ಟಗರು ಪಲ್ಯ ಚಿತ್ರಕ್ಕೆ ಪ್ರೇಮ್ ಮಗಳನ್ನು ನಾಯಕಿ ಮಾಡೋಣ ಎಂದು ಹೇಳಿದ್ದು ಇವರೇ: ಧನಂಜಯ್

ಟಗರು ಚಿತ್ರದ ಡಾಲಿ ಪಾತ್ರದ ಮೂಲಕ ಚಿತ್ರರಂಗದಲ್ಲಿ ದೊಡ್ಡ ತಿರುವು ಪಡೆದುಕೊಂಡ ಧನಂಜಯ್ ಡಾಲಿ ಪಿಕ್ಚರ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಇದೀಗ 'ಟಗರು ಪಲ್ಯ' ಎಂಬ ನೂತನ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಹೌದು, ಧನಂಜಯ್ ಸದ್ಯ ಚಂದನವನದ ಯಶಸ್ವಿ ನಿರ್ಮಾಪಕನಾಗಿದ್ದು ಮೊದಲಿಗೆ ತಮ್ಮದೇ ನಟನೆಯ 'ಬಡವ ರಾಸ್ಕಲ್' ಚಿತ್ರಕ್ಕೆ ಬಂಡವಾಳ ಹೂಡಿದ್ದರು ಹಾಗೂ ಇತ್ತೀಚೆಗಷ್ಟೆ 'ಹೆಡ್ ಬುಷ್' ಚಿತ್ರಕ್ಕೂ ಹಣ ಹೂಡಿದ್ದರು.

ಹೀಗೆ ತಾವೇ ನಾಯಕನಾಗಿ ಅಭಿನಯಿಸಿದ್ದ ಎರಡು ಚಿತ್ರಗಳಿಗೆ ಬಂಡವಾಳ ಹೂಡಿದ್ದ ಧನಂಜಯ್ ಇದೀಗ ತಮ್ಮ ನಿರ್ಮಾಣದ ಮೂರನೇ ಚಿತ್ರದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಹೌದು, ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಚಿತ್ರದಲ್ಲಿ ಯುವ ನಟ ನಾಗಭೂಷಣ್ ನಾಯಕನಾಗಿದ್ದರೆ, ಈ ಹಿಂದೆ ದುನಿಯಾ ವಿಜಯ್ ನಟನೆಯ ಜಾಕ್ಸನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಉಮೇಶ್ ಕೆ ಕೃಪ ಏಳು ವರ್ಷಗಳ ಬಳಿಕ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ.

ಇದೇ ತಂಡಕ್ಕೆ ನಿನ್ನೆಯಷ್ಟೇ ( ನವೆಂಬರ್ 29 ) ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಾಯಕಿಯಾಗಿ ಸೇರ್ಪಡೆಗೊಂಡಿದ್ದಾರೆ. ಈ ವಿಷಯವನ್ನು ಚಿತ್ರದ ನಿರ್ಮಾಪಕ ಧನಂಜಯ್ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಿಳಿಸಿದ್ದರು. ಇನ್ನು ಈ ಕುರಿತಾಗಿ ಚಿತ್ರದ ಮುಹೂರ್ತ ಸಮಾರಂಭದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲೂ ಸಹ ಮಾತನಾಡಿದ ಧನಂಜಯ್ ಈ ಚಿತ್ರಕ್ಕೆ ಅಮೃತಾ ಪ್ರೇಮ್ ಅವರನ್ನೇ ನಾಯಕಿಯನ್ನಾಗಿ ಆರಿಸಲು ಕಾರಣವೇನು ಹಾಗೂ ಕಾರಣ ಯಾರು ಎಂಬುದನ್ನು ಬಿಚ್ಚಿಟ್ಟರು.

ಪ್ರೇಮ್ ಮಗಳನ್ನು ಆರಿಸಿದ್ದು ಯಾರು?

ಪ್ರೇಮ್ ಮಗಳನ್ನು ಆರಿಸಿದ್ದು ಯಾರು?

"ನಾಯಕನಾಗಿ ನಾಗಭೂಷಣ್ ಅವರನ್ನು ಹಾಗೂ ಪೋಷಕ ಪಾತ್ರಗಳಿಗೆ ಆರಿಸಿದ ನಂತರ ನಾಯಕಿಯನ್ನಾಗಿ ಯಾರನ್ನು ಆರಿಸಬಹುದು ಎಂಬ ಚರ್ಚೆ ಶುರುವಾಯಿತು. ಈ ಕುಟುಂಬಕ್ಕೆ ಒಬ್ರು ಮಹಾಲಕ್ಷ್ಮಿ ಬೇಕಿತ್ತು. ಏಕೆಂದರೆ ಈ ಚಿತ್ರದ ನಾಯಕಿ ಇಷ್ಟವಾದರೆ, ಆಕೆ ಗೆದ್ದರೆ ಇಡೀ ಚಿತ್ರ ಗೆಲ್ಲುತ್ತೆ. ಅಂತಹ ಅದ್ಭುತವಾದ ಪಾತ್ರ ಅದು. ಹಾಗಾಗಿ ಆ ಪಾತ್ರಕ್ಕೆ ಯಾರು ಸೂಕ್ತ ಎನ್ನುವಾಗ ನಮ್ಮ ನಿರ್ದೇಶಕರು ಪ್ರೇಮ್ ಸರ್ ಮಗಳಾದರೆ ಹೇಗೆ ಎಂದು ಸೂಚಿಸಿದರು" ಎಂದು ಧನಂಜಯ್ ಹೇಳಿದರು.

ಫೋಟೊ, ವಿಡಿಯೊ ನೋಡಿ ಖುಷಿಯಾಯಿತು

ಫೋಟೊ, ವಿಡಿಯೊ ನೋಡಿ ಖುಷಿಯಾಯಿತು

ಹೀಗೆ ಚಿತ್ರದ ನಿರ್ದೇಶಕ ಉಮೇಶ್ ಕೆ ಕೃಪ ನೆನಪಿರಲಿ ಅಮೃತಾ ಪ್ರೇಮ್ ಹೆಸರನ್ನು ಸೂಚಿಸಿದರು ಎಂದು ಹೇಳಿದ ಧನಂಜಯ್ "ನಾನು ಅಮೃತಾಳನ್ನು ನೇರವಾಗಿ ನೋಡಿರಲಿಲ್ಲ. ಆದರೆ ಫೋಟೊ ಹಾಗೂ ವಿಡಿಯೊಗಳನ್ನು ನೋಡಿ ಖುಷಿಯಾಯಿತು" ಎಂದು ತಿಳಿಸಿದರು. ಈ ಮೂಲಕ ಪ್ರೇಮ್ ಮಗಳನ್ನು ತಮ್ಮ ನಿರ್ಮಾಣದ 'ಟಗರು ಪಲ್ಯ' ಚಿತ್ರಕ್ಕೆ ಆಯ್ಕೆ ಮಾಡಿದ್ದು ಹೇಗೆ ಎಂಬುದನ್ನು ಬಿಚ್ಚಿಟ್ಟರು.

ಪ್ರೇಮ್ ಜತೆ ಚರ್ಚೆ

ಪ್ರೇಮ್ ಜತೆ ಚರ್ಚೆ

ಇನ್ನೂ ಮುಂದುವರಿದು ಮಾತನಾಡಿದ ಧನಂಜಯ್ ಅಮೃತಾ ಪ್ರೇಮ್ ಫೋಟೊ ಹಾಗೂ ವಿಡಿಯೊ ನೋಡಿ ಮೆಚ್ಚಿಕೊಂಡ ಕೂಡಲೇ ಪ್ರೇಮ್ ಸರ್‌ಗೆ ಕರೆ ಮಾಡಿ ವಿಷಯ ತಿಳಿಸಿ, ಅವರು ಒಪ್ಪಿಕೊಂಡರೆ ಮುಂದುವರಿಯೋಣ, ಏಕೆಂದರೆ ಅವರು ತಮ್ಮ ಮಗಳನ್ನು ಯಾವ ರೀತಿ ಲಾಂಚ್ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿದ್ದಾರೋ ಏನೋ ಎಂದು ತಿಳಿಸಿದ್ದರಂತೆ. ಅದರಂತೆ ನೆನಪಿರಲಿ ಪ್ರೇಮ್‌ಗೆ ಚಿತ್ರದ ಕತೆಯನ್ನು ಕಳುಹಿಸಿಕೊಟ್ಟಾಗ ತುಂಬಾ ಖುಷಿಯಿಂದ ಒಪ್ಪಿಗೆ ನೀಡಿದರು ಎಂಬುದನ್ನೂ ಸಹ ಧನಂಜಯ್ ಹೇಳಿಕೊಂಡಿದ್ದಾರೆ.

More from Filmibeat

English summary
Umesh K Krupa suggested Amrutha Prem for Tagaru Palya says Dhananjay. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X