ನಟಿ ಸಂಜನಾ ಬಗ್ಗೆ ನಿಮಗೆ ತಿಳಿದಿರದ ರಹಸ್ಯಗಳು

By Rajendra

ನಟಿ ಸಂಜನಾ ಎಂದರೆ ಯಾರಿಗೇ ಆಗಲಿ ಥಟ್ಟನೆ ನೆನಪಿಗೆ ಬರುವುದು 'ಗಂಡ ಹೆಂಡತಿ' (2006) ಚಿತ್ರ. ಈ ಸಿನಿಮಾ ಅವರ ಪಾಲಿಗೆ ಖ್ಯಾತಿ ತರುವುದಕ್ಕಿಂತಲೂ ಹೆಚ್ಚಾಗಿ ಅಪಖ್ಯಾತಿ ತಂದಿತು. ಅದರಲ್ಲಿನ ಹಾಟ್ ಸನ್ನಿವೇಶಗಳೇ ಇದಕ್ಕೆ ಕಾರಣ. ಈ ವರ್ಷ ಬಹಳ ಸುದ್ದಿಯಲ್ಲಿದ್ದ ತಾರೆಗಳಲ್ಲಿ ಸಂಜನಾ ಅವರೂ ಒಬ್ಬರು.

ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ರಿಯಾಲಿಟಿ ಶೋಗೆ ಅಡಿಯಿಟ್ಟ ಸಂಜನಾ ತಮ್ಮ ಅಭಿಮಾನಿಗಳಿಗೆ ಇನ್ನಷ್ಟು ಹತ್ತರವಾದರು. ಅವರನ್ನು ಜನ ಹತ್ತಿರದಿಂದ ನೋಡುವಂತಾಯಿತು. ಸದಾ ಮೇಕಪ್ ನಲ್ಲೇ ಕಳೆಯುತ್ತಿದ್ದದ್ದು, ನಟ ತಿಲಕ್ ಬಗ್ಗೆ ಬಾಯಿ ಬಂದಂತೆ ಮಾತನಾಡಿ ಚರ್ಚೆಗೆ ಗ್ರಾಸವಾಗಿದ್ದರು.

ಇದೆಲ್ಲಾ ಮುಗಿದು ಹತ್ತಿರ ಹತ್ತಿರ ಒಂದು ವರ್ಷವಾಗುತ್ತಿದೆ. ಆದರೂ ನೆನಪುಗಳು ಮಾತ್ರ ಇನ್ನೂ ಹಸಿಹಸಿಯಾಗಿವೆ. ಆ ಸವಿಸವಿ ನೆನಪುಗಳ ಜೊತೆಗೆ ಸಂಜನಾ ಬಗ್ಗೆ ಗೊತ್ತಿಲ್ಲದ ಕೆಲವು ಸಂಗತಿಗಳನ್ನು ಸ್ಲೈಡ್ ನಲ್ಲಿ ನೋಡಿ. ಅಂದಹಾಗೆ ಸಂಜನಾಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಈ ವಿಶೇಷ ಫೋಟೋ ಫೀಚರ್.

ನಟಿ ಆಗದೆ ಇದ್ದರೆ ಇನ್ನೇನಾಗುತ್ತಿದ್ದರು ಸಂಜನಾ

ನಟಿ ಆಗದೆ ಇದ್ದರೆ ಇನ್ನೇನಾಗುತ್ತಿದ್ದರು ಸಂಜನಾ

ಒಂದು ವೇಳೆ ಸಂಜನಾ ಅವರು ನಟಿ ಆಗದೆ ಇದ್ದಿದ್ದರೆ ಇನ್ನೇನಾಗುತ್ತಿದ್ದರು. ಅವರೇ ಈ ಹಿಂದೆ ಬಹುಶಃ ಪೈಲಟ್ ಆಗಿರುತ್ತಿದ್ದೆ ಎಂದಿದ್ದರು.

ಸಂಜನಾ ಡ್ರೀಮ್ ರೋಲ್ ಯಾವುದು

ಸಂಜನಾ ಡ್ರೀಮ್ ರೋಲ್ ಯಾವುದು

ಸಾಮಾನ್ಯವಾಗಿ ಎಲ್ಲಾ ನಟ ನಟಿಯರಿಗೆ ಡ್ರೀಮ್ ರೋಲ್ ಅಂತ ಒಂದಿರುತ್ತದೆ. ಈ ವಿಷಯಕ್ಕೆ ಬಂದರೆ ಸಂಜನಾ ಅವರಿಗೂ ಆ ರೀತಿಯ ಕೋರಿಕೆ ಇದೆ. ಅನುಷ್ಕಾ ಶೆಟ್ಟಿ ತೆಲುಗಿನಲ್ಲಿ ಮಾಡಿದ್ದ 'ಅರುಂಧತಿ'ಯಂತಹ ಪಾತ್ರ ಮಾಡಬೇಕು ಎಂಬುದು.

ಐಶ್ವರ್ಯಾ ರೈ ಎಂದರೆ ಸಂಜನಾಗೆ ಇಷ್ಟ

ಐಶ್ವರ್ಯಾ ರೈ ಎಂದರೆ ಸಂಜನಾಗೆ ಇಷ್ಟ

ಇನ್ನು ನೆಚ್ಚಿನ ತಾರೆ ವಿಚಾರಕ್ಕೆ ಬಂದರೆ ಐಶ್ವರ್ಯಾ ರೈ ಎಂದರೆ ಸಂಜನಾಗೆ ಇಷ್ಟ. ಎಲ್ಲ ತರಹದ ವ್ಯಕ್ತಿಗಳು, ಧರ್ಮಗಳನ್ನು ಇಷ್ಟಪಡುವ ಐಶ್ವರ್ಯಾ ರೈ ವ್ಯಕ್ತಿತ್ವಕ್ಕೆ ಸಂಜನಾ ಫಿದಾ ಆಗಿದ್ದಾರೆ.

ಎಕ್ಸ್ ಫೋಸಿಂಗ್ ಬಗ್ಗೆ ತಮ್ಮದೇನು ಅಭ್ಯಂತರವಿಲ್ಲ

ಎಕ್ಸ್ ಫೋಸಿಂಗ್ ಬಗ್ಗೆ ತಮ್ಮದೇನು ಅಭ್ಯಂತರವಿಲ್ಲ

ಚಿತ್ರದಲ್ಲಿ ಎಕ್ಸ್ ಫೋಸಿಂಗ್ ಬಗ್ಗೆ ತಮಗೇನು ಅಭ್ಯಂತರವಿಲ್ಲ ಎನ್ನುವ ಸಂಜಾನಾ ಅವರಿಗೆ ತಿನ್ನುವುದೆಂದರೆ ಇಷ್ಟ.

ಸಂಜನಾಗೆ ಹಲವು ಭಾಷೆಗಳು ಗೊತ್ತು

ಸಂಜನಾಗೆ ಹಲವು ಭಾಷೆಗಳು ಗೊತ್ತು

ಸಂಜನಾ ಅವರಿಗೆ ಕನ್ನಡ ಸೇರಿದಂತೆ ಹಲವಾರು ಭಾಷೆಗಳು ಗೊತ್ತು. ಹಿಂದಿ, ಇಂಗ್ಲಿಷ್, ಮರಾಠಿ, ತೆಲುಗು, ತಮಿಳು, ಪಂಜಾಬಿ, ಗುಜರಾತಿ ಹಾಗೂ ಸಿಂಧಿ.

ಸಂಜನಾ ಅಡ್ಡ ಹೆಸರು ಏನು ಗೊತ್ತೇ?

ಸಂಜನಾ ಅಡ್ಡ ಹೆಸರು ಏನು ಗೊತ್ತೇ?

ಎಲ್ಲರಿಗೂ ಒಂದು ಅಡ್ಡಹೆಸರು ಇರುತ್ತದೆ. ಸಂಜನಾ ವಿಚಾರಕ್ಕೆ ಬಂದರೆ ಅವರನ್ನು ಅರ್ಚು ಎಂದು ಕರೆಯುತ್ತಾರೆ. ಅವರ ಮೂಲ ಹೆಸರು ಅರ್ಚನಾ ಗಲ್ರಾಣಿ.

ಸಂಜನಾ ದೈವದತ್ತ ಆಭರಣಗಳು

ಸಂಜನಾ ದೈವದತ್ತ ಆಭರಣಗಳು

ಪ್ರತಿಯೊಬ್ಬ ತಾರೆಗೂ ಆಕರ್ಷಕವಾದ ಅಂಗಗಳು ದೈವದತ್ತವಾಗಿ ಬಂದಿರುತ್ತವೆ. ಸಂಜನಾ ಅವರ ಪ್ರಕಾರ ಅವರ ಕಣ್ಣು ಹಾಗೂ ನಗುವೇ ಅವರು ದೈವದತ್ತವಾಗಿ ಪಡೆದುಕೊಂಡ ಆಭರಣಗಳು.

ಇನ್ನೂ ಓದಬೇಕು ಎಂದಿತ್ತು ಆದರೆ

ಇನ್ನೂ ಓದಬೇಕು ಎಂದಿತ್ತು ಆದರೆ

ಪಿಯುಸಿ ಮುಗಿದ ಬಳಿಕ ಸಂಜನಾ ಅವರಿಗೆ ಇನ್ನೂ ಓದಬೇಕು ಎಂಬ ಮಹದಾಸೆ ಇತ್ತು. ಆದರೆ ಬಣ್ಣದ ವಿಶ್ವಕ್ಕೆ ಅಡಿಯಿಟ್ಟ ಮೇಲೆ ಅವರ ಪಾಲಿಗೆ ಅದೇ ವಿಶ್ವವಿದ್ಯಾಲಯವಾಯಿತು.

ಕಪ್ಪು ಮತ್ತು ನೀಲಿ ಬಣ್ಣಗಳು ಇಷ್ಟ

ಕಪ್ಪು ಮತ್ತು ನೀಲಿ ಬಣ್ಣಗಳು ಇಷ್ಟ

ನೆಚ್ಚಿನ ಬಣ್ಣಗಳ ವಿಚಾರಕ್ಕೆ ಬರುವುದಾದರೆ ಸಂಜನಾ ಅವರಿಗೆ ಕಪ್ಪು ಮತ್ತು ನೀಲಿ ಬಣ್ಣಗಳು ಇಷ್ಟ.

ಆಂಧ್ರ ಮಸಾಲೆಗಳೆಂದರೆ ಬಲು ಪ್ರೀತಿ

ಆಂಧ್ರ ಮಸಾಲೆಗಳೆಂದರೆ ಬಲು ಪ್ರೀತಿ

ತಿಂಡಿ ತೀರ್ಥ ಊಟದ ವಿಚಾರಕ್ಕೆ ಬಂದರೆ ಪಿಜ್ಜಾ, ಪಿಸ್ತಾ, ಇಟಾಲಿಯನ್, ಚೈನೀಸ್ ಹಾಗೂ ಆಂಧ್ರದ ಮಸಾಲೆ ಪದಾರ್ಥಗಳೆಂದರೆ ಬಾಯಿ ಚಪ್ಪರಿಸುತ್ತಾರೆ.

ಸಂಜನಾಗೆ ಇವೆಂದರೆ ಬಲು ಇಷ್ಟ

ಸಂಜನಾಗೆ ಇವೆಂದರೆ ಬಲು ಇಷ್ಟ

ಸಂಜನಾ ಅವರನ್ನು ಎಂದಾದರೂ ಒಮ್ಮೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೀರಾ? ಅವರ ಕಿವಿಗಳನ್ನೊಮ್ಮೆ ಗಮನಿಸಿ. ಹಾಗೆಯೇ ಅವರ ಕೈಗಳನ್ನೂ ನೋಡಿ. ತರಹೇವಾರಿ ಕಿವಿಯೋಲೆ ಹಾಗೂ ಕೈ ಕಡಗಳನ್ನು ಕಾಣಬಹುದು.

ಸಂಜನಾ ಫೇವರಿಟ್ ಕಾರುಗಳು

ಸಂಜನಾ ಫೇವರಿಟ್ ಕಾರುಗಳು

ಸಂಜನಾ ಫೇವರಿಟ್ ಕಾರುಗಳು ಬಿಎಂಡಬ್ಲ್ಯು, ಸ್ಕೋಡಾ, ಮರ್ಸಿಡೆಸ್ ಬೆಂಜ್. ಈಗಾಗಲೆ ಅವರು ಬಿಎಂಡಬ್ಲ್ಯು ಕಾರಿನ ಒಡತಿಯಾಗಿದ್ದಾರೆ.

ಬೇರೆಯವರಲ್ಲಿ ಅವರಿಗೆ ಇಷ್ಟವಾದ ಗುಣಗಳು

ಬೇರೆಯವರಲ್ಲಿ ಅವರಿಗೆ ಇಷ್ಟವಾದ ಗುಣಗಳು

ಬೇರೆಯವರಲ್ಲಿ ಇಷ್ಟವಾಗುವ ಗುಣಗಳೆಂದರೆ ಮುಗ್ಧತೆ, ಪ್ರಾಮಾಣಿಕತೆ, ಕಷ್ಟಪಡುವ ಗುಣ, ಪ್ರೀತಿಸುವ ಸ್ವಭಾವ.

ನೆಚ್ಚಿನ ಚಿತ್ರಗಳಲ್ಲಿ ಟೈಟಾನಿಕ್ ಸಹ ಒಂದು

ನೆಚ್ಚಿನ ಚಿತ್ರಗಳಲ್ಲಿ ಟೈಟಾನಿಕ್ ಸಹ ಒಂದು

ನೆಚ್ಚಿನ ಚಿತ್ರಗಳು ಟೈಟಾನಿಕ್, ಸ್ಲೈಡರ್ ಮ್ಯಾನ್, ಮ್ಯಾಟ್ರಿಕ್ಸ್, ದಿಲ್ ವಾಲೆ ದುಲ್ಹನಿಯಾ ಲೇಜಾಯೇಂಗೆ.

ಕ್ರಿಕೆಟ್ ಜೊತೆಗೆ ಎಆರ್ ರೆಹಮಾನ್ ಸಂಗೀತವೂ ಇಷ್ಟ

ಕ್ರಿಕೆಟ್ ಜೊತೆಗೆ ಎಆರ್ ರೆಹಮಾನ್ ಸಂಗೀತವೂ ಇಷ್ಟ

ಕ್ರಿಕೆಟ್ ಎಂದರೆ ಇಷ್ಟ ಹಾಗೆಯೇ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಹಾಡುಗಳೆಂದರೆ ಎಲ್ಲಿಲ್ಲದ ಅಕ್ಕರೆ.

More from Filmibeat

English summary
Kannada actress Sanjjanaa celebrating her birthday on 10th October. Here is the unknown facts about Sanjjanaa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X