For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರು ಸಿನಿಮೋತ್ಸವದಲ್ಲಿ ಕೋಟ್ಯಂತರ ದುಂದು ವೆಚ್ಚ: ಲೆಕ್ಕ ಬಿಚ್ಚಿಟ್ಟ ವಿಧಾನ ಪರಿಷತ್ ಸದಸ್ಯ

  |

  ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಮೇಲೆ ಭ್ರಷ್ಟಾಚಾರದ ಕರಿನೆರಳು ಬಿದ್ದಿದೆ. ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ ಅವರು ಬೆಂಗಳೂರು ಸಿನಿಮಾ ಉತ್ಸವದಲ್ಲಿ ದುಂದು ವೆಚ್ಚ ನಡೆದಿದೆ ಎಂದು ಆರೋಪಿಸಿದ್ದಾರೆ.

  ಮೋಹನ್ ಕುಮಾರ್ ಕೊಂಡಜ್ಜಿ ಅವರು ಮೇಲ್ಮನೆಯಲ್ಲಿ ಬೆಂಗಳೂರು ಸಿನಿಮಾ ಉತ್ಸವಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಹಾಗೂ ವೆಚ್ಚಗಳ ವಿವರಗಳನ್ನು ಕೇಳಿದ್ದರು. ಅಂತೆಯೇ ಸರ್ಕಾರವು ಕೊಂಡಜ್ಜಿ ಅವರಿಗೆ ಮಾಹಿತಿ ನೀಡಿದೆ.

  ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ, ಕಾರಣವೇನು?ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ, ಕಾರಣವೇನು?

  ಸಚಿವಾಲಯವು ನೀಡಿರುವ ಮಾಹಿತಿಯ ಕೆಲವು ಅಂಶಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿರುವ ಕೊಂಡಜ್ಜಿ, ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಹಾಗೂ ಸಮಾರೋಪ ಸಮಾರಂಭಗಳಿಗೆ ಕೋಟ್ಯಂತರ ಹಣ ಖರ್ಚು ಮಾಡಿರುವ ಔಚಿತ್ಯವನ್ನು ಪ್ರಶ್ನಿಸಿದ್ದಾರೆ.

  2017-18ನೇ ಸಾಲಿನ ಬೆಂಗಳೂರು ಸಿನಿಮೋತ್ಸವದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭ ಮಾತ್ರಕ್ಕೆ ಒಟ್ಟು 2.24 ಕೋಟಿ ಹಣ ಖರ್ಚು ಮಾಡಲಾಗಿದೆ. ಅದೇ 2018-19ನೇ ಸಾಲಿನ ಸಿನಿಮಾ ಉತ್ಸವದ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಕ್ಕೆ ಖರ್ಚಾಗಿರುವುದು ಕೇವಲ 16.60 ಲಕ್ಷ ರುಪಾಯಿ.

  2019-20 ನೇ ಸಾಲಿನ ಬೆಂಗಳೂರು ಸಿನಿಮಾ ಉತ್ಸವದ ಉದ್ಘಾಟನೆ ಸಮಾರಂಭಕ್ಕೆ 1.74 ಕೋಟಿ. ಸಮಾರೋಪ ಸಮಾರಂಭಕ್ಕೆ 70.84 ಲಕ್ಷ ಹಣ ವ್ಯಯಿಸಲಾಗಿದೆ. ಒಟ್ಟು 2.45 ಕೋಟಿ ಹಣವನ್ನು ಕೇವಲ ಎರಡು ಕಾರ್ಯಕ್ರಮಗಳಿಗೆ ವ್ಯಯಿಸಲಾಗಿದೆ. ಈ ಹಣವನ್ನು ವೇದಿಕೆ ನಿರ್ಮಾಣ, ಆಸನ ವ್ಯವಸ್ಥೆ, ಸೌಂಡ್, ಲೈಟ್ಸ್, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಖರ್ಚು ಮಾಡಲಾಗಿದೆ.

  ರಾಜ್ಯ ಸರ್ಕಾರವು 2017-18 ನೇ ಸಾಲಿನಲ್ಲಿ ಸಿನಿಮೋತ್ಸವಕ್ಕೆ 6.65 ಕೋಟಿ. 2018-19 ನೇ ಸಾಲಿನಲ್ಲಿ 4.61 ಕೋಟಿ. 2019-20 ನೇ ಸಾಲಿನಲ್ಲಿ 7.75 ಕೋಟಿ ರುಪಾಯಿ ಅನುದಾನವನ್ನು ನೀಡಿದೆ.

  'ಕೇವಲ ಉದ್ಘಾಟನೆ-ಸಮಾರೋಪ ಸಮಾರಂಭಕ್ಕೆ ಆದ ಖರ್ಚುಗಳಲ್ಲಿಯೇ ಇಷ್ಟೋಂದು ವ್ಯತ್ಯಾಸವಿದೆ. ಚಿತ್ರೋತ್ಸವದ ವಿವಿಧ ಕಾರ್ಯಗಳಿಗೆ ಖರ್ಚಾದ ಹಣದಲ್ಲಿಯೂ ದೊಡ್ಡ ವ್ಯತ್ಯಾಸವಿದೆ. ಕಡಿಮೆ ಹಣದಲ್ಲಿ ಅದೇ ಸಿನಿಮಾ ಉತ್ಸವವನ್ನು ಮಾಡಿದ ಉದಾಹರಣೆ ಇದ್ದಾಗ ಇಷ್ಟೋಂದು ಹಣ ಖರ್ಚು ಮಾಡಿದ್ದು ಏಕೆ? ತೆರಿಗೆದಾರರ ಹಣದಲ್ಲಿ ನಡೆಯುವ ಈ ಕಾರ್ಯಕ್ರಮದ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕಿದೆ' ಎಂದಿದ್ದಾರೆ ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ.

  ಲಯನ್ ಕಿಂಗ್ ಎತ್ತಿ ಸಾರಥಿ ಮಾಡಿದ್ವಿ,ಯಾರು ಕೇಳಿದ್ರು?? | Roberrt Success Meet | Filmibeat Kannada

  ಈ ವರ್ಷ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮಾ ಉತ್ಸವವನ್ನು ಮಾರ್ಚ್ 24 ರಿಂದ 31 ರ ವರೆಗೆ ನಡೆಸಲಾಗುತ್ತದೆ ಎಂದು ಘೋಷಿಸಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಉತ್ಸವವನ್ನು ಮುಂದೂಡಲಾಗಿದೆ.

  English summary
  MLC Mohan Kumar Kondajji accused that Unnecessary expenditure of tax payers money in BIFFes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X