»   » ಶಿವಣ್ಣ ಹುಡುಗಿಯಾಗಿದ್ರೆ ನಾನೇ ಮದ್ವೆಯಾಗ್ತಿದ್ದೆ, ಉಪ್ಪಿ

ಶಿವಣ್ಣ ಹುಡುಗಿಯಾಗಿದ್ರೆ ನಾನೇ ಮದ್ವೆಯಾಗ್ತಿದ್ದೆ, ಉಪ್ಪಿ

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ 45ನೇ ವರ್ಷಕ್ಕೆ ಕಾಲಿಡ್ತಾ ಇರೋ ಶುಭ ಸಂದರ್ಭದಲ್ಲಿ ನಾವೂ ಈ ಡಿಫ್ರೆಂಟ್ ಸ್ಟಾರ್ ಗೆ ಶುಭ ಹಾರೈಸ್ತಾ ಉಪ್ಪಿ ಬಗ್ಗೆ ನಿಮ್ಗೆ ಗೊತ್ತಿಲ್ಲದ ಕೆಲವೊಂದು ವಿಷ್ಯಗಳನ್ನ ನಿಮಗೆ ತಿಳಿಸ್ತಾ ಇದ್ದೀವಿ. ಉಪೇಂದ್ರ ಅವರು ತಮ್ಮ ಹುಟ್ಟುಹಬ್ಬದ ಜೊತೆಗೆ ತಮ್ಮ ಲೇಟೆಸ್ಟ್ ಚಿತ್ರ 'ಉಪ್ಪಿ 2' ಚಿತ್ರವೂ ಆರಂಭವಾಗಿದೆ.

ಕಂಠೀರವ ಸ್ಟುಡಿಯೋದಲ್ಲಿ ಅಪಾರ ಅಭಿಮಾನಿಗಳ ನಡುವೆ ಉಪೇಂದ್ರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಎದುರು ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನ ಆಚರಿಸಿಕೊಂಡರು ಮಂಗಳವಾರ ರಾತ್ರಿಯೇ ಉಪ್ಪಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.

ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿರುವ ಉಪ್ಪಿ-2 ಚಿತ್ರಕ್ಕೆ ಕಂಠೀರವ ಸ್ಟುಡಿಯೋದಲ್ಲಿಮುಹೂರ್ತ ಕಾರ್ಯಕ್ರಮ ನೆರವೇರಿತು. ಇದಕ್ಕೆ ಅವರ ಅಪಾರ ಅಭಿಮಾನಿಗಳು ಸಾಕ್ಷಿಯಾದರು. ಅವರ ಹುಟ್ಟುಹಬ್ಬದ ಫೋಟೋಗಳ ಜೊತೆ ನಿಮಗೆ ಅವರ ಬಗ್ಗೆ ಗೊತ್ತಿಲ್ಲದ ಕೆಲವು ಸಂಗತಿಗಳು ಇಲ್ಲಿವೆ. ಸ್ಲೈಡ್ ಗಳಲ್ಲಿ ನೋಡುತ್ತಾ ಸಾಗಿ. ಉಪ್ಪಿಯ ಇನ್ನೊಂದು ಮುಖ ನಿಮಗೆ ಕಾಣುತ್ತದೆ.

ಉಪೇಂದ್ರ ಇಷ್ಟಪಡುವ ತಿಂಡಿ ಉಪ್ಪಿಟ್ಟಲ್ಲ

ನಿಮ್ಗೆಲ್ಲಾ ಉಪ್ಪಿ(ಟ್ಟು)-2 ಕೊಡೋಕೆ ಹೊರಟಿರೋ ರಿಯಲ್ ಸ್ಟಾರ್ ಉಪೇಂದ್ರ ತಿಂಡಿಗಳಲ್ಲಿ ಹೆಚ್ಚು ಇಷ್ಟಪಡೋದು ಉಪ್ಪಿಟ್ಟನ್ನಲ್ಲ ಚಿತ್ರಾನ್ನವನ್ನ.

ಉಪ್ಪಿ ಜಾಸ್ತಿ ಹೊತ್ತು ಕಾಲ ಕಳೆಯೋದು

ಸಿನಿಮಾ ಶೂಟಿಂಗ್ ಬಿಟ್ರೂ ಉಪ್ಪಿ ಜಾಸ್ತಿ ಹೊತ್ತು ಕಾಲ ಕಳೆಯೋದು ಯಾರ್ ಜೊತೆಗೆ ಗೊತ್ತ ಹೆಂಡ್ತಿ ಪ್ರಿಯಾಂಕಾ ಜೊತೆಗೂ ಅಲ್ಲ ಮಕ್ಕಳ ಜೊತೆಗೂ ಅಲ್ಲ ಸಿನಿಮಾ ಜೊತೆಗೆ..

ಉಪೇಂದ್ರ ಹೆಚ್ಚು ಇಷ್ಟಪಡುವ ಚಿತ್ರಗಳು

ಓಂ, ಉಪೇಂದ್ರದಂತಹಾ ಮಾಸ್ಟರ್ ಪೀಸ್ ಗಳನ್ನ ಸ್ಯಾಂಡಲ್ ವುಡ್ ಗೆ ಕೊಟ್ಟ ನಿರ್ದೇಶಕ, ನಟ ಉಪ್ಪಿ ಹೆಚ್ಚಾಗಿ ಇಷ್ಟಪಡೋದು ಅಣ್ಣಾವ್ರ ಸಿನಿಮಾಗಳನ್ನ.

ಶಿವಣ್ಣ ಅಂದ್ರೆ ಉಪ್ಪಿಗೆ ಪಂಚಪ್ರಾಣ

ಉಪ್ಪಿಗೆ ಸ್ಯಾಂಡಲ್ವುಡ್ ಕಿಂಗ್ ಶಿವಣ್ಣ ಅಂದ್ರೆ ಪಂಚಪ್ರಾಣ. ಶಿವಣ್ಣನ ಗುಣವನ್ನ ಮೆಚ್ಚೋ ಉಪ್ಪಿ, ಶಿವಣ್ಣ ಹುಡುಗಿಯಾಗಿದ್ರೆ ನಾನೇ ಮದ್ವೆಯಾಗ್ತಿದ್ದೆ ಅಂತ ಹೇಳಿದ್ದೂ ಇದೆ.

ಉಪೇಂದ್ರ ತಂದೆ ಅವರಿಗೆ ಅರ್ಥವಾಗಿಲ್ಲ

ಉಪೇಂದ್ರ ಡೈರೆಕ್ಟ್ ಮಾಡಿ ಆಕ್ಟ್ ಮಾಡಿದ್ದ 1999ರಲ್ಲಿ ಬಂದ ಉಪೇಂದ್ರ ಸಿನಿಮಾವನ್ನ 10, 15, 20 ಸಾರಿ ನೋಡಿ ತಲೆ ಕೆಡಿಸಿಕೊಂಡಿದ್ದಾರೆ. ಇಷ್ಟಕ್ಕೂ ಉಪೇಂದ್ರ ತಂದೆಯವರಿಗೇ ಈ ಸಿನಿಮಾ ಅರ್ಥವಾಗಿಲ್ಲವಂತೆ. ಇನ್ನ ಸಾಮಾನ್ಯ ಜನ್ರಿಗೆ ಅರ್ಥವಾಗೋದು ಸ್ವಲ್ಪ ಕಷ್ಟಾನೇ ಅಲ್ವ.

ಉಪ್ಪಿಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ

ಉಪ್ಪಿಗೆ ಆಟಗಳಲ್ಲಿ ಕ್ರಿಕೆಟ್ ಅಂದ್ರೆ ತುಂಬಾನೇ ಇಷ್ಟ ಆದ್ರೆ ಮನೆಗೆ ಹೋದ್ರೆ ಮಕ್ಕಳ ಜೊತೆ ಮಕ್ಕಳಾಗಿ ಇರಲು ಇಷ್ಟಪಡುತ್ತಾರೆ.

ಉಪ್ಪಿ ಚಿತ್ರರಂಗಕ್ಕೆ ಬಂದು ಎಷ್ಟು ವರ್ಷವಾಯಿತು?

ಉಪ್ಪಿ ಕನ್ನಡ ಚಿತ್ರರಂಗಕ್ಕೆ ಬಂದು ಇದು 25 ನೇ ವರ್ಷ.

ಉಪೇಂದ್ರ ನೆಚ್ಚಿನ ನಿರ್ದೇಶಕರು ಇವರೇ

ಓಂ, ಉಪೇಂದ್ರದಂತಹಾ ಟ್ರೆಂಡ್ ಸೆಟ್ಟಿಂಗ್ ಸಿನಿಮಾ ಕೊಟ್ಟ ನಿರ್ದೇಶಕ ಉಪೇಂದ್ರರ ಮೆಚ್ಚಿನ ನಿರ್ದೇಶಕರು ಅಂದ್ರೆ ಪುಟ್ಟಣ್ಣ ಕಣಗಾಲ್ , ಶಂಕರ್ ನಾಗ್.

ಮೊದಲು ಪ್ರೇಮಾಂಕುರವಾಗಿದ್ದು ಎಲ್ಲಿ?

ತೆಲುಗು ರಾ ಸಿನಿಮಾದಲ್ಲಿ ಉಪ್ಪಿ ಪ್ರಿಯಾಂಕಾ ಮೊದಲ ಪ್ರೇಮಾಂಕುರ ಆಮೇಲೆ ಹೆಚ್ ಟುಓ ಸಿನಿಮಾದಲ್ಲಿ ಪ್ರೇಮ ಬೆಳೆದು ಮದುವೆಯಾಗಿ ಈಗ ಉಪ್ಪಿ ಎರಡು ಮುದ್ದಿನ ಮಕ್ಕಳ ತಂದೆ.

Read more about: upendra, birthday
English summary
Real Star Upendra is the undisputed star of the Sandalwood film industry. The actor today (18th Sept) completes 25 glorious, eventful years in Kannada film industry. Here is tha unknown facts about Upendra.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada