»   » ದರ್ಶನ್ - ತರುಣ್ ಸುಧೀರ್ ಸಿನಿಮಾಗೆ ನಿರ್ಮಾಪಕರು ಸಿಕ್ಕರು

ದರ್ಶನ್ - ತರುಣ್ ಸುಧೀರ್ ಸಿನಿಮಾಗೆ ನಿರ್ಮಾಪಕರು ಸಿಕ್ಕರು

Posted By:
Subscribe to Filmibeat Kannada
ದರ್ಶನ್ - ತರುಣ್ ಸುಧೀರ್ ಸಿನಿಮಾಗೆ ನಿರ್ಮಾಪಕರು ಸಿಕ್ಕರು | Filmibeat Kannada

ಕಿಚ್ಚ ಸುದೀಪ್ ಅವರ 'ಹೆಬ್ಬುಲಿ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಉಮಾಪತಿ ಅದರ ನಂತರ 'ರಾಮಾ ರಾಮಾ ರೇ' ಖ್ಯಾತಿಯ ಡಿ.ಸತ್ಯ ಪ್ರಕಾಶ್ ಅವರ ಹೊಸ ಸಿನಿಮಾಗೆ ಬಂಡವಾಳ ಹಾಕಲು ಮುಂದಾಗಿದ್ದರು. ಇದರ ಜೊತೆಗೆ ದರ್ಶನ್ ಅವರ ಒಂದು ಸಿನಿಮಾವನ್ನು ಸಹ ನಿರ್ಮಾಪಕ ಉಮಾಪತಿ ಪ್ರೊಡ್ಯೂಸ್ ಮಾಡುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ ಈಗ ಅದು ಪಕ್ಕಾ ಆಗಿದೆ.

'ಕರಿಯ' ಸಿನಿಮಾದ ನಂತರ ದರ್ಶನ್ ಅವರಿಗೆ ಮತ್ತೊಮ್ಮೆ ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಾರೆ ಎನ್ನುವ ಮಾತಿತ್ತು. ಅದೇ ಚಿತ್ರವನ್ನು ಉಮಾಪತಿ ನಿರ್ಮಾಣ ಮಾಡಬೇಕಿತ್ತು. ಈ ಸಿನಿಮಾಗೆ 'ಆಂಜನೇಯ' ಎಂಬ ಹೆಸರು ಇಟ್ಟಿದ್ದಾರೆ ಎಂಬ ಗಾಸಿಪ್ ಇತ್ತು. ಆದರೆ ಈಗ ಪ್ಲಾನ್ ಬದಲಾಗಿದೆ. ಉಮಾಪತಿ ಈಗ ಜೋಗಿ ಪ್ರೇಮ್ ಬದಲು ನಿರ್ದೇಶಕ ತರುಣ್ ಸುಧೀರ್ ಅವರ ಸಿನಿಮಾಗೆ ಬಂಡವಾಳ ಹಾಕಲಿದ್ದಾರೆ.

Umapathi will produce actor darshans movie

'ಚೌಕ' ಸಿನಿಮಾದ ದೊಡ್ಡ ಯಶಸ್ಸಿನ ನಂತರ ತರುಣ್ ಸುಧೀರ್, ದರ್ಶನ್ ಜೊತೆಗೆ ಸಿನಿಮಾ ಮಾಡಲಿದ್ದಾರೆ. 'ಚೌಕ' ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಿದ್ದ ದರ್ಶನ್ ಅವರಿಗೆ ಮತ್ತೆ ತರುಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ದರ್ಶನ್ ಅವರ 53ನೇ ಸಿನಿಮಾವಾಗಿದೆ. ದರ್ಶನ್ ಅವರ ಈ ಸಿನಿಮಾ ಸದ್ಯದಲ್ಲಿಯೇ ಸೆಟ್ಟೆರಲಿದೆ. ಉಳಿದಂತೆ, ಸದ್ಯ 'ಕುರುಕ್ಷೇತ್ರ' ಸಿನಿಮಾದ ಡಬ್ಬಿಂಗ್ ನಲ್ಲಿ ದರ್ಶನ್ ಬಿಜಿ ಇದ್ದಾರೆ. ಅದರ ಜೊತೆ ಜೊತೆಗೆ 'ಯಜಮಾನ' ಸಿನಿಮಾದ ಚಿತ್ರೀಕರಣ ಬೇರೆ ನಡೆಯುತ್ತಿದೆ. ನಿರ್ಮಾಪಕ ಸಂದೇಶ್ ನಾಗರಾಜ್ ಬ್ಯಾನರ್ ನಲ್ಲಿ ಕೂಡ ದರ್ಶನ್ ಒಂದು ಸಿನಿಮಾ ಮಾಡುತ್ತಾರೆ.

ದರ್ಶನ್ ಹೊಸ ಚಿತ್ರದ ಸತ್ಯ ಬಿಚ್ಚಿಟ್ಟ ತರುಣ್ ಸುಧೀರ್

English summary
'Hebbuli' movie fame producer Umapathi will produce actor Darshan's new movie. The movie is directed by Tarun Sudheer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X