twitter
    For Quick Alerts
    ALLOW NOTIFICATIONS  
    For Daily Alerts

    ಒಂದು ಹಾಡಿಗೆ ಚಿ.ಉದಯಶಂಕರ್ ಪಡೆಯುತ್ತಿದ್ದ ಸಂಭಾವನೆ ಕೇವಲ 200 ರೂಪಾಯಿ!

    By Naveen
    |

    Recommended Video

    ಕಡಿಮೆ ಸಂಭಾವನೆಗೆ ಹಾಡು ಬರೆಯುತ್ತಿದ್ದ ಚಿ.ಉದಯಶಂಕರ್..! | Filmibeat Kannada

    ಇಂದು ಕನ್ನಡ ಚಿತ್ರರಂಗದ ಸಾಹಿತ್ಯ ರತ್ನ ಚಿ.ಉದಯಶಂಕರ್ ಅವರ ಹುಟ್ಟುಹಬ್ಬದ ಸವಿನೆನಪು. ಸಾವಿರಾರು ಹಾಡುಗಳನ್ನು ಬರೆದ ಈ ಸರಸ್ವತಿ ಪುತ್ರನ ಜನ್ಮದಿನ ಅಂಗವಾಗಿ ಅವರ ಬಗ್ಗೆ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೇವೆ.

    ಚಿ.ಉದಯಶಂಕರ್ ಪೆನ್ ಹಿಡಿದು ಕುಳಿತರೆ ಬರೆದು ಬರೆದು ಕೊಡುತ್ತಿದ್ದರಂತೆ. ಯಾವಾಗಲೂ ಒಂದು ಸಣ್ಣ ಪೇಪರ್ ತುಂಡಿನಲ್ಲಿ ಅವರು ಬರೆಯುತ್ತಿದ್ದರಂತೆ. ಅವರು ಕೊಟ್ಟ ಹಾಡಿನಲ್ಲಿ ಯಾವುದನ್ನು ಇಟ್ಟುಕೊಳ್ಳಬೇಕು ಯಾವುದನ್ನು ಬಿಡಬೇಕು ಅಂತ ನಿರ್ದೇಶಕರಿಗೆ ಗೊತ್ತಾಗುತಿರಲಿಲ್ಲವಂತೆ. ಅದ್ಬುತ ಸಾಲುಗಳನ್ನು ಹೊಂದಿರುವ ಸಾಹಿತ್ಯದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಿರ್ದೇಶಕರಿಗೆ ತಿಳಿಯದಾಗುತ್ತಿಂತೆ.

     ಅಣ್ಣಾವ್ರ 'ಭಾಗ್ಯವಂತರು' ಸಿನಿಮಾ ಹುಟ್ಟಿದ ರೋಚಕ ಕಥೆ ಹೇಳಿದ ಭಾರ್ಗವ ಅಣ್ಣಾವ್ರ 'ಭಾಗ್ಯವಂತರು' ಸಿನಿಮಾ ಹುಟ್ಟಿದ ರೋಚಕ ಕಥೆ ಹೇಳಿದ ಭಾರ್ಗವ

    Unknown facts about Chi Udayashankar

    ಉದಯ ಶಂಕರ್ ಹಾಡಿಗಳನ್ನು ಅತಿ ವೇಗವಾಗಿ ಬರೆಯುತ್ತಿದ್ದರು. ''ಆಡಿಸಿ ನೋಡು ಬೀಳಿಸಿ ನೋಡು..'' ಹಾಡನ್ನು ಕೇವಲ 5 ನಿಮಿಷದಲ್ಲಿ, ''ನಲಿವ ಗುಲಾಬಿ ಹೂವೆ..'' ಹಾಡನ್ನು 10 ನಿಮಿಷದಲ್ಲಿ ಬರೆದಿದ್ದರಂತೆ. ನಿರ್ಮಾಪಕರೊಬ್ಬರು ಒಂದು ನಮಗೆ ಮಲ್ಲಿಗೆ ಹೂವಿನ ರೀತಿಯ ಒಂದು ಸುಂದರ ಹಾಡನ್ನು ಬರೆದು ಕೊಡಿ ಎಂದಾಗ ಕ್ಷಣದಲ್ಲಿಯೇ 'ಆಹಾ.. ಮೈಸೂರು ಮಲ್ಲಿಗೆ...' ಹಾಡನ್ನು ರಚಿಸಿದರಂತೆ. ಈಗ ಒಂದು ಹಾಡು ಬರೆದು ಕೊಟ್ಟರೆ ನೀವು ಕೇಳಿದನ್ನು ಕೋಡುತ್ತೇವೆ ಎಂದಾಗ ಪಟ್ ಅಂತ ಪೆನ್ ಹಿಡಿದು 'ಏನೇ ಕೇಳು ಕೊಡುವೆ ನಿನಗೆ ನಾನಿಗ..' ಹಾಡನ್ನು ಬರೆದರಂತೆ.

    Unknown facts about Chi Udayashankar

    ಇನ್ನು ಸಾವಿರಾರು ಸೂಪರ್ ಹಿಟ್ ಹಾಡುಗಳನ್ನು ಬರೆದ ಚಿ.ಉದಯಶಂಕರ್ ಒಂದು ಹಾಡಿಗೆ ಎಷ್ಟು ಸಂಭಾವನೆ ಪಡೆಯುತ್ತಿದ್ದರು ಎನ್ನುವ ಕುತೂಹಲ ಎಲ್ಲರಿಗೆ ಇರುತ್ತದೆ. ಅಷ್ಟು ದೊಡ್ಡ ಸಾಹಿತಿ ಆಗಿದ್ದ ಅವರು ಒಂದು ಹಾಡಿಗೆ ತೆಗೆದುಕೊಳ್ಳುತ್ತಿದ್ದು ಕೇವಲ 200 ರೂಪಾಯಿ ಅಂತೆ. ದೊಡ್ಡ ಸಿನಿಮಾವಾದರೂ 200 ರೂಪಾಯಿ ಪಡೆದು ಹಾಡು ಬರೆಯುತ್ತಿದ್ದರಂತೆ ಉದಯ ಶಂಕರ್.

    English summary
    Unknown facts about kannada popular lyrics writer Chi Udayashankar.
    Sunday, February 18, 2018, 13:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X