twitter
    For Quick Alerts
    ALLOW NOTIFICATIONS  
    For Daily Alerts

    ಮರೆಯಲಾಗದ ಕಲಾವಿದ ಓಂ ಪುರಿಗೆ ನುಡಿನಮನ

    |

    ನವದೆಹಲಿ, ಜ. 6: ತಮ್ಮದೇ ಆದ ವಿಶಿಷ್ಠವಾದ ಅಭಿನಯ ಚಾತುರ್ಯದಿಂದ ಭಾರತೀಯ ಚಿತ್ರರಂಗದಲ್ಲೇ ವಿಭಿನ್ನ ಛಾಪು ಮೂಡಿಸಿದ್ದ ಚಿತ್ರನಟ ಓಂಪುರಿ, ಜ. 6ರಂದು ನಿಧನರಾಗಿದ್ದಾರೆ.

    ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಹಾಗೂ ಪುಣೆ ಸಿನಿಮಾ ಹಾಗೂ ಟೆಲಿವಿಷನ್ ಇನ್ಸಿಟಿಟ್ಯೂಟ್ ಗಳಲ್ಲಿ ಪಳಗಿದ್ದ ಬಂದಿದ್ದ ಅವರು, ಆ ಸಂಸ್ಥೆಗಳಿಂದ ಅಭಿನಯದ ವಿಚಾರವಾಗಿ ಕಲಿತಿದ್ದ ಶಿಸ್ತನ್ನು ಜೀವನದ ಕೊನೆಯವರೆಗೂ ರೂಢಿಸಿಕೊಂಡಿದ್ದರು.

    ಅಂಬಾಲಾದಲ್ಲಿನ ಪಂಜಾಬಿ ಕುಟುಂಬದಲ್ಲಿ 1950ರ ಅಕ್ಟೋಬರ್ 18ರಂದು ಜನಿಸಿದ್ದರು. ಅವರ ತಂದೆ ಭಾರತೀಯ ರೈಲ್ವೇ ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಮರಾಠಿ, ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಮಾತ್ರವಲ್ಲದೆ ಹಾಲಿವುಡ್, ಬ್ರಿಟನ್ ಚಿತ್ರಗಳಲ್ಲೂ ಕಾಣಿಸಿಕೊಂಡ ಹೆಗ್ಗಳಿಕೆ ಅವರದ್ದು. ಸರಿಸುಮಾರು 7 ಭಾಷೆಗಳಲ್ಲಿ ಅಭಿನಯಿಸಿದ್ದಾರೆ. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

    1990ರಲ್ಲಿ ತೆರೆಕಂಡ ಹಾಲಿವುಡ್ ಹಾಗೂ ಯುನೈಟೆಡ್ ಕಿಂಗ್ ಡಮ್ ನ ಖ್ಯಾತ ನಿರ್ದೇಶಕ ದಿವಂಗತ ರಿಚರ್ಡ್ ಅಟೆನ್ ಬುರೋ ಅವರ ನಿರ್ದೇಶನದ ಮಹೋನ್ನತ ಚಿತ್ರವಾದ ಗಾಂಧಿ ಚಿತ್ರದಲ್ಲೂ ಪುಟ್ಟದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

    ಕನ್ನಡದ ತಬ್ಬಲಿಯು ನೀನಾದೆ ಮಗನೆ, ಗೋಧೂಳಿ, ಎ.ಕೆ. 47, ಧೃವ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದರು.

    ಮರಾಠಿ ಚಿತ್ರದ ಮೂಲಕ ಬೆಳ್ಳಿತೆರೆಗೆ

    ಮರಾಠಿ ಚಿತ್ರದ ಮೂಲಕ ಬೆಳ್ಳಿತೆರೆಗೆ

    1976ರಲ್ಲಿ ತೆರೆಕಂಡಿದ್ದ ಮರಾಠಿ ಚಿತ್ರವಾದ ಘಾಶೀರಾಮ್ ಕೊತ್ವಾಲ್ ಎಂಬ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಅವರು, ಆನಂತರ ಕಲಾತ್ಮಕ ಚಿತ್ರಗಳಾದ ಹಿಂದಿ ಚಿತ್ರಗಳಾದ ಭವಾಯ್ (1980), ಸದ್ಗತಿ (1981), ಅರ್ಧ ಸತ್ಯ (1982), ಮಿರ್ಚ್ ಮಸಾಲಾ (1986) ಹಾಗೂ ಧಾರವಿ (1992) ಚಿತ್ರಗಳಿಂದ ಪ್ರವರ್ಧಮಾನಕ್ಕೆ ಬಂದರು. ಇದೇ ಕಾಲಘಟ್ಟದಲ್ಲಿ ದೂರದರ್ಶನ ರಾಷ್ಟ್ರೀಯ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಕಕ್ಕಾಜಿ ಕಯ್ಯನ್ (1986) ಎಂಬ ಧಾರಾವಾಹಿ ಅವರನ್ನು ರಾತ್ರೋ ರಾತ್ರಿ ವಿಖ್ಯಾತರನ್ನಾಗಿಸಿತು.

    ದಂತಕತೆಗಳ ಆರಂಭಿಕ ದಿನಗಳು

    ದಂತಕತೆಗಳ ಆರಂಭಿಕ ದಿನಗಳು

    1970ರ ದಶಕದಲ್ಲಿ ಜೀವನ ಆರಂಭಿಸಿದ ಅವರು, ಪ್ರಖ್ಯಾತ ನಟರಾದ ಅಮರೇಶ್ ಪುರಿ, ಅನುಪಮ್ ಖೇರ್, ಶಬಾನಾ ಆಜ್ಮಿ, ಸ್ಮಿತಾ ಪಾಟೀಲ್ ಮುಂತಾದವರೊಂದಿಗೆ ಗುರುತಿಸಿಕೊಂಡಿದ್ದರು. ಕಾಲ ಕಳೆದಂತೆ ಕಮರ್ಷಿಯಲ್ ಚಿತ್ರಗಳಲ್ಲೂ ಕಾಣಿಸಿಕೊಂಡ ಅವರು ಅಲ್ಲೂ ಜನಮನ ಗೆದ್ದರು.

    ಭಾರತದ ಗಡಿ ದಾಟಿದ ಪ್ರತಿಭೆ

    ಭಾರತದ ಗಡಿ ದಾಟಿದ ಪ್ರತಿಭೆ

    ಇವರ ಅಭಿನಯ ಹಾಗೂ ವಿಶಿಷ್ಠವಾದ ಕಂಠಸಿರಿ ಅವರನ್ನು, ಅಂತಾರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿಸಿತು. ಹಾಗಾಗಿ ಅವರು ಹಾಲಿವುಡ್ ಚಿತ್ರಗಳಾದ ಸಿಟಿ ಆಫ್ ಜಾಯ್ (1992), ವೂಲ್ಫ್ (1994), ದ ಘೋಸ್ಟ್ ಆ್ಯಂಡ್ ಡಾರ್ಕ್ ನೆಸ್ (1996) ಚಿತ್ರಗಳಲ್ಲಿ ನಟಿಸುವಂತಾಯ್ತು. ವಾರ್ ಎಂಬ ಇಂಗ್ಲೀಷ್ ಚಿತ್ರದಲ್ಲಿ ಅವರು, ಜನರಲ್ ಜಿಯಾ-ಉಲ್-ಹಕ್ ಪಾತವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರಲ್ಲದೆ, ಖ್ಯಾತ ಕಲಾವಿದರಾದ ಟಾಮ್ ಹ್ಯಾಂಕ್ಸ್ ಹಾಗೂ ಏಂಜಲೀನಾ ಜೂಲಿ ಜತೆಗೆ ನಟಿಸಿದ್ದರು.

    ಅರಸಿ ಬಂದ ಗೌರವ ಹಲವಾರು

    ಅರಸಿ ಬಂದ ಗೌರವ ಹಲವಾರು

    ಚಿತ್ರರಂಗಕ್ಕೆ ಸಲ್ಲಿಸಿರುವ ಅವರ ಅನುಪಮ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಅವರಿಗೆ 1980ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದಲ್ಲದೆ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಫಿಲಂಫೇರ್ ಪ್ರಶಸ್ತಿಗಳೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.

    ಗಣ್ಯರಿಂದ ಕಂಬನಿ

    ಗಣ್ಯರಿಂದ ಕಂಬನಿ

    ಓಂ ಪುರಿಯವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಹಲವಾರು ಜನರು ಶೋಕ ವ್ಯಕ್ತಪಡಿಸಿದ್ದಾರೆ. ಹಿಂದಿ ಚಿತ್ರರಂಗದ ಹಿರಿಯ ನಟ ಅನುಪಮ್ ಖೇರ್, ನಟಿ ಜೂಹಿ ಚಾವ್ಲಾ, ಸೌರಭ್ ಪಂತ್, ನಿರ್ದೇಶಕ ಕರಣ್ ಜೋಹರ್ ಹಾಗೂ ಮತ್ತಿತರರು, ಕ್ರೀಡಾ ಲೋಕದಿಂದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಶೂಟರ್ ರಾಜವರ್ಧನ ರಾಥೋಡ್ ಮತ್ತಿತರರು ಶೋಕ ವ್ಯಕ್ತಪಡಿಸಿದ್ದರೆ, ರಾಜಕೀಯ ವಲಯದಿಂದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಗೂ ಇತರರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    English summary
    Om Puri, one of the most talented, Padmashri winning actor died at 66. The veteran actor starred in several award-winning Indian movies and also featured in western movies also
    Friday, January 6, 2017, 13:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X