಕಮಟ್ಟಿಗೆ ರೆಸ್ಪಾನ್ಸ್ ಪಡೆದುಕೊಂಡಿವೆ. ಬಾಕ್ಸಾಫೀಸ್ ಗಳಿಕೆ ಬಗ್ಗೆ ಚಿತ್ರತಂಡಗಳಿಂದ ಅಧಿಕೃತ ಮಾಹಿತಿ ಸಿಗಲಿಲ್ಲ. ಮೊದಲ ದಿನ ಕರ್ನಾಟಕದಲ್ಲಿ 14ರಿಂದ 15 ಕೋಟಿ ಗ್ರಾಸ್ ಕಲೆಕ್ಷನ್ ಆಗಿದೆ ಎಂದು 'ಮ್ಯಾಕ್ಸ್' ಚಿತ್ರ ನಿರ್ಮಾಪಕರು ಹೇಳಿದ್ದರು. ಇನ್ನುಳಿದಂತೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.

'ಮ್ಯಾಕ್ಸ್' ಹಾಗೂ 'ಯುಐ' ಎರಡೂ ಚಿತ್ರಗಳ ಸಕ್ಸಸ್ ಮೀಟ್ ನಡೆದಿದೆ. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಎಲ್ಲರೂ ಖುಷಿಯಾಗಿದ್ದಾರೆ. ಆದರೆ 'ಮ್ಯಾಕ್ಸ್' ರಿಲೀಸ್ ಬಳಿಕ 'ಯುಐ' ಆರ್ಭಟ ಕಮ್ಮಿ ಆಗಿದ್ದು ಸಹಜವಾಗಿಯೇ ಗೊತ್ತಾಗಿದೆ. ಮೊದಲಿನಿಂದಲೂ ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಫೈಟ್ ಎನ್ನುವಂತೆ ಚರ್ಚೆ ನಡೆದಿತ್ತು. ಆದರೆ ಸುದೀಪ್ ಹಾಗೂ ಉಪ್ಪಿ ಇದನ್ನು ನಿರಾಕರಿಸಿದ್ದರು. ಎರಡೂ ನಮ್ಮ ಸಿನಿಮಾಗಳೇ ಎಂದಿದ್ದರು.

ಅಧಿಕೃತ ಮಾಹಿತಿ ಸಿಗದೇ ಇದ್ದರೂ sacnilk.com ವರದಿ ಪ್ರಕಾರ 'ಯುಐ' ಸಿನಿಮಾ 10 ದಿನಕ್ಕೆ 29.45 ಕೋಟಿ ರೂ. ಕಲೆಕ್ಷನ್(ಇಂಡಿಯಾ ನೆಟ್) ಮಾಡಿದೆ. ಆದರೆ 'ಮ್ಯಾಕ್ಸ್' ಸಿನಿಮಾ ಕೇವಲ 5 ದಿನಗಳಲ್ಲಿ 27.65 ಕೋಟಿ ರೂ. ಗಳಿಕೆ(ಇಂಡಿಯಾ ನೆಟ್) ಕಂಡು ಹುಬ್ಬೇರಿಸಿದೆ. ಆ ಲೆಕ್ಕದಲ್ಲಿ 'ಯುಐ' ಸಿನಿಮಾ ಹಿಂದಿಕ್ಕಲು 'ಮ್ಯಾಕ್ಸ್' ಇನ್ನು ಒಂದು ಕೋಟಿ ಗಳಿಸಬೇಕಿದೆ.

UI vs Max Collection Which film won the 2024 Christmas Box Office battle

ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಕ್ರಿಸ್‌ಮಸ್ ವಿನ್ನರ್ 'ಮ್ಯಾಕ್ಸ್' ಎನ್ನುವುದು ಸ್ಪಷ್ಟವಾಗುತ್ತಿದೆ. ಇನ್ನು ಬುಕ್‌ಮೈ ಶೋ ಟಿಕೆಟ್ ಬುಕ್ಕಿಂಗ್ ಲೆಕ್ಕ ತೆಗೆದುಕೊಂಡರೂ 'ಮ್ಯಾಕ್ಸ್' ದರ್ಬಾರ್ ಜೋರಾಗಿದೆ. 10 ದಿನಕ್ಕೆ ಬುಕ್‌ಮೈ ಶೋನಲ್ಲಿ 'ಯುಐ' ಚಿತ್ರಕ್ಕೆ 5 ಲಕ್ಷದ 77 ಸಾವಿರ ಟಿಕೆಟ್ ಬುಕ್ ಆಗಿದೆ. ಆದರೆ 'ಮ್ಯಾಕ್ಸ್' ಸಿನಿಮಾ 5 ದಿನ ಪೂರೈಸುವ ಮುನ್ನದೇ 5 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕ್ ಆಗಿ ಸಂಚಲನ ಸೃಷ್ಟಿಸಿದೆ.

ಯುಐ' ಸಿನಿಮಾ 30 ಕೋಟಿ ರೂ. ಗ್ರಾಸ್ ಕಲೆಕ್ಷನ್ ಹಾಗೂ 'ಮ್ಯಾಕ್ಸ್' 40 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಮ್ಯಾಕ್ಸ್' ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿತ್ತು. ಇನ್ನು ಎರಡೂ ಚಿತ್ರಗಳ ಗಳಿಕೆಗೆ ಕ್ರಿಸ್‌ಮಸ್ ರಜೆ ಹಾಗೂ ಡಿಸೆಂಬರ್ 28ರ ಸರ್ಕಾರಿ ರಜೆ ವರವಾಗಿತ್ತು. 'ಯುಐ' ಎರಡೂ ವೀಕೆಂಡ್ ಪೂರೈಸಿದೆ. ಆದರೆ 'ಮ್ಯಾಕ್ಸ್' ಇನ್ನು ಒಂದು ವೀಕೆಂಡ್ ಮಾತ್ರ ದಾಟಿ ಬಂದಿದೆ.

ಉಪ್ಪಿ ನಿರ್ದೇಶನದ 'ಯುಐ' ಚಿತ್ರದ ಬಗ್ಗೆ ಭಿನ್ನ ವಿಭಿನ್ನ ರಿವ್ಯೂ ಬಂದಿತ್ತು. ಕೆಲವರು ಸಿನಿಮಾ ನೋಡಬೇಕೋ ಬೇಡವೋ ಎನ್ನುವ ಗೊಂದಲದಲ್ಲಿ ಇದ್ದಾಗಲೇ 'ಮ್ಯಾಕ್ಸ್' ಎಂಟ್ರಿ ಆಗಿತ್ತು. ಹಾಗಾಗಿ ಸಹಜವಾಗಿಯೇ ಇದೇ 'ಯುಐ' ಚಿತ್ರದ ಮೇಲೆ ಪರಿಣಾಮ ಬೀರಿತ್ತು. ಆದರೆ ವಿದೇಶಗಳಲ್ಲಿ ಕಲ್ಕಿ ಹಾಗೂ ಸತ್ಯ ದರ್ಬಾರ್ ಜೋರಾಗಿದೆ.

More from Filmibeat

English summary
Christmas Box Office clash; Sudeep action movie beats Upendra's UI;
Read more about: ui max box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X