'ಪೈಲ್ವಾನ್' ಅಬ್ಬರ ಮುಗಿಯುತ್ತಿದ್ದಂತೆ, ಶುರುವಾಗಲಿದೆ ಇವರ ಆಟ

Recommended Video

'ಪೈಲ್ವಾನ್' ಅಬ್ಬರ ಮುಗಿಯುತ್ತಿದ್ದಂತೆ, ಶುರುವಾಗಲಿದೆ ಇವರ ಆಟ | FILMIBEAT KANNADA

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ದೇಶಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಿದೆ. ಕೆಜಿಎಫ್, ಕುರುಕ್ಷೇತ್ರ ಈಗ ಪೈಲ್ವಾನ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಅಪ್ಪಳಿಸಿದೆ.

ಅಂತೂ ಇಂತೂ ಬಹಳ ಕಾತುರದಿಂದ ಕಾಯುತ್ತಿದ್ದ ಪೈಲ್ವಾನ್ ಕೂಡ ಮುಗಿತು. ದರ್ಶನ್, ಸುದೀಪ್, ಯಶ್, ಶಿವಣ್ಣ ಸಿನಿಮಾ ಕೂಡ ಬಂದು ಹೋಗಿದೆ. ಈಗ ಬಾಕಿ ಇರುವ ಚಿತ್ರಗಳ ಸರದಿ. ಈಗ ಮುಂದಿನ ಚಿತ್ರಗಳ ಬಗ್ಗೆ ಲೆಕ್ಕಾಚಾರ ಆರಂಭವಾಗಲಿದೆ.

ಹಾಗ್ನೋಡಿದ್ರೆ, ಪೈಲ್ವಾನ್ ಸಿನಿಮಾ ಬಳಿಕ ಬರಲಿರುವ ದೊಡ್ಡ ಚಿತ್ರಗಳು ಯಾವುದು? ಯಾವ ಸಿನಿಮಾ ಯಾವ ಕಾರಣಕ್ಕಾಗಿ ಕುತೂಹಲ ಮೂಡಿಸಿದೆ ಎಂಬುದರ ಬಗ್ಗೆ ಒಂದು ಸಣ್ಣ ಮುನ್ನೋಟ. ಮುಂದೆ ಓದಿ....

ಪುನೀತ್ 'ಯುವರತ್ನ'

ಪುನೀತ್ 'ಯುವರತ್ನ'

ನಟಸಾರ್ವಭೌಮ ಚಿತ್ರದ ಬಳಿಕ ಪುನೀತ್ ಅಭಿನಯದ ಸಿನಿಮಾ ಯುವರತ್ನ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಬರುತ್ತಿರುವ ಈ ಚಿತ್ರಕ್ಕಾಗಿ ಸ್ಯಾಂಡಲ್ ವುಡ್ ಕಾಯುತ್ತಿದೆ. ಬಹುಶಃ ಈ ಸಿನಿಮಾ ಮುಂದಿನ ವರ್ಷದ ಆರಂಭಕ್ಕೆ ಬರುವ ಸಾಧ್ಯತೆ ಇದೆ.

ಶ್ರೀಮುರಳಿ 'ಭರಾಟೆ'

ಶ್ರೀಮುರಳಿ 'ಭರಾಟೆ'

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಭರಾಟೆ ಭಾರಿ ಸದ್ದು ಮಾಡ್ತಿದೆ. ಚೇತನ್ ಕುಮಾರ್ ನಿರ್ದೇಶನ ಮಾಡಿರುವ ಈ ಚಿತ್ರ ಈಗಾಗಲೇ ಹಾಡುಗಳ ಮೂಲಕ ಅಬ್ಬರಿಸುತ್ತಿದೆ. ಬಹುತೇಕ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗುತ್ತಿದೆ. ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರಮಂದಿರಕ್ಕೆ ಬರಲಿದೆ.

ಧ್ರುವ ಸರ್ಜಾ 'ಪೊಗರು'

ಧ್ರುವ ಸರ್ಜಾ 'ಪೊಗರು'

ಭರ್ಜರಿ ಸಿನಿಮಾ ಬಳಿಕ ಮತ್ತೆ ಗ್ಯಾಪ್ ಪಡೆದುಕೊಂಡಿರುವ ಧ್ರುವ ಸರ್ಜಾ ಪೊಗರು ಚಿತ್ರದ ಮೂಲಕ ಬರಲಿದ್ದಾರೆ. ಆದರೆ, ಪೊಗರು ಚಿತ್ರೀಕರಣ ಮಾಡುತ್ತಲೇ ಇದೆ. ಸದ್ಯಕ್ಕೆ ಈ ಸಿನಿಮಾದ ಬಿಡುಗಡೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ನಿರೀಕ್ಷೆಯ ಚಿತ್ರಗಳ ಪೈಕಿ ಪೊಗರು ಮೊದಲ ಸಾಲಿನಲ್ಲಿದೆ.

ಅವನೇ ಶ್ರೀಮನ್ನಾರಾಯಣ

ಅವನೇ ಶ್ರೀಮನ್ನಾರಾಯಣ

ಕಿರಿಕ್ ಪಾರ್ಟಿ ಬಳಿಕ ಯಾವ ಚಿತ್ರದಲ್ಲೂ ನಟಿಸದ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣನಾಗಿ ಬರುತ್ತಿದ್ದಾರೆ. ಐದು ಭಾಷೆಯಲ್ಲಿ ಬರಲು ಸಜ್ಜಾಗಿರುವ ಈ ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಆದರೆ, ಯಾವಾಗ ಎಂಬುದರ ಸುಳಿವು ಬಿಟ್ಟುಕೊಟ್ಟಿಲ್ಲ. ಸಚಿನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿದ್ದಾರೆ.

ಉಳಿದ ಚಿತ್ರಗಳ ಸದ್ಯಕ್ಕಿಲ್ಲ

ಉಳಿದ ಚಿತ್ರಗಳ ಸದ್ಯಕ್ಕಿಲ್ಲ

ಗಣೇಶ್ ಅಭಿನಯದ ಗೀತಾ ಸದ್ಯದಲ್ಲೇ ಬರಲಿದೆ. ದುನಿಯಾ ವಿಜಯ್ ನಿರ್ದೇಶನ ಸಲಗ ಶೂಟಿಂಗ್ ಆಗ್ತಿದೆ. ಶಿವಣ್ಣನ ಆಯುಷ್ಮಾನ್ ಭವ, ದ್ರೋಣ ರೆಡಿಯಾಗಿದೆ. ಕೋಟಿಗೊಬ್ಬ 3, ಒಡೆಯ, ರಾಬರ್ಟ್ ಇನ್ನು ತಡವಾಗಬಹುದು. ಕೆಜಿಎಫ್ ಚಾಪ್ಟರ್-2 ಮುಂದಿನ ವರ್ಷದ ಮಧ್ಯ ಅಥವಾ ಅಂತ್ಯದಲ್ಲಿ. ಈ ಚಿತ್ರಗಳನ್ನ ಬಿಟ್ಟು ಇನ್ನು ಕೆಲವು ಸಿನಿಮಾಗಳು ಸೈಲೆಂಟ್ ಆಗಿ ಮೋಡಿ ಮಾಡಲು ಸಜ್ಜಾಗಿದೆ.

More from Filmibeat

English summary
Dhruva sarja pogaru, Srimurali's Bharaate, Puneeth Rajkumar's yuvaratna and Avane srimannarayana movies are ready to fire onscreen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X