ವಿಶ್ವಸಂಸ್ಥೆಯಲ್ಲಿ ಪ್ರಿಯಾಂಕಾ ಚೋಪ್ರಾ ವಿರುದ್ಧ ದೂರು ಸಲ್ಲಿಸಿದ್ದ ಪಾಕಿಸ್ತಾನಕ್ಕೆ ಮುಖಭಂಗ

ಯೂನಿಸೆಫ್ನ ಸೌಹಾರ್ದಯುತ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನ ಆ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಪಾಕಿಸ್ತಾನ ವಿಶ್ವಸಂಸ್ಥೆಗೆ ದೂರು ನೀಡಿತ್ತು.

ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಝಾರಿ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆಯ ವಕ್ತಾರ ''ಪ್ರಿಯಾಂಕಾ ಚೋಪ್ರಾ ಅವರಿಗೆ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ'' ಎಂದು ಹೇಳುವ ಮೂಲಕ ಪಾಕಿಸ್ತಾನದ ಮನವಿಯನ್ನ ತಿರಸ್ಕರಿಸಿದೆ.

ಇದ್ದಕ್ಕಿದ್ದಂತೆ ಪಾಕಿಸ್ತಾನದ ಕೋಪ ಪ್ರಿಯಾಂಕಾ ಚೋಪ್ರಾ ಮೇಲೆ ತಿರುಗಿದ್ದೇಕೆ?

ಯುನಿಸೆಫ್ನ ಸೌಹಾರ್ದಯುತ ರಾಯಭಾರಿಗಳು ''ತಾವು ಆಸಕ್ತಿ ಹೊಂದಿರುವ ಹಾಗೂ ಕಾಳಜಿ ಹೊಂದಿರುವ ವಿಷಯಗಳ ಬಗ್ಗೆ ಸ್ವಂತ ಸಾಮರ್ಥ್ಯದಲ್ಲಿ ಮಾತನಾಡುವ ಹಕ್ಕು ಹೊಂದಿದ್ದಾರೆ'' ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯಾ ಗುಟರೆಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ತಮ್ಮ ದಿನನಿತ್ಯದ ಮಾತುಕತೆಯಲ್ಲಿ ತಿಳಿಸಿದ್ದಾರೆ.

United Nations Rejects Complaint Against Priyanka Chopra

''ಅವರ ವೈಯಕ್ತಿಕ ದೃಷ್ಟಿಕೋನಗಳು ಮತ್ತು ಕೆಲಸಗಳು ಯುನಿಸೆಫ್ನ ಅಭಿಪ್ರಾಯಗಳನ್ನ ಪ್ರತಿಬಿಂಬಿಸುವುದಿಲ್ಲ. ಯಾವಾಗ ಯುನಿಸೆಫ್ನಗೆ ಸಂಬಂಧ ಪಟ್ಟ ವಿಚಾರಗಳ ಕುರಿತು ಮಾತನಾಡುತ್ತಾರೋ ಆಗ ಅವರು ಯುನಿಸೆಫ್ನ ಬದ್ಧತೆಗಳಿಗೆ ಬದ್ಧವಾಗಿರಬೇಕು. ಯೂನಿಸೆಫ್ನ ಸೌಹಾರ್ದಯುತ ರಾಯಭಾರಿಗಳು ಮಕ್ಕಳ ಕಲ್ಯಾಣ ಅಭಿವೃದ್ದಿಯ ಕಾರಣಕ್ಕಾಗಿ ತಮ್ಮ ವೈಯಕ್ತಿಕ ಸಮಯ ಮತ್ತು ಖ್ಯಾತಿಯನ್ನ ನೀಡಿರುವಂತ ವ್ಯಕ್ತಿಗಳಾಗಿರುತ್ತಾರೆ. ಅವರ ಬಗ್ಗೆ ಗೌರವವಿದೆ'' ಎಂದು ಇದೇ ಸಮಯದಲ್ಲಿ ಹೇಳಿದ್ದಾರೆ.

United Nations Rejects Complaint Against Priyanka Chopra

ಅಂದ್ಹಾಗೆ, ಪ್ರಿಯಾಂಕಾ ಚೋಪ್ರಾ ಅವರು ಫೆಬ್ರವರಿ 26 ರಂದು ಟ್ವಿಟ್ಟರ್ ಮೂಲಕ, ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನ ಬೆಂಬಲಿಸಿದ್ದರು. ''ಜೈ ಹಿಂದ್, ಇಂಡಿಯನ್ ಆರ್ಮಿ ಫೋರ್ಸ್'' ಎಂದು ಟ್ವೀಟ್ ಮಾಡಿ ಭಾರತದ ಧ್ವಜ ಮತ್ತು ನಮಸ್ತೆಯ ಎಮೋಜಿಗಳನ್ನ ಹಾಕಿದ್ದರು. ಇದೇ ವಿಚಾರದಲ್ಲಿ ಅಮೆರಿಕನ್ ಟಿವಿ ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದಾಗಲೂ, ಕೆಂದ್ರಸರ್ಕಾರದ ಕ್ರಮವನ್ನ ಸಮರ್ಥಿಸಿಕೊಂಡಿದ್ದರು.

ಪ್ರಿಯಾಂಕಾ ಅವರ ಈ ಮಾತು ಮತ್ತು ನಡೆಯನ್ನ ಖಂಡಿಸಿದ್ದ ಪಾಕಿಸ್ತಾನ ರಕ್ಷಣ ಇಲಾಖೆ, ಪ್ರಿಯಾಂಕಾ ಚೋಪ್ರಾ ವಿರುದ್ಧ ಕ್ರಮ ಜರುಗಿಸಬೇಕು, ಯುನಿಸೆಫ್ನನಲ್ಲಿ ಅವರು ಹೊಂದಿರುವ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದರು. ಅಂತಿಮವಾಗಿ, ಈ ಮನವಿಗೆ ತಿರಸ್ಕಾರವಾಗಿದ್ದು, ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.

More from Filmibeat

English summary
UNICEF goodwill ambassador Priyanka chopra retains right to speak in personal capacity: united nations
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X