For Quick Alerts
  ALLOW NOTIFICATIONS  
  For Daily Alerts

  ಮಲ್ಪಿಪ್ಲೆಕ್ಸ್‌ನಲ್ಲಿ ಇಂಡಿಯಾ Vs ಪಾಕಿಸ್ತಾನ್ ಪಂದ್ಯ ಪ್ರಸಾರ: ಡಿಸಿ ಕಚೇರಿ ಮುಂದೆ ಕೂರುತ್ತೇವೆ!

  |

  ವೀಕೆಂಡ್‌ ಬಂತು ಅಂದರೆ ಥಿಯೇಟರ್‌ಗಳಿಗೆ ಜೀವ ಬಂದು ಬಿಡುತ್ತವೆ. ಚಿತ್ರಮಂದಿರಗಳಲ್ಲಿ ಜನರು ತುಂಬಿ ತುಳುಕುತ್ತಾರೆ. ಈ ವಾರ ಸಿನಿಮಾ ಮಂದಿ ನಿರೀಕ್ಷೆ ಹೆಚ್ಚಿತ್ತು. ಬ್ಯಾಕ್ ಟು ಬ್ಯಾಕ್ ರಜೆ ಇರುವುದರಿಂದ ಜನರು ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬರುತ್ತಾರೆ ಎಂದೇ ನಿರೀಕ್ಷೆ ಮಾಡಲಾಗಿತ್ತು.

  ಮತ್ತೊಂದು ಕಡೆ ಭಾನುವಾರ (ಆಗಸ್ಟ್ 28) ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಹೈ ವೋಲ್ಟೇಜ್ ಮ್ಯಾಚ್ ಇದೆ. ಹೀಗಾಗಿ ಜನರು ಸಿನಿಮಾನ ಆಯ್ಕೆ ಮಾಡಿಕೊಳ್ಳುತ್ತಾರಾ? ಇಲ್ಲಾ ಸಿನಿಮಾ ನೋಡುತ್ತಾರಾ? ಅನ್ನೋ ಪ್ರಶ್ನೆ ಕೂಡ ಎದ್ದಿತ್ತು. ಈ ಮಧ್ಯೆ ಕೆಲವು ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಸಿನಿಮಾ ತೆಗೆದು ಭಾರತ ಹಾಗೂ ಪಾಕಿಸ್ತಾನ್ ಪಂದ್ಯ ಹಾಕಿದ್ದಾರೆ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಆರೋಪ ಮಾಡಿದ್ದಾರೆ.

  ಸಿನಿಮಾ ತೋರಿಸಲು ಮಾತ್ರ ಪರ್ಮಿಷನ್

  ಸಿನಿಮಾ ತೋರಿಸಲು ಮಾತ್ರ ಪರ್ಮಿಷನ್

  "ಈ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೇಂದ್ರ ಸರ್ಕಾರ ಆಗಲಿ, ರಾಜ್ಯ ಸರ್ಕಾರ ಆಗಲಿ ಪರ್ಮೀಷನ್ ಕೊಡೋದು ಬರೀ ಸಿನಿಮಾಗಳನ್ನು ತೋರಿಸಲಿಕ್ಕೆ ಅಷ್ಟೇ. ಅದನ್ನು ಹೊರತು ಪಡಿಸಿ ಅವರು ಬೇರೆ ಕಂಟೆಂಟ್‌ಗಳನ್ನು ಪ್ರಸಾರ ಮಾಡುತ್ತಾರೆ ಅಂದರೆ, ಅದಕ್ಕೆ ಅವರು ಸಂಬಂಧಪಟ್ಟಂತಹ ಡಿಸಿ ಪರ್ಮಿಷನ್ ಅನ್ನು ತೆಗೆದುಕೊಳ್ಳಬೇಕು. ಸಂಬಂಧಪಟ್ಟ ಹಂಚಿದಾರರು ಹಾಗೂ ನಿರ್ಮಾಪಕರುಗಳ ಪರ್ಮಿಷನ್ ಇಲ್ಲದೆ ಹೊರತು ಇಂಡಿಯಾ ವರ್ಸಸ್ ಪಾಕಿಸ್ತಾನ್ ಪಂದ್ಯ ತೋರಿಸಲು ಬರಲ್ಲ." ಎನ್ನುತ್ತಾರೆ ಉಮೇಶ್ ಬಣಕಾರ್

  ಮಲ್ಟಿಪ್ಲೆಕ್ಸ್ ಮಂದಿಗೆ ಪ್ರಶ್ನೆ

  ಮಲ್ಟಿಪ್ಲೆಕ್ಸ್ ಮಂದಿಗೆ ಪ್ರಶ್ನೆ

  " ಆ ಸ್ಕ್ರೀನ್‌ಗಳಲ್ಲಿ ಕನ್ನಡ ಸಿನಿಮಾ ಹೋಗುತ್ತಿದೆಯೋ, ತಮಿಳು, ಹಿಂದಿ ಸಿನಿಮಾ ಹೋಗುತ್ತಿರೋ ಬೇರೆ ಮಾತು. ಆದರೆ, ಆ ಸಿನಿಮಾಗಳನ್ನು ತೆಗೆಯಲು ಪರ್ಮಿಷನ್ ತೆಗೆದುಕೊಂಡಿದ್ದಾರಾ ಅನ್ನೋದು ಪ್ರಶ್ನೆಯಾಗುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಇವತ್ತು ಭಾನುವಾರ. ಬಹಳಷ್ಟು ಮಂದಿ ನಿನ್ನೆ ಇವತ್ತು ರಜೆ ಇರೋದ್ರಿಂದ ಒಂದು ವಾರದಿಂದ ಏನು ಕಲೆಕ್ಷನ್‌ಗಳು ಬಂದಿಲ್ಲ. ಅದು ನಿನ್ನೆ ಇವತ್ತು ಬರುತ್ತೆ ಅಂತ ನಿರ್ಮಾಪಕರು ಹಾಗೂ ಹಂಚಿದಾರರು ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಸಂಜೆ ಹೊತ್ತಲ್ಲಿ ಮನೆ ಮಂದಿಯೆಲ್ಲಾ ಹೊರಗೆ ಹೋಗುವ ವೇಳೆ ಸರಿಯಾಗಿ ನೀವು ಮ್ಯಾಚ್ ಹಾಕಿ ಕೂತ್ಕೊಳ್ತೀರಿ ಅಂದರೆ, ನಿಮಗೆ ಈ ಅಧಿಕಾರ ಕೊಟ್ಟೋರು ಯಾರು?" ಅಂತ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಪ್ರಶ್ನೆ ಮಾಡಿದ್ದಾರೆ."

  ನಿರ್ಮಾಪಕರಿಗೆ ಅನ್ಯಾಯ ಆಗುತ್ತೆ!

  ನಿರ್ಮಾಪಕರಿಗೆ ಅನ್ಯಾಯ ಆಗುತ್ತೆ!

  " ಇದು ನಿರ್ಮಾಪಕರಿಗೆ ಹಾಗೂ ಹಂಚಿಕೆದಾರರಿಗೆ ಆಗುತ್ತಿರುವ ಅನ್ಯಾಯ. ಹಾಗೇ ಹೊರರಾಜ್ಯದಲ್ಲಿ ಎಲ್ಲೂ ಇಲ್ಲ. ಇಲ್ಲಿ ಯಾಕೆ ಇಂತಹ ಉಡಾಫೆಗಳನ್ನು ಮಾಡುತ್ತಿದ್ದೀರಿ ಅನ್ನುವಂತಹದ್ದು ನನ್ನ ನೇರವಾದ ಆಪಾದನೆ. ಯಾವ್ಯಾವ ಚಿತ್ರಮಂದಿರದಲ್ಲಿ ಯಾವ್ಯಾವ ಸಿನಿಮಾ ತೆಗೆಯುತ್ತಿದ್ದೇವೆ ಅನ್ನೋದನ್ನು ಗೌಪ್ಯವಾಗಿ ಇಟ್ಟುಕೊಂಡಿದ್ದಾರೆ. ಹಾಗೇ ಬುಕ್ ಮೈ ಶೋನಲ್ಲೂ ಬುಕಿಂಗ್ ಮಾಡುವುದಕ್ಕೆ ಪರ್ಮಿಷನ್ ಕೊಟ್ಟಿದ್ದಾರೆ." ಉಮೇಶ್ ಬಣಕರ್ ಆರೋಪ ಮಾಡಿದ್ದಾರೆ."

  Recommended Video

  Sudha Murty ಪ್ರಕಾರ ಸಿನಿಮಾವನ್ನ ಥಿಯೇಟರ್ನಲ್ಲೇ ನೋಡ್ಬೇಕು ಯಾಕೆ ಗೊತ್ತಾ? | Oneindia Kannada
  ಡಿಸಿ ಕಚೇರಿ ಮುಂದೆ ಕೂರುತ್ತೇವೆ

  ಡಿಸಿ ಕಚೇರಿ ಮುಂದೆ ಕೂರುತ್ತೇವೆ

  "ನಾಳೆ ನಿರ್ಮಾಪಕರ ಜೊತೆ ಮೀಟಿಂಗ್ ಮಾಡಿ. ಸಂಬಂಧಪಟ್ಟ ಡಿಸಿಗಳನ್ನು ಭೇಟಿ ಮಾಡಿ ಮಂತ್ರಿಗಳನ್ನೂ ಕಂಡು, ಇವರಿಗೆ ಪರ್ಮಿಷನ್ ಕೊಟ್ಟೋರು ಯಾರು? ಪರೋಕ್ಷವಾಗಿ ನಮ್ಮ ಹೊಟ್ಟೆ ಮೇಲೆ ಹೊಡೆಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟೋರು ಯಾರು? ಇವತ್ತು ಏನಾದರೂ ರಜೆ ಇರದೆ ಇದ್ದಿದ್ದರೆ, ನಾವು ಇವತ್ತು ಸಂಬಂಧ ಪಟ್ಟ ಡಿಸಿ ಕಚೇರಿ ಮುಂದೆ ಬಂದು ಕೂರುತ್ತಿದ್ದೇವು. ನಾಳೆ ಆದರೂ ನಾವು ಇದನ್ನು ಬಿಡಲ್ಲ. " ಎಂದಿದ್ದಾರೆ.

  English summary
  Umesh Banakar Angry On Showing India Pakistan Match In Theatre And Multiplex, Know More.
  Sunday, August 28, 2022, 21:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X