ವಿಷ್ಣು ಸತ್ತ ಮೇಲೂ ನಿಲ್ಲದ ಅಪಮಾನ: ಮಾಗಡಿ ರಸ್ತೆಯಲ್ಲಿ ದಾದಾ ಪುತ್ಥಳಿ ಧ್ವಂಸ

ಕನ್ನಡದ ಲೆಜೆಂಡ್ ನಟ ಡಾ ವಿಷ್ಣುವರ್ಧನ್ ಅವರು ಬದುಕಿದ್ದಾಗಲೂ ಹಲವು ರೀತಿ ಅಪಮಾನ ಎದುರಿಸಿದ್ದಾರೆ. ಸತ್ತ ಮೇಲೂ ಒಂದಲ್ಲ ರೀತಿ ಒಂದು ರೀತಿ ಅವಮಾಗಳನ್ನು ಆಗುತ್ತಲೇ ಇದೆ. ಹತ್ತು ವರ್ಷವಾದರೂ ವಿಷ್ಣು ಸ್ಮಾರಕ ನಿರ್ಮಾಣವಾಗಲಿಲ್ಲ. ಈಗ ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ನಿರ್ಮಿಸಲಾಗಿದ್ದ ವಿಷ್ಣುದಾದಾರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವ ಘಟನೆ ನಡೆದಿದೆ.

Recommended Video

Vishnuvardhan ಸ್ಮಾರಕ ಧ್ವಂಸ ಮಾಡಿದ ಕಿಡಿಗೇಡಿಗಳು | Memorial Destroyed | Filmibeat Kannada

ಸಚಿವ ವಿ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಟಿ ಭಾರತಿ ವಿಷ್ಣುವರ್ಧನ್ ಅವರು ಈ ಪುತ್ಥಳಿಯನ್ನು ಅನಾವರಣಗೊಳಿಸಿದ್ದರು. ಇದಕ್ಕೂ ಮುಂಚೆ ಸಹ ಇಲ್ಲೊಂದು ವಿಷ್ಣುವರ್ಧನ್ ಪ್ರತಿಮೆ ಇತ್ತು. ಅದನ್ನು ಯಾರೋ ಕಿಡಿಗೇಡಿಗಳು ಎತ್ತುಕೊಂಡು ಹೋಗಿದ್ದರು ಎಂದು ತಿಳಿದು ಬಂದಿದೆ. ಈ ಘಟನೆ ಸಂಬಂಧ ಡಾ ವಿಷ್ಣುವರ್ಧನ್ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ಸಹ ನಡೆಸಿದ್ದಾರೆ. ಮುಂದೆ ಓದಿ...

ವಿಷ್ಣು ಪುತ್ಥಳಿ ಧ್ವಂಸ, ಸಿಡಿದೆದ್ದ ಸಿಂಹಗಳು

ವಿಷ್ಣು ಪುತ್ಥಳಿ ಧ್ವಂಸ, ಸಿಡಿದೆದ್ದ ಸಿಂಹಗಳು

ಇತ್ತೀಚಿಗಷ್ಟೆ ಲೋಕಾರ್ಪಣೆಯಾಗಿದ್ದ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಳೆದ ರಾತ್ರಿ ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಈ ಸಂಬಂಧ ವಿಷ್ಣು ಅಭಿಮಾನಿಗಳು ಸ್ಥಳಕ್ಕೆ ಧಾವಿಸಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲು ಮುಂದಾಗಿದ್ದಾರೆ.

ವಿಷ್ಣು ಪುತ್ಥಳಿಗೆ ವಿರೋಧ ಇತ್ತು

ವಿಷ್ಣು ಪುತ್ಥಳಿಗೆ ವಿರೋಧ ಇತ್ತು

ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿ ವಿಷ್ಣುವರ್ಧನ್ ಪುತ್ಥಳಿ ನಿರ್ಮಿಸಲಾಗಿತ್ತು. ಅಂದ್ಹಾಗೆ, ಇದು ಬಾಲಗಂಗಾಧರ ಸ್ವಾಮೀಜಿ ಸರ್ಕಲ್ ಆಗಿದ್ದರಿಂದ ಇಲ್ಲಿ ಬಾಲಗಂಗಾಧರ ಸ್ವಾಮೀಜಿ ಅವರ ಪುತ್ಥಳಿ ನಿರ್ಮಿಸಬೇಕು, ವಿಷ್ಣುವರ್ಧನ್ ಅವರ ಪ್ರತಿಮೆ ಬೇಡ ಎಂದು ಈ ಹಿಂದೆಯೇ ವಿರೋಧ ವ್ಯಕ್ತವಾಗಿತ್ತು ಎಂದು ವಿಷ್ಣು ಅಭಿಮಾನಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬೇರೆ ಜಾಗ ಕೊಟ್ರೆ ನಾವು ಸ್ಥಳಾಂತರ ಮಾಡ್ತಿದ್ವಿ

ಒಂದು ವೇಳೆ ಆ ಜಾಗದಲ್ಲಿ ಬಾಲಗಂಗಾಧರ ಸ್ವಾಮಿಜಿ ಅವರ ಪುತ್ಥಳಿ ನಿರ್ಮಿಸಬೇಕಾಗಿತ್ತು ಎನ್ನುವುದಾರೆ, ವಿಷ್ಣು ಪ್ರತಿಮೆಗೆ ಬೇರೆ ಸ್ಥಳ ನಿಗದಿ ಮಾಡಬಹುದಿತ್ತು. ಪಕ್ಕದಲ್ಲಿ ಇನ್ನೊಂದು ಜಾಗ ಕೊಟ್ಟಿದ್ರೆ ಅಲ್ಲೆ ಮಾಡ್ತಿದ್ವಿ. ಆದ್ರೆ, ಪುತ್ಥಳಿ ದ್ವಂಸ ಮಾಡುವ ಕೆಲಸ ಏಕೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ತೆಲುಗು ನಟ ಅವಹಳೇನ

ತೆಲುಗು ನಟ ಅವಹಳೇನ

ಇತ್ತೀಚಿಗಷ್ಟೆ ತೆಲುಗು ನಟ ವಿಜಯ್ ರಂಗರಾಜು ಕನ್ನಡದ ದಿಗ್ಗಜ ನಟನ ವ್ಯಕ್ತಿತ್ವದ ಬಗ್ಗೆ ಅವಹೇಳನ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಕನ್ನಡ ನಟರು ಸಹ ವಿಜಯ್ ರಂಗರಾಜು ವಿರುದ್ಧ ಎಚ್ಚರಿಕೆ ನೀಡಿದರು. ಅಂತಿಮವಾಗಿ ತೆಲುಗು ನಟ ವಿಷ್ಣುವರ್ಧನ್ ಅಭಿಮಾನಿಗಳಿಗೆ ಹಾಗೂ ಕನ್ನಡಿಗರಿಗೆ ತಲೆಬಾಗಿ ಕ್ಷಮೆಯಾಚಿಸಿದ್ದರು.

More from Filmibeat

English summary
Unknown persons demolished Dr vishnuvardhan statue in magadi road toll gate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X