For Quick Alerts
  ALLOW NOTIFICATIONS  
  For Daily Alerts

  ಇಬ್ಬರು ದೊಡ್ಡ ಹೀರೊಗಳ ಜೊತೆ ಉಮಾಪತಿ ಶ್ರೀನಿವಾಸ್ ಸಿನಿಮಾ: ಯಾರದು?

  |

  ಉಮಾಪತಿ ಶ್ರೀನಿವಾಸ್‌ಗೌಡ, ಮಹಾತ್ವಾಕಾಂಕ್ಷಿ ಮತ್ತು ಸಾಧನೆಯ ಛಲವುಳ್ಳ ಕನ್ನಡ ಸಿನಿಮಾ ನಿರ್ಮಾಪಕ. ಈಗಾಗಲೇ 'ಹೆಬ್ಬುಲಿ', 'ರಾಬರ್ಟ್', 'ಒಂದಲ್ಲಾ ಎರಡಲ್ಲ' ಅಂಥಹಾ ಉತ್ತಮ ಸಿನಿಮಾಗಳನ್ನು ಕನ್ನಡಕ್ಕೆ ನೀಡಿರುವ ಉಮಾಪತಿ ಇನ್ನಷ್ಟು ಗುಣಮಟ್ಟದ ಸಿನಿಮಾಗಳನ್ನು ನೀಡುವ ಉತ್ಸಾಹದಲ್ಲಿದ್ದಾರೆ.

  ಪುನೀತ್, ಯಶ್ ಜೊತೆ ಸಿನಿಮಾ ಮಾಡಲು ಮುಂದಾದ ಉಮಾಪತಿ | Umapathy Srinivasa Gowda | Filmibeat Kannada

  ಇದೀಗ ಶ್ರೀಮುರಳಿ ನಟಿಸುತ್ತಿರುವ 'ಮದಗಜ' ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಉಮಾಪತಿ ಕನ್ನಡದ ಇಬ್ಬರು ದೊಡ್ಡ ಸ್ಟಾರ್‌ಗಳೊಟ್ಟಿಗೆ ಸಿನಿಮಾ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಒಬ್ಬರು ಸ್ಟಾರ್ ನಟರೊಂದಿಗೆ ಈಗಾಗಲೇ ಮಾತುಕತೆಯನ್ನೂ ಮುಗಿಸಿದ್ದಾರೆ.

  ಭಾರಿ ಬಜೆಟ್ ಸಿನಿಮಾಗಳನ್ನು ಮಾಡುವಲ್ಲಿ ಖ್ಯಾತರಾಗಿರುವ ಉಮಾಪತಿ ಶ್ರೀನಿವಾಸ್ ನಟ ಪುನೀತ್ ರಾಜ್‌ಕುಮಾರ್ ಜೊತೆಗೆ ಸಿನಿಮಾ ಮಾಡಲಿದ್ದಾರೆ. ಈ ಬಗ್ಗೆ ಪುನೀತ್ ರಾಜ್‌ಕುಮಾರ್‌ ಜೊತೆಗೆ ಮಾತುಕತೆ ಮಾಡಿದ್ದು, ಸಿನಿಮಾದ ಬಗ್ಗೆ ಇನ್ನಿತರ ವಿಷಯಗಳು ಕೆಲವು ದಿನಗಳಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ.

  ಯಶ್‌ ಜೊತೆಗೂ ಸಿನಿಮಾ ಮಾಡಲಿದ್ದಾರೆ ಉಮಾಪತಿ

  ಯಶ್‌ ಜೊತೆಗೂ ಸಿನಿಮಾ ಮಾಡಲಿದ್ದಾರೆ ಉಮಾಪತಿ

  ಪುನೀತ್ ರಾಜ್‌ಕುಮಾರ್ ಮಾತ್ರವೇ ಅಲ್ಲದೆ ನಟ ಯಶ್ ಜೊತೆಗೂ ಭಾರಿ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಾಣ ಮಾಡಲು ಉಮಾಪತಿ ಶ್ರೀನಿವಾಸ್ ಗೌಡ ಯೋಜನೆ ರೂಪಿಸಿದ್ದಾರೆ. ಕನ್ನಡದ ಸಿನಿಮಾವನ್ನು ರಿಚ್ ಆಗಿ ನಿರ್ಮಾಣ ಮಾಡುವ ಕನಸು ಉಮಾಪತಿಗೆ ಇದ್ದು ಈ ಕುರಿತು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ ಉಮಾಪತಿ ಶ್ರೀನಿವಾಸ್ ಗೌಡ.

  175 ಕೋಟಿ ವೆಚ್ಚದ ಫಿಲಂ ಸಿಟಿ ನಿರ್ಮಿಸುತ್ತಿದ್ದಾರೆ

  175 ಕೋಟಿ ವೆಚ್ಚದ ಫಿಲಂ ಸಿಟಿ ನಿರ್ಮಿಸುತ್ತಿದ್ದಾರೆ

  ಕನ್ನಡ ಸಿನಿಮಾಗಳು, ಧಾರಾವಾಹಿಗಳನ್ನು ಗಮನದಲ್ಲಿಟ್ಟುಕೊಂಡು, ಮಿನಿ ಫಿಲಂ ಸಿಟಿಯನ್ನೇ ನಿರ್ಮಾಣ ಮಾಡುತ್ತಿದ್ದಾರೆ ಉಮಾಪತಿ ಶ್ರೀನಿವಾಸ್. ಬೆಂಗಳೂರು-ಕನಕಪುರ ರಸ್ತೆಯಲ್ಲಿ 25 ಎಕರೆ ಜಮೀನಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಫಿಲಂ ಸಿಟಿ ನಿರ್ಮಾಣಕ್ಕೆ 175 ಬಂಡವಾಳ ಹೂಡುತ್ತಿದ್ದಾರೆ. ಗುದ್ದಲಿ ಪೂಜೆ ಈಗಾಗಲೇ ನೆರವೇರಿಸಿದ್ದು ಕಾಮಗಾರಿ ಚಾಲ್ತಿಯಲ್ಲಿದೆ. 'ಹೆಬ್ಬುಲಿ' ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನೆರೆ ರಾಜ್ಯದ ಫಿಲಂ ಸಿಟಿಗೆ ಹೋಗಿದ್ದೆವು. ಅಲ್ಲಿ ನಮಗೆ ಸೂಕ್ತ ಸಮಯಕ್ಕೆ ಫ್ಲೋರ್ ಕೊಡುತ್ತಿರಲಿಲ್ಲ ಇನ್ನೂ ಹಲವು ಸಮಸ್ಯೆಗಳನ್ನು ಎದುರಿಸಿದೆವು. ಆಗಲೇ ಯೋಚಿಸಿದ್ದೆ ಕರ್ನಾಟಕದಲ್ಲಿ ಒಂದು ಸುಸಜ್ಜಿತ ಫಿಲಂ ಸಿಟಿ ನಿರ್ಮಾಣ ಮಾಡಬೇಕೆಂದು ಎಂದಿದ್ದಾರೆ ಉಮಾಪತಿ ಶ್ರೀನಿವಾಸ ಗೌಡ.

  ಗುಣಮಟ್ಟದ ಸಿನಿಮಾ ನೀಡಬೇಕೆಂಬ ಉತ್ಸಾಹ

  ಗುಣಮಟ್ಟದ ಸಿನಿಮಾ ನೀಡಬೇಕೆಂಬ ಉತ್ಸಾಹ

  ಕನ್ನಡ ಸಿನಿಮಾಗಳು ಬೇರೆ ಭಾಷೆಯ ಸಿನಿಮಾಗಳೊಂದಿಗೆ ಗುಣಮಟ್ಟದಲ್ಲಿ ಸ್ಪರ್ಧೆ ನೀಡಬೇಕು. ಹೆಚ್ಚು-ಹೆಚ್ಚು ಜನರನ್ನು ತಲುಪಬೇಕು ಮಾರುಕಟ್ಟೆ ದೊಡ್ಡದಾಗಬೇಕು ಎಂಬ ಉದ್ದೇಶದಿಂದ ಉಮಾಪತಿ ದುಬಾರಿ ವೆಚ್ಚದ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಮತ್ತೊಂದೆಡೆ ಹೊಂಬಾಳೆ ಫಿಲಮ್ಸ್ ಸಹ ಭಾರಿ ಬಜೆಟ್‌ನ ಗುಣಮಟ್ಟದ ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.

  ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದೆ 'ಮದಗಜ'

  ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದೆ 'ಮದಗಜ'

  ಉಮಾಪತಿ ನಿರ್ಮಾಣ ಮಾಡುತ್ತಿರುವ 'ಮದಗಜ' ಸಿನಿಮಾ ಈಗಷ್ಟೆ ಚಿತ್ರೀಕರಣ ಮುಗಿಸಿದೆ. ಕೊರೊನಾ ಲಾಕ್‌ಡೌನ್ ಹಾಗೂ ಇತರ ಕಾರಣಗಳಿಂದಾಗಿ 84 ದಿನಗಳ ಚಿತ್ರೀಕರಣ ಮುಗಿಸಲು ಒಂದು ವರ್ಷ ಆರು ತಿಂಗಳು ತೆಗೆದುಕೊಂಡಿದೆ ಈ ಸಿನಿಮಾ. ಶ್ರೀಮುರಳಿ, ಆಶಿಕಾ ರಂಗನಾಥ್, ಜಗಪತಿ ಬಾಬು ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವು ಡಿಸೆಂಬರ್‌ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

  English summary
  Umapathy Shrinivas Gowda planing to make movies with Puneeth Rajkumar and Yash in coming days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X