'ಉಳಿದವರು ಕಂಡಂತೆ' ಎಲ್ಲ ವರ್ಗದವರ ಚಿತ್ರ: ರಕ್ಷಿತ್

By Rajendra

Next »

« Previous

ಕಳೆದ ಒಂದು ವಾರದಿಂದ ಚೆನ್ನೈನಲ್ಲಿದ್ದ ಚಿತ್ರದ ನಿರ್ದೇಶಕ ಕಮ್ ನಟ ರಕ್ಷಿತ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಗೆ ಕೊಂಚ ತಡವಾಗಿ ಬಂದರು. ನೇರವಾಗಿ ಅವರು ಏರ್ ಪೋರ್ಟ್ ನಿಂದ ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು. ನಾನು ಯಾವ ರೀತಿ ಕನಸು ಕಂಡಿದ್ದೆನೋ ಅದೇ ತರಹ ಚಿತ್ರ ಮೂಡಿಬಂದಿದೆ.

ಚಿತ್ರದ ಟ್ರೇಲರ್ ಈಗಾಗಲೇ ಬಹಳಷ್ಟು ಮಂದಿಗೆ ಇಷ್ಟವಾಗಿದೆ. ಟ್ರೇಲರ್ ಇಷ್ಟವಾದವರಿಗೆ ಚಿತ್ರವೂ ಖಂಡಿತ ಇಷ್ಟವಾಗುತ್ತದೆ. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ಚಿತ್ರದ ಹಾಡುಗಳು. ಅಜನೀಶ್ ಲೋಕನಾಥ್ ಅವರ ಸಂಗೀತದ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿವೆ. ಹಿನ್ನೆಲೆ ಸಂಗೀತವೂ ಅಷ್ಟೇ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ. ['ಉಳಿದವರು ಕಂಡಂತೆ' ಆಂಡ್ರಾಯ್ಡ್ ಆಪ್]

'ಉಳಿದವರು ಕಂಡಂತೆ' ಲೋಗೋ ವಿನ್ಯಾಸ ಮಾಡಿದ್ದು ಸಂತೋಷ್ ರಾಧಾಕೃಷ್ಣನ್. ವಿಎಫ್ಎಕ್ಸ್ ಸಹ ಅವರದೇ. ಚಿತ್ರತಂಡದ ಪ್ರತಿ ಪಾತ್ರವೂ ನಾನು ಯೋಚನೆ ಮಾಡುವುದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ. ಕಿಶೋರ್, ತಾರಾ, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ ಹೀಗೆ ಚಿತ್ರತಂಡ ಪ್ರತಿಯೊಬ್ಬರೂ ಅದ್ಭುತವಾಗಿ ಅಭಿನಯಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಚಿತ್ರದಲ್ಲಿ ಧೂಮಪಾನ ಸನ್ನಿವೇಶಗಳು ಅವೆಲ್ಲವೂ ಬಿಟ್ಟರೆ ಸರಿಸುಮಾರು 2 ಗಂಟೆ 25 ನಿಮಿಷ ಕಾಲಾವಧಿಯದ್ದಾಗಿದೆ. ಚಿತ್ರದ ಸ್ಕ್ರಿಪ್ಟ್ ಬರೆದಾಗ ಅದು 120 ಪುಟಗಳಷ್ಟಿತ್ತು. ನನ್ನ ಆತ್ಮೀಯರಿಗೆ ತೋರಿಸಿದಾಗ ಅವರ ಅಭಿಪ್ರಾಯ ಸಂಗ್ರಹಿಸಿ 111 ಪೇಜ್ ಗೆ ಇಳಿಸಲಾಯಿತು.

ಈ ಚಿತ್ರ ಮಲ್ಟಿಫ್ಲೆಕ್ಸ್ ಆಡಿಯನ್ಸ್ ಗೆ ಅಷ್ಟೇ ಅಲ್ಲ. ಎಲ್ಲಾ ರೀತಿಯ ಆಡಿಯನ್ಸ್ ಗೂ ಇಷ್ಟವಾಗುತ್ತದೆ. ಕೇವಲ ಮನರಂಜನೆ ಬಯಸುವವರಿಗೂ, ಅದೇ ರೀತಿ ಸೂಕ್ಷ್ಮ ಮನಸ್ಸಿನ ಪ್ರೇಕ್ಷಕರಿಗೂ ಚಿತ್ರ ಖಂಡಿತ ಇಷ್ಟವಾಗುತ್ತದೆ. ಚಿತ್ರವನ್ನು ಒಮ್ಮೆ ನೋಡಿದರೆ ಒಂದು ತರಹ, ಇನ್ನೊಮ್ಮೆ ನೋಡಿದರೆ ಇನ್ನೊಂದು ಭಾವ, ಮತ್ತೆ ಮತ್ತೆ ನೋಡಿದರೆ ಬೇರೆ ಬೇರೆ ಅನುಭನ ನಿಮ್ಮದಾಗುತ್ತದೆ.

Next »

« Previous

More from Filmibeat

English summary
Rakshit Shetty debut directional Kannada movie Ulidavaru Kandante (As seen by the rest) is slated for release on 28th March, 2014. The movie released overseas by Reelbox Media Entertainment Pvt. Ltd. in the countries of Australia, UK, Germany, US, Dubai and New Zealand among others. Kishore, Tara, Achuth Kumar, Yagna Shetty, and Rakshit Shetty as well, are in the lead role.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X