twitter
    For Quick Alerts
    ALLOW NOTIFICATIONS  
    For Daily Alerts

    ನಿರೀಕ್ಷೆ ಹುಸಿ: ಚಿತ್ರಮಂದಿರಗಳ ತೆರೆಯಲು ಅವಕಾಶ ಇಲ್ಲ

    |

    ಆಗಸ್ಟ್ 1 ರಿಂದ ಚಿತ್ರಮಂದಿರಗಳು ತೆರೆಯಲು ಅವಕಾಶ ನೀಡಲಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ.

    Recommended Video

    ಬೆಂಗಳೂರಿನಲ್ಲಿ ನೆಲಸಮವಾಯ್ತು 4 ಅಂತಸ್ತಿನ ಕಟ್ಟಡ | Filmibeat Kannada

    ಕೇಂದ್ರ ಸರ್ಕಾರ ಬುಧವಾರ ಹೊರಡಿಸಿದ ಅನ್‌ಲಾಕ್ 3.0 ನಿಯಮಾವಳಿಗಳ ಅನುಸಾರ ಚಿತ್ರಮಂದಿರಗಳು ಇನ್ನೂ ತೆರೆಯುವಂತಿಲ್ಲ.

    ಸತತ ಐದು ತಿಂಗಳಿಗೂ ಹೆಚ್ಚು ಕಾಲದಿಂದ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಮೂರನೇ ಹಂತದ ಅನ್‌ಲಾಕ್‌ ವೇಳೆಗೆ ಚಿತ್ರಮಂದಿರಗಳ ತೆರವಿಗೆ ಅನುಮತಿ ನೀಡಲಾಗುತ್ತದೆ ಎಂದು ಬಹುಮಂದಿ ನಿರೀಕ್ಷೆ ಇರಿಸಿದ್ದರು. ಆದರೆ ಅದು ಹುಸಿಯಾಗಿದೆ.

    ಗೃಹ ಇಲಾಖೆಗೆ ಶಿಫಾರಸ್ಸು ನೀಡಲಾಗಿತ್ತು

    ಗೃಹ ಇಲಾಖೆಗೆ ಶಿಫಾರಸ್ಸು ನೀಡಲಾಗಿತ್ತು

    ಆಗಸ್ಟ್ 31 ರ ಒಳಗೆ ಚಿತ್ರಮಂದಿರಗಳನ್ನು ತೆರೆಯಲು ಅಡ್ಡಿಯಿಲ್ಲವೆಂಬ ಶಿಫಾರಸ್ಸನ್ನು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಕೇಂದ್ರ ಗೃಹ ಇಲಾಖೆ ನೀಡಿತ್ತು. ಇದೇ ಶಿಫಾರಸ್ಸಿನ ಆಧಾರದ ಮೇಲೆ ಚಿತ್ರಮಂದಿರಗಳು ತೆರೆಯುತ್ತವೆಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು.

    ಕಠಿಣ ನಿಯಮ ಹೇರುವ ನಿರೀಕ್ಷೆ ಇತ್ತು

    ಕಠಿಣ ನಿಯಮ ಹೇರುವ ನಿರೀಕ್ಷೆ ಇತ್ತು

    ಸಾಲುಗಳ ನಡುವೆ ಅಂತರ ಬಿಟ್ಟು, ಸೀಟುಗಳ ನಡುವೆ ಅಂತರ ಬಿಟ್ಟು ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗುತ್ತದೆ ಎಂದೇ ಬಹುತೇಕರ ನಿರೀಕ್ಷೆ ಆಗಿತ್ತು. ಆದರೆ ಕೇಂದ್ರ ಸರ್ಕಾರವು ಚಿತ್ರಮಂದಿರ ಮಾಲೀಕರ ನಿರೀಕ್ಷೆ ಹುಸಿ ಮಾಡಿದೆ.

    ಆಗಸ್ಟ್‌ ಅಂತ್ಯದ ವರೆಗೆ ನಿರೀಕ್ಷೆ

    ಆಗಸ್ಟ್‌ ಅಂತ್ಯದ ವರೆಗೆ ನಿರೀಕ್ಷೆ

    ಇನ್ನು ಚಿತ್ರಮಂದಿರಗಳನ್ನು ತೆರೆಯಲು ಬಹುತೇಕ ಆಗಸ್ಟ್ ಅಂತ್ಯದ ವರೆಗೆ ಕಾಯಲೇ ಬೇಕಾಗಿದೆ. ಆ ವೇಳೆಗೆ ಕೊರೊನಾ ತುಸುವಾದರೂ ನಿರೀಕ್ಷೆಗೆ ಬಂದರಷ್ಟೆ ಚಿತ್ರಮಂದಿರಗಳನ್ನು ತೆರೆಯುವ ಅನುಮತಿ ಕೇಂದ್ರದಿಂದ ಸಿಗುವ ಸಾಧ್ಯತೆ ಇದೆ.

    ಮೆಟ್ರೋ ಸಂಚಾರಕ್ಕೂ ಅವಕಾಶವಿಲ್ಲ

    ಮೆಟ್ರೋ ಸಂಚಾರಕ್ಕೂ ಅವಕಾಶವಿಲ್ಲ

    ಚಿತ್ರಮಂದಿರ ಮಾತ್ರವಲ್ಲದೆ, ಮೆಟ್ರೋ ಸಂಚಾರ, ಧಾರ್ಮಿಕ ಹಾಗೂ ಇನ್ನಿತರೆ ಕಾರ್ಯಕ್ರಮಗಳ ಆಯೋಜನೆ. ಕ್ರೀಡಾಕೂಟಗಳ ಆಯೋಜನೆಗಳನ್ನು ಬಂದ್ ಇಡುವಂತೆ ಸರ್ಕಾರ ಹೇಳಿದೆ. ಜಿಮ್‌ಗಳು ತೆರೆಯಲು ಅವಕಾಶ ನೀಡಲಾಗಿದೆ. ಜೊತೆಗೆ ರಾತ್ರಿ ಕರ್ಪ್ಯೂವನ್ನು ತೆರೆವುಗೊಳಿಸಿದೆ.

    English summary
    Central government releases unlock 3.0 guidelines. As per the guidelines theaters will remain close.
    Thursday, July 30, 2020, 9:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X