ಮಾರಿಮುತ್ತು ರಿಯಲ್ ಸ್ಟಾರ್ ಉಪೇಂದ್ರ ಕೈಗೆ ಸಿಕ್ಕ ರೋಚಕ ಘಟನೆ!

By Naveen

Recommended Video

ಮಾರಿಮುತ್ತು ಉಪೇಂದ್ರ ಅವರ ಕೈಗೆ ಸಿಕ್ಕ ರೋಚಕ ಕಥೆ | Filmibeat Kannada

ಕೆಲವೊಂದು ಸಿನಿಮಾದ ಕೆಲವು ಪಾತ್ರಗಳು ಪ್ರೇಕ್ಷಕರ ಮನಸಿನಲ್ಲಿ ಸದಾ ಉಳಿಯುತ್ತದೆ. ಕೆಲವು ಕಲಾವಿದರನ್ನು ಜನ ಅವರ ಪಾತ್ರಗಳು ಮೂಲಕ ಗುರುತಿಸುತ್ತಾರೆ. ಅಂತಹ ಒಂದು ಪಾತ್ರ ಮಾರಿಮುತ್ತು. 'ಉಪೇಂದ್ರ' ಸಿನಿಮಾದಲ್ಲಿ ಬರುವ ಈ ಮಾರಿಮುತ್ತು ಪಾತ್ರ ಒಬ್ಬ ದೊಡ್ಡ ನಾಯಕಿಯ ಪಾತ್ರವಲ್ಲ. ಆದರೂ ಜನ ಇಂದಿಗೂ ಆ ಪಾತ್ರವನ್ನು ಮರೆತಿಲ್ಲ.

ಮಾರಿಮುತ್ತು ಪಾತ್ರ ಮಾಡಿದ್ದ ಹಿರಿಯ ಪೋಷಕ ನಟಿ ಸರೋಜಮ್ಮ ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರ ಆಸೆಯನ್ನು ಈಡೇರಿಸಲು ಅವರ ಮೊಮ್ಮಕ್ಕಳು ಚಿತ್ರರಂಗಕ್ಕೆ ಬಂದಿದ್ದಾರೆ. ಜಯಶ್ರೀ ಆರಾಧ್ಯ ಈಗ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮೊದಲ ಸಿನಿಮಾ 'ಪುಟ್ಟರಾಜು ಲವರ್ ಆಫ್ ಶಶಿಕಲಾ' ಬಗ್ಗೆ ಮಾತನಾಡಿದ ಅವರು ತಮ್ಮ ಅಜ್ಜಿ ಸರೋಜಮ್ಮ ಅವರ ಸಿನಿಮಾ ಎಂಟ್ರಿಯ ಹಿಂದೆ ಇದ್ದ ಯಾರಿಗೂ ತಿಳಿಯದ ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಸಿನಿಮಾನೇ ಅವರನ್ನು ಹುಡುಕಿಕೊಂಡು ಬಂತು

ಸಿನಿಮಾನೇ ಅವರನ್ನು ಹುಡುಕಿಕೊಂಡು ಬಂತು

ಸಿನಿಮಾ ಎನ್ನುವುದು ನೋಡುವುದಕ್ಕೆ ಚೆನ್ನಾಗಿ ಇರುವವರಿಗೆ ಮಾತ್ರ ಅಂತ ನಟಿ ಸರೋಜಮ್ಮ ಅಂದುಕೊಂಡಿದ್ದರಂತೆ. ಅದೇ ಕಾರಣಕ್ಕೆ ಅವರು ಒಂದು ಸರ್ಕಾರಿ ಕೆಲಸದಲ್ಲಿ ಇದ್ದರು. ನಟನೆ ಬಗ್ಗೆ ಅವರಿಗೆ ಯಾವುದೇ ಅನುಭವ ಇರಲಿಲ್ಲ. ನಿಜ ಹೇಳಬೇಕು ಅಂದರೆ ಸಿನಿಮಾ ಅವರನ್ನು ಹುಡುಕಿಕೊಂಡು ಬಂತೆ ವಿನಹಃ ಅವರು ಸಿನಿಮಾ ಹುಡುಕಿಕೊಂಡು ಹೋಗಿರಲಿಲ್ಲ.

ಮೂರು ಜನ ಹುಡುಗರು ದಿನ ಫಾಲೋ ಮಾಡುತ್ತಿದ್ದರು

ಮೂರು ಜನ ಹುಡುಗರು ದಿನ ಫಾಲೋ ಮಾಡುತ್ತಿದ್ದರು

ಸರೋಜಮ್ಮ ಅವರು ಆಗ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಇರುವಾಗ ಮೂರು ಜನ ಹುಡುಗರು ಅವರನ್ನು ದಿನ ಫಾಲೋ ಮಾಡುತ್ತಿದ್ದರಂತೆ. ಯಾರು ಈ ಹುಡುಗರು ಅಂತ ಸರೋಜಮ್ಮ ಭಯ ಪಟ್ಟಿದ್ದರಂತೆ. ಆದರೆ ಆ ಹುಡುಗರನ್ನು ಕಳುಹಿಸಿದ್ದು ನಟ ಉಪೇಂದ್ರ ಅವರಂತೆ.

ಉಪೇಂದ್ರ ಕೈಗೆ ಮಾರಿಮುತ್ತು ಸಿಕ್ಕಿದ್ದು

ಉಪೇಂದ್ರ ಕೈಗೆ ಮಾರಿಮುತ್ತು ಸಿಕ್ಕಿದ್ದು

ಮೊದಲು ಮಾರಿಮುತ್ತು ಪಾತ್ರಕ್ಕೆ ರಿಯಲ್ ರೌಡಿ ಯನ್ನು ಹಾಕುವ ಪ್ಲಾನ್ ಉಪ್ಪಿ ಮಾಡಿದ್ದರಂತೆ. ಆದರೆ ಕಾರಣಾಂತರಗಳಿಂದ ಅದು ಆಗಲಿಲ್ಲ. ಆಗ ಯಾರೋ ಒಮ್ಮೆ ಉಪ್ಪಿಗೆ ಸರೋಜಮ್ಮ ಫೋಟೋ ತೋರಿಸಿ ಇವರು ಮಾರಿಮುತ್ತು ಪಾತ್ರಕ್ಕೆ ಸೂಟ್ ಆಗುತ್ತಾರೆ ಅಂತ ಹೇಳಿದ್ದರಂತೆ. ಉಪೇಂದ್ರ ಫೋಟೋ ನೋಡಿ ಈ ಪಾತ್ರಕ್ಕೆ ಇವರೇ ಬೇಕು ಎಂದು ತೀರ್ಮಾನ ಮಾಡಿದರಂತೆ.

ಸುಳ್ಳು ಎಂದು ತಿಳಿದಿದ್ದ ಸರೋಜಮ್ಮ

ಸುಳ್ಳು ಎಂದು ತಿಳಿದಿದ್ದ ಸರೋಜಮ್ಮ

ನಮ್ಮ ಸಿನಿಮಾದಲ್ಲಿ ನಟಿಸಿ ಎಂದಾಗ ಸರೋಜಮ್ಮ ಇದೆಲ್ಲ ಸುಳ್ಳು ಎಂದು ತಿಳಿದಿದ್ದರಂತೆ. ಆದರೆ ಉಪೇಂದ್ರ ಅವರನ್ನು ಭೇಟಿ ಮಾಡಿದ ನಂತರ ಸಿನಿಮಾದಲ್ಲಿ ಅಭಿನಯಲು ಸರೋಜಮ್ಮ ಒಪ್ಪಿಕೊಂಡರಂತೆ.

ಸೂಪರ್ ಹಿಟ್ ಆಯ್ತು

ಸೂಪರ್ ಹಿಟ್ ಆಯ್ತು

ಆಮೇಲೆ 'ಉಪೇಂದ್ರ' ಸಿನಿಮಾ ಸೂಪರ್ ಹಿಟ್ ಆಯ್ತು. ಸಿನಿಮಾದ ಸರೋಜಮ್ಮ ಪಾತ್ರ ನೋಡಿ ಎಲ್ಲರೂ ಬೆರಗಾದರು. ಸರೋಜಮ್ಮ ಅವರ ಇಡೀ ಕುಟುಂಬ ಸಿನಿಮಾ ನೋಡಿ ಮೆಚ್ಚಿಕೊಂಡರು. ಈ ಚಿತ್ರದ ಮೂಲಕ ಸರೋಜಮ್ಮ ಅವರಿಗೆ ಹೆಚ್ಚು ಹೆಚ್ಚು ಸಿನಿಮಾ ಅವಕಾಶಗಳು ಸಿಕ್ಕವು.

More from Filmibeat

English summary
Unknown facts about kannada supporting actress, 'Upendra' movie Marimuttu fame Sarojamma. Sarojamma's granddaughter Jayshree Aradhya enters sandalwood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X