ಚಿಕ್ಕಣ್ಣನನ್ನು 'ಹೀರೋ' ಮಾಡ್ತಿದ್ದಾರೆ 'ರಾಬರ್ಟ್' ನಿರ್ಮಾಪಕ
ಹಾಸ್ಯ ನಟರು ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುವುದು ಆಗಾಗ ನಡೆಯುತ್ತಿರುತ್ತದೆ. ಇದೀಗ ನಟ ಚಿಕ್ಕಣ್ಣ ಕೂಡ ಹೀರೋ ಆಗುತ್ತಿದ್ದಾರೆ.
ಚಿಕ್ಕಣ್ಣ ಹೀರೋ ಆಗುತ್ತಾರೆ ಎನ್ನುವ ಸುದ್ದಿ ಪದೇ ಪದೇ ಕೇಳಿಬರುತ್ತಿತ್ತು. ಇದೀಗ ಆ ಸಮಯ ನಿಜಕ್ಕೂ ಬಂದಿದೆ. ಇತ್ತೀಚಿಗಷ್ಟೆ ನಿರ್ದೇಶಕ ಮಂಜು ಮಾಂಡವ್ಯ ಈ ಬಗ್ಗೆ ಮಾತನಾಡಿ, ಚಿಕ್ಕಣ್ಣನ ಸಿನಿಮಾವನ್ನು ನಿರ್ದೇಶನ ಮಾಡುವುದಾಗಿ ತಿಳಿಸಿದ್ದರು.
ಈ ಸಿನಿಮಾವನ್ನು ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಸದ್ಯ 'ರಾಬರ್ಟ್' ಸಿನಿಮಾಗೆ ಹಣ ಹಾಕಿರುವ ಉಮಾಪತಿ ಆ ನಂತರ ಈ ಸಿನಿಮಾ ಮಾಡುತ್ತಿದ್ದಾರೆ. ಈ ಹಿಂದೆ 'ಹೆಬ್ಬುಲಿ' ಹಾಗೂ 'ಒಂದಲ್ಲ ಎರಡಲ್ಲ' ಚಿತ್ರಗಳು ಉಮಾಪತಿ ಫಿಲ್ಮ್ ಬ್ಯಾನರ್ ನಿಂದ ಬಂದಿವೆ.

ಮಂಜು ಮಾಂಡವ್ಯ ನಿರ್ದೇಶನದ ಸಿನಿಮಾಗಳಲ್ಲಿ ಚಿಕ್ಕಣ್ಣ ಕಾಮಿಡಿ ತುಂಬ ಚೆನ್ನಾಗಿ ಇರುತ್ತಿತ್ತು. ಚಿಕ್ಕಣ್ಣನ ಕಾಮಿಡಿ ಟೈಮಿಂಗ್ ಅನ್ನು ಮಂಜು ಮಾಂಡವ್ಯ ತುಂಬ ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಅಲ್ಲದೆ, ಮಂಜು ಮಾಂಡವ್ಯ ನಾಯಕನಾಗಿ ನಟಿಸಿದ 'ಶ್ರೀ ಭರತ ಬಾಹುಬಲಿ' ಚಿತ್ರದಲ್ಲಿಯೂ ಚಿಕ್ಕಣ್ಣ ಇದ್ದಾರೆ.
ಹೀಗಾಗಿ, ಈ ಕಾಂಬಿನೇಶನ್ ಮತ್ತೆ ಮುಂದುವರೆಯುತ್ತಿದೆ. ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಸಿನಿಮಾಗೆ ಮಂಜು ಮಾಂಡವ್ಯ ನಿರ್ದೇಶನ ಹಾಗೂ ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











