twitter
    For Quick Alerts
    ALLOW NOTIFICATIONS  
    For Daily Alerts

    ವಿಜಯ್ ದೇವರಕೊಂಡ ನೋಡಿದ ಮೊದಲ ಕನ್ನಡ ಚಿತ್ರ ರಕ್ಷಿತ್ ಅವರದ್ದು

    |

    ನಟ ವಿಜಯ್ ದೇವರಕೊಂಡ ಹಿಟ್ ಮೇಲೆ ಹಿಟ್ ನೀಡುತ್ತಿದ್ದಾರೆ. ಅವರ ಮುಂದಿನ ಸಿನಿಮಾ 'ಡಿಯರ್ ಕಾಮ್ರೇಡ್' ಜುಲೈ 26 ರಂದು ಬಿಡುಗಡೆಯಾಗುತ್ತಿದೆ.

    ಈ ಸಿನಿಮಾದ ಪ್ರಚಾರ ಕಾರ್ಯಕ್ರಮ ಇಂದು (ಜುಲೈ 12) ಬೆಂಗಳೂರಿನಲ್ಲಿ ನಡೆಯಿತು. ಈ ವೇಳೆ ಅನೇಕ ವಿಷಯಗಳ ಬಗ್ಗೆ ವಿಜಯ್ ದೇವರಕೊಂಡ ಮಾತನಾಡಿದರು. ನೀವು ಯಾವುದಾರು ಕನ್ನಡ ಸಿನಿಮಾ ನೋಡಿದ್ದೀರಾ..? ಎಂಬ ಪ್ರಶ್ನೆಗೆ ಮಂದಹಾಸದೊಂದಿಗೆ ವಿಜಯ ದೇವರಕೊಂಡ ಉತ್ತರ ನೀಡಿದರು.

    'ಲಿಪ್ ಲಾಕ್ ಅಂದ್ರೆ ನಂಗೆ ಆಗಲ್ಲ' : ಮುತ್ತಿನ ಅರ್ಥ ಹೇಳಿದ ದೇವರಕೊಂಡ 'ಲಿಪ್ ಲಾಕ್ ಅಂದ್ರೆ ನಂಗೆ ಆಗಲ್ಲ' : ಮುತ್ತಿನ ಅರ್ಥ ಹೇಳಿದ ದೇವರಕೊಂಡ

    ವಿಜಯ್ ದೇವರಕೊಂಡ ಕೆಲವು ಕನ್ನಡ ಸಿನಿಮಾಗಳನ್ನು ನೋಡಿದ್ದಾರಂತೆ. ಅವರು ಮೊದಲು ನೋಡಿದ್ದು, 'ಉಳಿದವರು ಕಂಡಂತೆ' ಸಿನಿಮಾ ಎಂದು ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ರಕ್ಷಿತ್ ನಾಯಕರಾಗಿದ್ದು, ಅವರೇ ನಿರ್ದೇಶನ ಕೂಡ ಮಾಡಿದ್ದರು. ಈ ಸಿನಿಮಾ ತಮಿಳಿಗೆ ರಿಮೇಕ್ ಆಗಿದೆ.

    ulidavaru kandante is the first kannada movie watched by vijay devarakonda

    ಇನ್ನು ಕಾರ್ಯಕ್ರಮದಲ್ಲಿ ಕನ್ನಡದ 'ಕೆಜಿಎಫ್' ಬಗ್ಗೆ ವಿಜಯ್ ದೇವರಕೊಂಡ ಮೆಚ್ಚುಗೆ ಮಾತನ್ನು ಆಡಿದರು. ವಿಜಯ್ ದೇವರಕೊಂಡ ಅವರ 'ಡಿಯರ್ ಕಾಮ್ರೇಡ್' ಚಿತ್ರದ ಕನ್ನಡ ಟ್ರೇಲರ್ ಅನ್ನು ಯಶ್ ಅವರೇ ಲಾಂಚ್ ಮಾಡುತ್ತಿದ್ದಾರೆ.

    'ಡಿಯರ್ ಕಾಮ್ರೇಡ್' ಸಿನಿಮಾ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಏಕಕಾಲದಲ್ಲಿ ಬೇರೆ ಭಾಷೆಯ ಜೊತೆಗೆ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಇದಾಗಿದೆ.

    English summary
    'Ulidavaru Kandante' is the first kannada movie watched by telugu actor Vijay Devarakonda.
    Friday, July 12, 2019, 20:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X