For Quick Alerts
  ALLOW NOTIFICATIONS  
  For Daily Alerts

  'ಮದಗಜ' ನಿರ್ದೇಶಕರಿಗೆ ಕಾರ್ ಉಡುಗೊರೆ ನೀಡಿದ 'ರಾಬರ್ಟ್' ನಿರ್ಮಾಪಕ

  |

  ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ 'ಮದಗಜ' ಚಿತ್ರ ನಿರ್ದೇಶಿಸುತ್ತಿರುವ ನಿರ್ದೇಶಕ ಮಹೇಶ್ ಕುಮಾರ್‌ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಕಾರ್ ಉಡುಗೊರೆಯಾಗಿ ನೀಡಿದ್ದಾರೆ.

  ನಿರ್ದೇಶಕ ಮಹೇಶ್ ಗೆ ಭರ್ಜರಿ ಉಡುಗೊರೆ ಕೊಟ್ಟ ರಾಬರ್ಟ್ ನಿರ್ಮಾಪಕ | Filmibeat Kannada

  ಈ ಫೋಟೋವನ್ನು ನಿರ್ದೇಶಕ ಮಹೇಶ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿಕೊಳ್ಳುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ''ನನಗೆ ಉಮಾಪತಿ ಅವರಿಂದ ಸಿಕ್ಕ ಸರ್ಪ್ರೈಸ್ ಕಾರು'' ಎಂದು ಖುಷಿಯಾಗಿದ್ದಾರೆ.

  4ನೇ ದಿನವೂ 'ರಾಬರ್ಟ್' ದಾಖಲೆ ಗಳಿಕೆ: 50 ಕೋಟಿ ಕ್ಲಬ್ ಸೇರಿದ ಡಿ ಬಾಸ್ ಸಿನಿಮಾ4ನೇ ದಿನವೂ 'ರಾಬರ್ಟ್' ದಾಖಲೆ ಗಳಿಕೆ: 50 ಕೋಟಿ ಕ್ಲಬ್ ಸೇರಿದ ಡಿ ಬಾಸ್ ಸಿನಿಮಾ

  ಉಮಾಪತಿ ಶ್ರೀನಿವಾಸ್ ನಿರ್ಮಾಣದ 'ರಾಬರ್ಟ್' ಸಿನಿಮಾ ದೊಡ್ಡ ಹಿಟ್ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ಈ ಚಿತ್ರಕ್ಕೆ ಪ್ರತಿಯೊಂದು ಹಂತದಲ್ಲೂ ಮಹೇಶ್ ಜೊತೆಯಾಗಿ ನಿಂತು ಸಹಕಾರ ನೀಡಿದ್ದನ್ನು ಗಮನಿಸಬೇಕು.

  ಇನ್ನು ವಿಶೇಷ ಅಂದ್ರೆ ಮದಗಜ ಚಿತ್ರಕ್ಕೂ ಉಮಾಪತಿ ಶ್ರೀನಿವಾಸ್ ಅವರೇ ನಿರ್ಮಾಪಕರು. ಉಮಾಪತಿ ಅವರ ಸಂಸ್ಥೆ ಜೊತೆ ಕೆಲಸ ಮಾಡುತ್ತಿರುವ ಮಹೇಶ್ ಅವರಿಗೆ ನಿರ್ಮಾಪಕ ಪ್ರೀತಿಯಿಂದ ಕಾರು ಉಡುಗೊರೆಯಾಗಿ ನೀಡಿದ್ದಾರೆ.

  ರಾಬರ್ಟ್ ಸಕ್ಸಸ್: ವಿಜಯ ಯಾತ್ರೆ ಹೊರಟ ಸಿನಿಮಾತಂಡ, ಯಾವ ಊರಿಗೆ ಯಾವ ದಿನ ಭೇಟಿ?ರಾಬರ್ಟ್ ಸಕ್ಸಸ್: ವಿಜಯ ಯಾತ್ರೆ ಹೊರಟ ಸಿನಿಮಾತಂಡ, ಯಾವ ಊರಿಗೆ ಯಾವ ದಿನ ಭೇಟಿ?

  ಮೊದಲ ವಾರಕ್ಕೆ ರಾಬರ್ಟ್ ಸಿನಿಮಾ 78 ಕೋಟಿ ಗಳಿಸಿತ್ತು. ಮುಂದಿನ ವಾರದಿಂದ ರಾಜ್ಯಾದ್ಯಂತ ರಾಬರ್ಟ್ ಚಿತ್ರತಂಡ ವಿಜಯಯಾತ್ರೆ ಪ್ರಾರಂಭಿಸುತ್ತಿದ್ದಾರೆ. ತರುಣ್ ಸುಧೀರ್ ಈ ಚಿತ್ರ ನಿರ್ದೇಶಿಸಿದ್ದು, ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು ನಟಿಸಿದ್ದಾರೆ.

  ಇನ್ನು ಮದಗಜ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ಶ್ರೀಮುರಳಿ, ಆಶಿಕಾ ರಂಗನಾಥ್, ಜಗಪತಿ ಬಾಬು ಮುಖ್ಯಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

  English summary
  Roberrt Movie producer Umapathy Srinivas gifted car to Madagaja director Mahesh kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X