twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಸುದ್ದಿಗೋಷ್ಠಿ ನಂತರ ಉಮಾಪತಿ ಶ್ರೀನಿವಾಸ್ ಹೇಳಿದ್ದೇನು?

    |

    'ದರ್ಶನ್ ಅವರು ಸುದ್ದಿಗೋಷ್ಠಿ ಮಾಡುವುದಕ್ಕೂ ಮುಂಚೆಯೂ ನನ್ನ ಬಳಿ ಫೋನ್‌ನಲ್ಲಿ ಮಾತನಾಡಿದರು' ಎಂದು ದರ್ಶನ್ ಅವರ ಪ್ರೆಸ್‌ಮೀಟ್ ನಂತರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    25 ಕೋಟಿ ರೂಪಾಯಿ ವಂಚಿಸಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ದರ್ಶನ್, ''ನನ್ನ ಮೈಸೂರು ಸ್ನೇಹಿತರ ಮೇಲೆ ಯಾವುದೇ ಅನುಮಾನ ಇಲ್ಲ, ಆದರೆ ಎಲ್ಲವೂ ಉಮಾಪತಿ ಕಡೆ ಬೆರಳು ತೋರಿಸುತ್ತಿದೆ. ಅವರ ಮೇಲೆಯೂ ಅನುಮಾನ ಇಲ್ಲ, ಎರಡು ದಿನದಲ್ಲಿ ಸ್ಪಷ್ಟಪಡಿಸಿ ಎಂದು ಹೇಳಿದ್ದೇನೆ'' ಎಂದು ಸ್ವತಃ ದರ್ಶನ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಮಾಪತಿ ಶ್ರೀನಿವಾಸ್ ''ಈ ಪ್ರಕರಣ ಸಂಬಂಧ ನಾನು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ. ತನಿಖೆ ನಡೆಯುತ್ತಿದೆ. ಅಂತಿಮವಾಗಿ ಪೊಲೀಸರು ಹೇಳಬೇಕು, ಆಮೇಲೆ ಸತ್ಯಾಸತ್ಯತೆ ಸಾಬೀತಾಗಲಿದೆ'' ಎಂದಿದ್ದಾರೆ. ಮುಂದೆ ಓದಿ....

    ಸುದ್ದಿಗೋಷ್ಠಿಗೂ ಮುಂಚೆ ಮಾತನಾಡಿದ್ವಿ

    ಸುದ್ದಿಗೋಷ್ಠಿಗೂ ಮುಂಚೆ ಮಾತನಾಡಿದ್ವಿ

    ''ದರ್ಶನ್ ಅವರು ಪ್ರೆಸ್ ಮೀಟ್ ಮಾಡುವುದಕ್ಕೂ 20 ನಿಮಿಷದ ಹಿಂದೆ ಫೋನ್‌ನಲ್ಲಿ ಮಾತನಾಡಿದರು. ನಿರ್ಮಾಪಕರೇ ಈ ರೀತಿ ಪ್ರೆಸ್ ಮೀಟ್ ಮಾಡ್ತಿದ್ದೀನಿ, ನೋಡಿ ನೀವು ಇದನ್ನು ಕ್ಲಿಯರ್ ಮಾಡಿ ಅಂದ್ರು. ಎರಡ್ಮೂರು ದಿನದಲ್ಲಿ ಮಾಡ್ತೇನೆ'' ಎಂದು ತಿಳಿಸಿರುವುದಾಗಿ ಉಮಾಪತಿ ಪ್ರತಿಕ್ರಿಯೆ ನೀಡಿದ್ದಾರೆ.

    ತಿಳಿದು ಇಂತಹ ಕೆಲಸ ಯಾರೂ ಮಾಡಲ್ಲ

    ತಿಳಿದು ಇಂತಹ ಕೆಲಸ ಯಾರೂ ಮಾಡಲ್ಲ

    ''ನಾನು ಕಷ್ಟಪಟ್ಟು ಇಲ್ಲಿಗೆ ಬಂದಿರುವುದು. ನಮ್ಮಪ್ಪ ಏನು ನಿರ್ಮಾಪಕ ಆಗಿರಲಿಲ್ಲ. ಗೊತ್ತಿದ್ದು ಇದೆಲ್ಲಾ ಮಾಡಿಕೊಳ್ಳಲು ಯಾರೂ ದಡ್ಡರಲ್ಲ. ದರ್ಶನ್ ಸರ್‌ಗೋಸ್ಕರ ನಾನು ಎಚ್ಚೆತ್ತುಕೊಂಡಿದ್ದು. ಅವರು ಎಚ್ಚರಿಕೆ ವಹಿಸಿದ್ದಾರೆ. ಅದಕ್ಕೆ ಪ್ರೆಸ್ ಮೀಟ್ ಮಾಡಿರುವುದು'' ಎಂದು ರಾಬರ್ಟ್ ನಿರ್ಮಾಪಕ ಸ್ಪಷ್ಟನೆ ಕೊಟ್ಟರು.

    ಮಹಿಳೆ ಪರಿಚಯ ಆಗಿದ್ದು ಹೇಗೆ?

    ಮಹಿಳೆ ಪರಿಚಯ ಆಗಿದ್ದು ಹೇಗೆ?

    ''ಬ್ಯಾಂಕ್‌ನಲ್ಲಿ ಪ್ರಾಪರ್ಟಿ ಹರಾಜು ಹಾಕಲಾಗುತ್ತದೆ, ನೀವು ತೆಗೆದುಕೊಳ್ಳುತ್ತೀರಾ ಎಂದು ನನ್ನನ್ನು ಆ ಮಹಿಳೆ ಸಂಪರ್ಕಿಸಿದರು. ಹೌದು, ತೆಗೆದುಕೊಳ್ಳುತ್ತೇನೆ ಎಂದೆ. ಆಗಲೇ ಮೊದಲು ಪರಿಚಯ ಆಗಿದ್ದು. ಮತ್ತೊಮ್ಮೆ ಫೋನ್ ಮಾಡಿ 'ನೀವಾಗಲಿ ದರ್ಶನ್ ಸರ್ ಆಗಲಿ ಲೋನ್ ತೆಗೆದುಕೊಳ್ಳುತ್ತಿದ್ದೀರಾ ಅಥವಾ ಶ್ಯೂರಿಟಿ ಹಾಕುತ್ತಿದ್ದೀರಾ''ಎಂದು ಕೇಳಿದ್ರು. ಇಲ್ಲಾ ಅಂತ ಹೇಳಿದೆ. ಇದನ್ನು ಕೇಳಿ ಸ್ವಲ್ಪ ಶಾಕ್ ಆಯಿತು'' ಎಂದು ಉಮಾಪತಿ ಹೇಳಿದರು.

    ಎರಡು ಕಡೆ ದೂರು ಕೊಟ್ವಿ

    ಎರಡು ಕಡೆ ದೂರು ಕೊಟ್ವಿ

    ''ಈ ವಿಚಾರವನ್ನು ನಾನು ಖುದ್ದು ದರ್ಶನ್ ಅವರಿಗೆ ಹೇಳಿದೆ. ಅವರು ಸಹ ಆ ರೀತಿ ಏನು ಇಲ್ವಲ್ಲ, ಏನಿದು ಸ್ವಲ್ಪ ತಿಳಿದುಕೊಳ್ಳಿ ಎಂದರು. ಅದಾದ ಮೇಲೆ ನಾವು ಮುಂಜಾಗ್ರತೆಯಿಂದ ಜಯನಗರ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಿದ್ದು, ಮೈಸೂರಿನಲ್ಲಿ ಅವರು ದೂರು ಕೊಟ್ಟಿದ್ದು' ಎಂದು ಉಮಾಪತಿ ಹೇಳಿದರು.

    English summary
    Rs 25 cr fraud case controversy: Roberrt Producer Umapathy Srinivas reaction after Darshan press meet.
    Monday, July 12, 2021, 17:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X