For Quick Alerts
  ALLOW NOTIFICATIONS  
  For Daily Alerts

  ಸೇಲ್ಸ್ ಮ್ಯಾನ್ ಆಗಿದ್ದ ವಿಜಯ್ ಸೇತುಪತಿ ಸ್ಟಾರ್ ಆಗಿಬಿಟ್ರು!

  |

  'ಗೆಲುವಿನ ಅರಿವಿಲ್ಲದವನಂತೆ ಅಭ್ಯಾಸ ಮಾಡಬೇಕು, ಸೋಲಿನ ಅರಿವಿಲ್ಲದವನಂತೆ ಕೆಲಸ ಮಾಡಬೇಕು.' ಹೀಗೆ ನಮ್ಮ ಕೆಲಸ ನಾವು ಸರಿಯಾಗಿ ಮಾಡುತ್ತಿದ್ದರೆ, ಒಂದಲ್ಲ ಒಂದು ದಿನ ಯಶಸ್ಸು ಸಿಕ್ಕೆ ಸಿಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ನಟ ವಿಜಯ್ ಸೇತುಪತಿ.

  ಕಾಲಿವುಡ್ ನಟ ವಿಜಯ್ ಸೇತುಪತಿ ಸದ್ಯ ದಕ್ಷಿಣ ಭಾರತದಲ್ಲಿ ದೊಡ್ಡ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಎಲ್ಲ ರೀತಿಯ ಪಾತ್ರಗಳನ್ನು ಪರದೆ ಮೇಲೆ ಪ್ರದರ್ಶನ ಮಾಡುವ ಇವರ ನಟನ ಚಾತುರ್ಯದ ಬಗ್ಗೆ ಎಲ್ಲರಿಗೆ ವಿಶೇಷ ಗೌರವ ಇದೆ.

  ತಮಿಳು ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಪಡೆದಿರುವ ವಿಜಯ್ ಸೇತುಪತಿ ಒಂದು ಕಾಲದಲ್ಲಿ ಸೇಲ್ಸ್ ಮ್ಯಾನ್ ಆಗಿದ್ದರು. ನಟನೆಯ ಬಗ್ಗೆ ಗಂಧಗಾಳಿ ಗೊತ್ತಿಲ್ಲದ ಇವರು, ಒಂದು ಸಣ್ಣ ದೃಶ್ಯದಲ್ಲಿ ನಟಿಸೋಕ್ಕೆ ಭಯ ಪಟ್ಟಿದ್ದರು. ಇದೆಲ್ಲವನ್ನು ಮೀರಿ ಈ ನಟ ಇಂದು ಬೆಳೆದಿದ್ದಾರೆ. ಪ್ರಯತ್ನ ಇದ್ದರೇ ಯಾರು ಏನು ಬೇಕಾದರೂ ಸಾಧಿಸ ಬಹುದು ಎನ್ನುವುದನ್ನು ಸಾಬೀತು ಮಾಡಿದ್ದಾರೆ.

  'ವಿಕ್ರಂವೇದ' ವಿಜಯ್ ಸೇತುಪತಿಯ ಚೊಚ್ಚಲ ಕನ್ನಡ ಸಿನಿಮಾ ರೆಡಿ'ವಿಕ್ರಂವೇದ' ವಿಜಯ್ ಸೇತುಪತಿಯ ಚೊಚ್ಚಲ ಕನ್ನಡ ಸಿನಿಮಾ ರೆಡಿ

  ಅಂದಹಾಗೆ, ಇಂದು (ಡಿಸೆಂಬರ್ 24) ತಮ್ಮ ವಿಜಯ್ ಸೇತುಪತಿ ಚಿತ್ರರಂಗದಲ್ಲಿ 9 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿ ಇದ್ದಾರೆ.
  , ಅವರ ಬಗ್ಗೆಯ ಒಂದಷ್ಟು ಕುತೂಹಲಕಾರಿ ಸಂಗತಿ ಮುಂದಿದೆ ಓದಿ...

  ಚಿತ್ರರಂಗಕ್ಕೆ ಬಂದಿದ್ದು ಹಣ ಸಂಪಾದನೆಗಾಗಿ

  ಚಿತ್ರರಂಗಕ್ಕೆ ಬಂದಿದ್ದು ಹಣ ಸಂಪಾದನೆಗಾಗಿ

  ಬಿ ಕಾಮ್ ಮುಗಿಸಿದ್ದ ವಿಜಯ್ ಸೇತುಪತಿ ಹಣಗಳಿಸಲು ಸಿನಿಮಾರಂಗಕ್ಕೆ ಬಂದರು. ಬಡತನದಲ್ಲಿ ಬೆಳೆದ ಅವರಿಗೆ ದುಡ್ಡು ಮಾಡುವ ಗುರಿ ಅಷ್ಟೇ ಇತ್ತು. ಚಿತ್ರರಂಗಕ್ಕೆ ಬಂದರೆ ಹೆಚ್ಚು ಹಣ ಗಳಿಸಬಹುದು ಎಂದು ತಿಳಿದುಕೊಂಡಿದ್ದರಂತೆ. ಆದರೆ, ನಂತರ ಅದು ತಪ್ಪು ಎನ್ನುವ ಅರಿವಾಯಿತಂತೆ.

  ಬೇರೆ ಬೇರೆ ಕೆಲಸಗಳು

  ಬೇರೆ ಬೇರೆ ಕೆಲಸಗಳು

  ಡಿಗ್ರಿ ಬಳಿಕ ವಿಜಯ್ ಸೇತುಪತಿ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿರು. ಬಳಿಕ ಸ್ನೇಹಿತರ ಜೊತೆ ಸೇರಿ ಬ್ಯುಸಿನೆಸ್ ಶುರು ಮಾಡಿದರು. ಬ್ಯುಸಿನೆಸ್ ಮಾಡುವ ಸಮಯದಲ್ಲಿ ಸ್ನೇಹಿತರ ನಡುವೆ ಭಿನ್ನಾಭಿಪ್ರಾಯ ಬಂದು ಅದನ್ನು ಅಲ್ಲಿಗೆ ನಿಲ್ಲಿಸಿದಂತೆ. ಅನೇಕ ಸಣ್ಣ ಪುಟ್ಟ ಕೆಲಸಗಳ ನಂತರ ಶುರು ಆಗಿದ್ದೇ ಸಿನಿಮಾ.

  ಸಣ್ಣ ಸೀನ್ ಮಾಡುವಾಗಲು ಭಯ

  ಸಣ್ಣ ಸೀನ್ ಮಾಡುವಾಗಲು ಭಯ

  ಹಿಂದೆಯೇ ಕೇಳಿದ ಹಾಗೆ ವಿಜಯ್ ಸೇತುಪತಿ ಸಿನಿಮಾಗೆ ಬಂದಿದ್ದು, ಹಣದ ಅವಶ್ಯಕತೆ ಇದ್ದ ಕಾರಣ. ಅವರಿಗೆ ಚಿತ್ರರಂಗದಲ್ಲಿ ಯಾರೂ ಗೊತ್ತಿರುವುವರು ಇರಲಿಲ್ಲ. ಬ್ಯಾಗ್ರಾಂಡ್ ಇಲ್ಲದ ಬೆಳೆವಣಿಗೆ ಅವರದ್ದು. ಹೀಗೆ ಇರುವಾಗ ಮೊದ ಮೊದಲು ಸಣ್ಣ ಪುಟ್ಟ ಪಾತ್ರ ಮಾಡಲು ಶುರು ಮಾಡಿದರು. ಧಾರಾವಾಹಿಗಳಲ್ಲಿಯೂ ಬಣ್ಣ ಹಚ್ಚಿದರು. ಒಮ್ಮೆ ಒಂದು ಸೀನ್ ಮಾಡುವಾಗ ತುಂಬ ಭಯ ಪಟ್ಟರಂತೆ. ಕ್ಯಾಮರಾ ಮುಂದೆ ಹೆದರುತ್ತಿದ್ದರಂತೆ.

  ಸಿನಿಮಾ ಬಗ್ಗೆ ಪ್ರೀತಿ

  ಸಿನಿಮಾ ಬಗ್ಗೆ ಪ್ರೀತಿ

  ಸಾಲ ಮಾಡಿಕೊಂಡು, ದುಡ್ಡಿನ ಅಗತ್ಯ ಇರುವ ಕಾರಣ ಸಿನಿಮಾದಲ್ಲಿ ನಟಿಸಲು ಶುರು ಮಾಡಿದ ವಿಜಯ್ ಸೇತುಪತಿ ಬರು ಬರುತ್ತ ಸಿನಿಮಾವನ್ನು ಪ್ರೀತಿಸಲು ಶುರು ಮಾಡಿದರು. ಸಿನಿಮಾ ಹಾಗೂ ನಟನೆಯ ಮಹತ್ವ ತಿಳಿದುಕೊಂಡರು. ತಮ್ಮ ನಟನೆ ಕಡೆಗೆ ಗಮನ ಕೊಟ್ಟು ಹಂತ ಹಂತವಾಗಿ ಬೆಳೆದರು.

  25 ಸಿನಿಮಾಗಳಲ್ಲಿ ನಟನೆ

  25 ಸಿನಿಮಾಗಳಲ್ಲಿ ನಟನೆ

  2010ರಲ್ಲಿ ಮೊದಲ ಬಾರಿಗೆ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡ ವಿಜಯ್ ಸೇತುಪತಿ ಈವರೆಗೆ 25 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಲು ಸಾಲು ಕಷ್ಟಗಳ ನಂತರ ಒಬ್ಬ ನಟನಾಗಿ ನಿಂತಿದ್ದಾರೆ. ಒಳ್ಳೆ ಒಳ್ಳೆಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಭಾಷೆಯ ಬೇದ ಇಲ್ಲದೆ ಜನ ಅವರನ್ನು ಪ್ರೀತಿಸುತ್ತಿದ್ದಾರೆ.

  English summary
  Birthday special : Unknown facts about Tamil actor Vijay Sethupathi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X