twitter
    For Quick Alerts
    ALLOW NOTIFICATIONS  
    For Daily Alerts

    ಮುಕ್ತ ವಿವಿ ಪಿಎಚ್ ಡಿ ಪ್ರವೇಶ ಪರೀಕ್ಷೆ ಬರೆದ ಉಮಾಶ್ರೀ

    By Rajendra
    |

    ಕಲಾವಿದೆ ಕಮ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರಿಗೆ ರಾಜ್ಯಶಾಸ್ತ್ರದ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಅವರು ಈಗಾಗಲೆ ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿಯನ್ನೂ ಪೂರೈಸಿದ್ದಾರೆ. ಈಗ ಅದೇ ವಿಷಯದಲ್ಲಿ ಪಿಎಚ್ ಡಿ ಮಾಡುವ ಸಲುವಾಗಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ.

    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರದ ಪಿಎಚ್ ಡಿ ಪ್ರವೇಶ ಪರೀಕ್ಷೆಗೆ ಹಾಜರಾಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಮೈಸೂರಿನಲ್ಲಿ ಒಂದು ಕಡೆ ದಸರಾ ಸಂಭ್ರಮ ಇನ್ನೊಂದು ಕಡೆ ಉಮಾಶ್ರೀ ಅವರಿಗೆ ಪ್ರವೇಶ ಪರೀಕ್ಷೆ ಸವಾಲು.

    Actress Umashree
    ಬೆಳಗ್ಗೆ 11 ಗಂಟೆಗೆ ನಡೆದ ಪ್ರವೇಶ ಪರೀಕ್ಷೆಗೆ ಉಮಾಶ್ರೀ ಜೊತೆಗೆ ಉನ್ನತ ಶಿಕ್ಷಣ ಇಲಾಖೆ ಮಾಜಿ ಸಚಿವ ಸಿ.ಟಿ.ರವಿ ಅವರು ಪ್ರವೇಶ ಪರೀಕ್ಷೆ ಬರೆದರು. ರಾಜ್ಯಶಾಸ್ತ್ರದಲ್ಲಿ ಸಂಶೋಧನೆ ಮಾಡಬೇಕು ಎಂಬ ಹಂಬಲ ತಮ್ಮದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

    ಇಬ್ಬರು ಗಣ್ಯರು ಪ್ರವೇಶ ಪರೀಕ್ಷೆ ಬರೆದದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ.ಕೃಷ್ಣನ್ ಮಾತನಾಡುತ್ತಾ, ಅವರೆಲ್ಲಿ ಮುಜುಗಕ್ಕೆ ಈಡಾಗುತ್ತಾರೋ ಎಂಬ ಕಾರಣಕ್ಕೆ ಅವರಿಗೆ ಶುಭ ಹಾರೈಸಲಿಲ್ಲ. ಪರೀಕ್ಷಾ ಕೊಠಡಿಗೆ ಹೋಗಿ ವೀಕ್ಷಿಸಿ ಬಂದೆ. ಪರೀಕ್ಷೆ ಮುಗಿದ ಬಳಿಕ ಅವರನ್ನು ಮಾತನಾಡಿಸಿದ್ದಾಗಿ ಹೇಳಿದ್ದಾರೆ.

    ಈ ಹಿಂದೊಮ್ಮೆ ಪರೀಕ್ಷೆ ಬರೆದಿದ್ದಾಗ ಹೇಗೆ ಬರೆದಿರಿ? ಎಂದು ಕೇಳಿದ್ದಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 36 ವರ್ಷಗಳ ನಂತರ ಎಂ.ಎ ಪರೀಕ್ಷೆಯನ್ನು ಬರೆಯುತ್ತಿದ್ದೇನೆ. ಆಗ ಎಸ್ಸೆಸ್ಸಿಲ್ಸಿ ಪರೀಕ್ಷೆಯಲ್ಲಿ ಶೇ.35ರಷ್ಟು ಅಂಕ ಪಡೆದು ಪಾಸಾಗಿದ್ದೆ. ಈಗ ಎಂ.ಎ ಪಾಸುಗುತ್ತೇನೆ ಎಂಬ ಗ್ಯಾರಂಟಿ ಇಲ್ಲ ಎಂದಿದ್ದರು!

    ಸ್ನಾತಕೋತ್ತರ ಪದವಿಯನ್ನು ಮುಗಿಸಬೇಕು ಎಂದು ಹಲವಾರು ದಂಡಯಾತ್ರೆಗಳನ್ನು ಮಾಡಿದ್ದೇನೆ. ಮೂರು ಬಾರಿ ಪರೀಕ್ಷಾ ಶುಲ್ಕ ಕಟ್ಟಿ ಸಂಸಾರ, ರಾಜಕೀಯ ಬಾಧ್ಯತೆಗಳಿಂದ ಪರೀಕ್ಷೆಯನ್ನು ಬರೆಯಲಾಗಲಿಲ್ಲ.ಈ ಸಲ ಹೇಗಾದರೂ ಮಾಡಿ ಬರೆಯಲೇಬೇಕು ಎಂದು ತೀರ್ಮಾನಿಸಿದ ಕಾರಣ ಪರೀಕ್ಷೆ ಬರೆದೆ ಎಂದಿದ್ದರು.

    'ಭಾರತೀಯ ರಾಜಕೀಯ ಚಿಂತನೆ' ಪತ್ರಿಕೆ ಬರೆದಾಗ ಅವರು ಹೇಳಿದ್ದು ಇನ್ನೂ ಮಜವಾಗಿತ್ತು, ನನ್ನನ್ನು ಗಾಂಧಿ, ಗೋಕಲೆ, ತಿಲಕ್ ಮತ್ತು ವಿವೇಕಾನಂದನೇ ಕಾಪಾಡಬೇಕು. ಪರೀಕ್ಷೆಗೆ ಕೇವಲ ಒಂದು ವಾರದಿಂದ ತಯಾರಿ ನಡೆಸಿದ್ದೆ. ಚೆನ್ನಾಗಿ ಓದಿಕೊಂಡಿದ್ದೇನೆ ಆದರೆ ಹಾಳಾದ್ದು ಒಂದೂ ನೆನಪಿರಲ್ಲ ಎಂದು ಹೇಳಿ ಚಕಿತಗೊಳಿಸಿದ್ದರು ಉಮಾಶ್ರೀ! (ಏಜೆನ್ಸೀಸ್)

    English summary
    Kannanda Actor Umashree, who is also the Minister for woman and child development, appeared for entrance exam for PhD at Karnataka State Open University. Umashree, who has a PG in political science through correspondence from the same varsity, wrote the exam at 11 am.
    Monday, October 7, 2013, 10:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X