For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರಕ್ಕೆ ಹೋಲುತ್ತಿದೆ ಹಿಂದಿ ಸಿನಿಮಾದ ಪೋಸ್ಟರ್

  |
  ಒಂದು ಹಿಂದಿ ಮೊಟ್ಟೆಯ ಕಥೆ ಕೂಡ ರಾಜ್ ಬಿ ಶೆಟ್ಟಿಯವರ ಕಥೆನೇ | FILMIBEAT KANNADA

  ಇತ್ತೀಚಿಗೆ ಕನ್ನಡ ಸಿನಿಮಾಗಳ ಕೆಲವು ಪೋಸ್ಟರ್ ಗಳು ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳ ಫೋಟೋಗಳಿಗೆ ಹೋಲಿಕೆ ಆಗುತ್ತಿದ್ದವು. ಇದೀಗ ಕನ್ನಡ ಚಿತ್ರವೊಂದರ ಮಾದರಿಯಲ್ಲಿ ಹಿಂದಿಯ ಒಂದು ಸಿನಿಮಾ ಪೋಸ್ಟರ್ ಹೊರಬಂದಿದೆ.

  'ಉಜ್ಡಾ ಚಮನ್' ಎಂಬ ಹಿಂದಿಯ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್ ಕನ್ನಡದ 'ಒಂದು ಮೊಟ್ಟೆಯ ಕಥೆ' ಸಿನಿಮಾದ ಫೋಟೋಗಳಿಗೆ ಹೋಲಿಕೆ ಆಗುತ್ತಿದೆ. ಎರಡು ಪೋಸ್ಟರ್ ಗಳು ಸೇಮ್ ಟು ಸೇಮ್ ಇವೆ.

  ಹಾಲಿವುಡ್ ಚಿತ್ರದ ಪೋಸ್ಟರ್ ಗೆ ಹೋಲುತ್ತಿದೆ 'ಬುದ್ದಿವಂತ 2' ಪೋಸ್ಟರ್

  ಸಿನಿಮಾದ ಪೋಸ್ಟರ್ ಮಾತ್ರವಲ್ಲದೆ, ಸಿನಿಮಾದ ವಿಷಯ ಕೂಡ ಒಂದೇ ಆಗಿದೆ. 'ಒಂದು ಮೊಟ್ಟೆಯ ಕಥೆ' ಬೋಳು ತಲೆ ಹೊಂದಿರುವ ಯುವಕನ ಕಥೆಯಾಗಿತ್ತು. ಇದೀಗ 'ಉಜ್ಡಾ ಚಮನ್' ಕೂಡ ಅದೇ ವಿಷಯದ ಮೇಲೆ ನಿರ್ಮಾಣ ಆಗುತ್ತಿದೆ.

  ಸಿನಿಮಾದ ತೀಮ್ ಗೆ ತಕ್ಕ ಹಾಗೆ, ಬೋಳು ತಲೆಯ ಯುವಕ, ತರಹೇವಾರಿ ಹೇರ್ ಸ್ಟೈಲ್ ಮಾಡಿಕೊಂಡಿರುವ ಜನರ ನಡುವೆ ಬೇಸರದಲ್ಲಿ ನಿಂತುಕೊಂಡಿದ್ದಾನೆ. ಇಲ್ಲಿನ ನಾಯಕ ಧರಿಸಿರುವ ಅಂಗಿ, ಹಾಕಿರುವ ಬ್ಯಾಕ್ ಕೂಡ ರಾಜ್ ಬಿ ಶೆಟ್ಟಿ ಲುಕ್ ತರ ಇದೆ.

  'ರಾಬರ್ಟ್', 'ನಾರಾಯಣ' ಬಿಟ್ಟಾಕಿ 'ಪೈಲ್ವಾನ್' ಬಗ್ಗೆಯೂ ಶುರುವಾಯ್ತು ಚರ್ಚೆ!

  ಸನ್ನಿ ಸಿಂಗ್ 'ಉಜ್ಡಾ ಚಮನ್' ಸಿನಿಮಾದ ನಾಯಕನಾಗಿದ್ದಾರೆ. ಈ ಸಿನಿಮಾ ನವೆಂಬರ್ 9 ರಂದು ಬಿಡುಗಡೆ ಆಗುತ್ತಿದೆ. ಮತ್ತೊಂದು ಕಡೆ, ಇದೇ ವಿಷಯದ ಮೇಲೆ ಹಿಂದಿಯಲ್ಲಿಯೇ ಆಯುಷ್ಮಾನ್ ಕುರಾನ್ 'ಬಾಲ' ಸಿನಿಮಾ ಮಾಡಿದ್ದರು.

  English summary
  Ujda Chaman hindi movie poster similar to 'Ondu Motteya Kathe' kannada movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X