ಪ್ರೇಮ್ 'ಕೆಡಿ' ಸಿನಿಮಾದ ನಟಿಯನ್ನು ದುಬಾರಿ 'ನೈಟ್ ಗರ್ಲ್' ಅಂದ ಭೂಪ ಯಾರು? ವಿವಾದ ಸೃಷಿಸಿದ ಪೋಸ್ಟ್‌ನಲ್ಲೇನಿದೆ?

By ಫಿಲ್ಮಿಬೀಟ್ ಡೆಸ್ಕ್

ಜೋಗಿ ಪ್ರೇಮ್ 'ಕೆಡಿ' ಸಿನಿಮಾದ ಬಹುತೇಕ ಶೂಟಿಂಗ್‌ನಲ್ಲಿ ಮುಗಿಸಿ, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಧ್ರುವ ಸರ್ಜಾ ನಟಿಸುತ್ತಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬಾಲಿವುಡ್ ತಾರೆಯರ ದೊಡ್ಡ ಬಳಗವೇ ಇದೆ. ಕೆಲವು ತಿಂಗಳ ಹಿಂದಷ್ಟೇ ಬಾಲಿವುಡ್‌ನಿಂದ ಕೇವಲ ಐಟಂ ಸಾಂಗ್ ಒಂದಕ್ಕೆ ಬಂದು ಹೆಜ್ಜೆ ಹಾಕಿ ಹೋಗಿದ್ದರು. ಆ ನಟಿಯ ಹೆಸರೀಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಕೇವಲ ವಿಶೇಷವಾದ ಹಾಡುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ದೇಶಾದ್ಯಂತ ಸಂಚಲನ ಸೃಷ್ಟಿಸಿದ ನಟಿ ಆ ನಟಿಯೇ ನೋರಾ ಫತೇಹಿ. ಇದೇ ನಟಿ ಪ್ರೇಮ್ ನಿರ್ದೇಶಿಸುತ್ತಿರುವ 'ಕೆಡಿ' ಸಿನಿಮಾದ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕೇವಲ ಐಟಂ ಹಾಡುಗಳಿಂದಲೇ ಫೇಮಸ್ ಆಗಿರುವ ನಟಿಯೀಕೆ.

Umair Sandhu comment on Prem s KD movie actress Nora Fatehi is that she is most expensive Night Girl

ಇದೇ ನೋರಾ ಫತೇಹಿ ವಿರುದ್ಧ ಗಂಭೀರವಾದ ಆರೋಪ ಮಾಡಲಾಗಿದೆ. ಈಕೆ ಅತೀ ದುಬಾರಿ 'ನೈಟ್ ಗರ್ಲ್' ಅಂತ ಎಕ್ಸ್‌ ಖಾತೆಯಲ್ಲಿ ಪೋಸ್ ಮಾಡಿ ದೂರಲಾಗಿದೆ. ಇಷ್ಟೇ ಅಲ್ಲದೆ ಒಂದು ರಾತ್ರಿಗೆ 4 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾಳೆ ಅಂತ ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಷ್ಟಕ್ಕೂ ನೋರಾ ಫತೇಹಿ ವಿರುದ್ಧ ಏನಿದು ಆರೋಪ? ಮಾಡಿದ್ದು ಯಾರು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ನೋರಾ ಫತೇಹಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಕ್ಕೂ ಮುನ್ನ ಮಾಡೆಲ್ ಆಗಿ ಫೇಮಸ್ ಆಗಿದ್ದರು. ಬಳಿಕ ಈಕೆಯ ಗ್ಲಾಮರ್ ಲುಕ್ ಸಿನಿಮಾ ಮಂದಿಯನ್ನು ಸೆಳೆಯಿತು. ಸಿನಿಮಾಗಳಲ್ಲಿ ಈಕೆಗೆ ನಟನೆಗೆ ಹೆಚ್ಚು ಅವಕಾಶಗಳು ಸಿಗದೇ ಇದ್ದರೂ, ಐಟಂ ಹಾಡುಗಳಿಗೆ, ಸಿನಿಮಾದಲ್ಲಿ ಬರುವ ಸ್ಪೆಷಲ್ ಸಾಂಗ್‌ಗಳಿಗೆ ಭಾರೀ ಬೇಡಿಕೆಯಿದೆ. ಅದೇ ಕಾರಣಕ್ಕೆ ಪ್ರೇಮ್ 'ಕೆಡಿ' ಮೂಲಕ ಕನ್ನಡಕ್ಕೂ ಕರೆದುಕೊಂಡು ಬಂದಿದ್ದರು.

ಇದೇ ನಟಿ ನೋರಾ ಫತೇಹಿ ವಿರುದ್ಧ ವಿವಾದಾತ್ಮಕ ವಿಮರ್ಶಕ ಟ್ವೀಟ್ (ಎಕ್ಸ್) ಮಾಡಿ ಸಂಚಲನ ಸೃಷ್ಟಿಸಿದ್ದಾನೆ. ಕಳೆದ ಎರಡು ದಿನಗಳಿಂದ ಈ ಎಕ್ಸ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಆ ವಿವಾದಾತ್ಮಕ ವಿಮರ್ಶಕ ಮತ್ಯಾರೂ ಅಲ್ಲ ಉಮೈರ್ ಸಂಧು. ಈ ಹಿಂದೆ ಕೂಡ ಬಾಲಿವುಡ್‌ ನಟಿಯರ ವಿರುದ್ಧ ಇಂತಹದ್ದೇ ಬೇಸ್‌ ಲೆಸ್ ಪೋಸ್ಟ್‌ಗಳನ್ನು ಮಾಡಿ, ವಿವಾದಕ್ಕೆ ಸಿಕ್ಕಿಕೊಳ್ಳುತ್ತಲೇ ಇದ್ದಾನೆ. ಈ ನೋರಾ ಫತೇಹಿ ಹಿಂದೆ ಬಿದ್ದಿದ್ದಾರೆ.

Umair Sandhu comment on Prem s KD movie actress Nora Fatehi is that she is most expensive Night Girl

ಬಾಲಿವುಡ್ ಸಿನಿಮಾ ವಿಮರ್ಶಕ ಹಾಗೂ ವಿದೇಶಿ ಸೆನ್ಸಾರ್ ಮಂಡಳಿ ಮಂಡಳಿ ಸದಸ್ಯ ಎಂದು ಹೇಳಿಕೊಂಡಿರುವ ಉಮೈರ್ ಸಂಧು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ಹೈ ಪ್ರೋಫೈಲ್ ವ್ಯಭಿಚಾರ ಮಾಡುತ್ತಿದ್ದಾರೆಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ನೋರಾ ಫತೇಹಿ ಭಾರತದ ಅತೀ ದುಬಾರಿ 'ನೈಟ್ ಗರ್ಲ್' ಎಂದು ಹೇಳಿ ದೊಡ್ಡ ವಿವಾದವನ್ನೇ ಸೃಷ್ಟಿಸಿ ಮಾಡಿದ್ದಾರೆ.

ಇಷ್ಟೇ ಅಲ್ಲದೆ "ಪ್ರತಿ ರಾತ್ರಿಗೆ 4 ಕೋಟಿ ಪಡೆಯುತ್ತಾರೆ. ಅದರಲ್ಲೂ ಮಿಡಲ್ ಈಸ್ಟ್ ದೇಶಗಳ ಗ್ರಾಹಕರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ" ಎಂದು ಉಮೈರ್ ಸಂಧು ಅದೇ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ವಿವಾದಾತ್ಮಕ ಟ್ವೀಟ್ ಕಳೆದೆರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಪೋಸ್ಟ್‌ಗೆ ನೆಟ್ಟಿಗರು ಉಮೈರ್ ಸಂಧುರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಮೆಂಟ್ ಮೂಲಕ ಬಾಯಿಗೆ ಬಂದಂತೆ ಉಗಿಯುತ್ತಿದ್ದಾರೆ. ಅಂದ್ಹಾಗೆ ಉಮೈರ್ ಸಂಧು ಹೀಗೆ ನಟಿಯ ಬಗ್ಗೆ ಪೋಸ್ಟ್ ಮಾಡುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹೀಗೆ ಪೋಸ್ಟ್ ಮಾಡಿ ಉಗಿಸಿಕೊಂಡಿದ್ದಾರೆ.

More from Filmibeat

English summary
Umair Sandhu bad comment on Bollywood actress Nora Fatehi
Read more about: actress bollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X