ಬಣ್ಣದ ಕನಸುಗಳನ್ನು ಬರಿದಾಗಿಸಿ ಹೋದ ಅಪ್ಪು! ಮುಂಬರುವ ಚಿತ್ರಗಳ ಪಟ್ಟಿ

ನಟ ಪುನೀತ್ ರಾಜಕುಮಾರ್ ಇನ್ನಿಲ್ಲ ಎನ್ನುವ ಸುದ್ದಿ ಎಲ್ಲರ ಮನಸ್ಸಿನ್ನ ಭಾರ ಮಾಡಿದೆ. ಪುನೀತ್ ರಾಜಕುಮಾರ್ ಸಿನಿಮಾರಂಗದಲ್ಲಿ ಕನಸು ಕಟ್ಟಿಕೊಂಡು ಬೆಳೆದಂತಹ ನಟ. ಕಂಡ ಕನಸುಗಳನ್ನೆಲ್ಲಾ ಸಿನಿಮಾಗಳ ಮೂಲಕ ಸಾಕಾರಗೊಳಿಸಿ ಕೊಂಡಂತಹ ನಟ. ಸ್ಟಾರ್‌ ನಟ ಡಾ.ರಾಜ್‌ಕುಮಾರ್‌ ಮಗ ಆಗಿದ್ದರು ಪುನೀತ್ ಸರಳ ವ್ಯಕ್ತಿತ್ವಕ್ಕೆ ತುಂಬಾ ಹೆಸರುವಾಸಿಯಾಗಿದ್ದರು. ಕೊರೊನಾದಿಂದ ಚಿತ್ರರಂಗ ಚೇತರಿಸಿಕೊಂಡ ಬಳಿಕ ಪುನೀತ್ ರಾಜಕುಮಾರನ ಸಾಲು ಸಾಲು ಸಿನಿಮಾಗಳ ಕಥೆಗಳನ್ನು ಕೇಳಿದ್ದರು. ಜೊತೆಗೆ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಿಗೆ ಅಪ್ಪು ಸಹಿ ಮಾಡಿದ್ದರು.

ಪುನೀತ್ ರಾಜಕುಮಾರ್ ಸದ್ಯ ದೊಡ್ಡ ಬಜೆಟ್‌ನ ಚಿತ್ರಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು. ಸದ್ಯ ಜೇಮ್ಸ್‌ ಚಿತ್ರದ ಶೂಟಿಂಗ್‌ನಲ್ಲಿ ಅಪ್ಪು ತೊಡಗಿದ್ದರು. ಈಗಾಗಲೇ ಚಿತ್ರದ 75ರಷ್ಟು ಭಾಗ ಚಿತ್ರೀಕರಣ ಮುಗಿದಿದೆ. ಇನ್ನು ಚಿತ್ರದ 25% ಶೂಟಿಂಗ್‌ ಬಾಕಿ ಇದೆ. ಜೇಮ್ಸ್‌ ಚಿತ್ರದಲ್ಲಿ ಪುನೀತ್ ರಾಜಕುಮಾರ್ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದರು. ಇತ್ತೀಚೆಗೆ ಚಿತ್ರದ ಲುಕ್‌ ಕೂಡ ವೈರಲ್‌ ಆಗಿತ್ತು. ಮುಂದಿನ ಹಂತದ ಚಿತ್ರಿಕರಣಕ್ಕಾಗಿ ಚಿತ್ರತಂಡ ಸಕಲ ತಯಾರಿಯನ್ನು ಮಾಡಿಕೊಂಡಿತ್ತು.

ಜೇಮ್ಸ್ ಬಳಿಕ ಪುನೀತ್ ರಾಜಕುಮಾರ್ ದ್ವಿತ್ವ ಸಿನಿಮಾದಲ್ಲಿ ನಟಿಸ ಬೇಕಿತ್ತು. ನಿರ್ದೇಶಕ ಪವನ್‌ ಕುಮಾರ್ ದ್ವಿತ್ವ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಸಿನಿಮಾ ಜರ್ನಿಯಲ್ಲಿ ದ್ವಿತ್ವ ವಿಭಿನ್ನವಾಗಿ ನಿಲ್ಲುವಂತಹ ಸಿನಿಮಾ ಎನ್ನಲಾಗಿತ್ತು. ಯಾಕೆಂದರೆ ಇದು ಸೈಕಾಲಾಜಿಕಲ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದ್ದ ಕಥೆ. ದ್ವಿತ್ವ ಪೋಸ್ಟರ್ ಮೂಲಕವೇ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿತ್ತು. ಪವನ್ ಕೂಡ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಲು ಸಾಕಷ್ಟು ತಯಾರಿಗಳನ್ನು ನಡೆಸಿದ್ದರು. ದ್ವಿತ್ವ ಬಳಿಕ ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ಪುನೀತ್ ರಾಜಕುಮಾರ್ ಸಿನಿಮಾ ಮಾಡಬೇಕಿತ್ತು.

Upcoming Movies Of Puneeth Rajkumar

ದಿನಕರ್ ತೂಗುದೀಪ್ ಕೂಡ ಪುನೀತ್ ರಾಜಕುಮಾರ್‌ಗಾಗಿ ವಿಶೇಷ ಕಥೆಯ ರೆಡಿಮಾಡಿ ಕೊಂಡಿದ್ದರು. ಬಳಿಕ ಪುನೀತ್ ನಿರ್ದೇಶಕ ಸಂತೋಷ್ ಆನಂದ್ ರಾಮ್‌ ಅವರಿಗೂ ಕೂಡ ಡೇಟ್ ಕೊಟ್ಟಿದ್ದರು. ಮುಂದಿನ ವರ್ಷ ಏಪ್ರಿಲ್ ನಂತರ ಸಂತೋಷ್ ಆನಂದ್ ರಾಮ್ ಜೊತೆಗೆ ಮತ್ತೊಂದು ಸಿನಿಮಾ ಸೆಟ್ಟೇರುವ ಮಾತುಕತೆ ನಡೆದಿತ್ತು.

ಅಷ್ಟೆಲ್ಲ ಇದರ ಜೊತೆಗೆ ನಿರ್ದೇಶಕ ಯೋಗರಾಜ್‌ ಭಟ್ ಬಳಿ ಕೂಡ ಪುನೀತ್ ರಾಜಕುಮಾರ್ ಅವರ ಡೇಟ್ ಇತ್ತು ಯೋಗರಾಜ್ ಭಟ್ ಕೂಡ ಪುನೀತ್‌ ರಾಜ್‌ಕುಮಾರ್‌ ಅವರಿಗೆ ತಕ್ಕಂತಹ ಕಥೆಯನ್ನ ಸಿದ್ದ ಮಾಡಿಕೊಳ್ಳುವಲ್ಲಿ ಬಿಸಿಯಾಗಿದ್ದರು.

ಇದೆಲ್ಲದರ ಜೊತೆಗೆ ಪುನೀತ್ ರಾಜಕುಮಾರ್ ತಮ್ಮ ಪಿ.ಆರ್‌.ಕೆ ಪ್ರೊಡಕ್ಷನ್ ಮೂಲಕ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಇದ್ದರು. ಈ ಮೂಲಕ ಹೊಸ ಪ್ರತಿಭೆಗಳಿಗೆ ಪುನೀತ್ ರಾಜಕುಮಾರ್ ಪ್ರೋತ್ಸಾಹವನ್ನು ನೀಡಲು ಮುಂದಾಗಿದ್ದರು. ಪಿಆರ್‌ಕೆ ಬ್ಯಾನರ್ ಅಡಿಯಲ್ಲಿ ಫ್ರೆಂಚ್‌ ಬಿರಿಯಾನಿ, ಕವಲುದಾರಿ, ಮ್ಯಾನ್‌ ಆಫ್‌ ದಿ ಮ್ಯಾಚ್ ಅಂತಹ ಚಿತ್ರಗಳು ತಯಾರಾಗಿವೆ. ಇನ್ನು ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡೋ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಅಪ್ಪು ಉತ್ತಮ ಯೋಜನೆ ಹಾಕಿಕೊಂಡಿದ್ದರು.

ಪುನೀತ್ ರಾಜಕುಮಾರ್ ಅಂದರೆ ಕನ್ನಡ ಸಿನಿಮಾರಂಗದ ಪಾಲಿಗೆ ಒಂದು ದೊಡ್ಡ ಶಕ್ತಿ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅನ್ನೋ ಹೆಸರು ಅದೆಷ್ಟೋ ಮಂದಿಯ ಬದುಕಿನ ಭರವಸೆಯಾಗಿತ್ತು. ಆದರೆ ಈಗ ಈ ಹೆಸರು ಕೇವಲ ಹೆಸರಾಗಿ ಮಾತ್ರ ಉಳಿಯುವ ಸಂದರ್ಭ ಎದುರಾಗಿದೆ. ಅಪ್ಪುವನ್ನು ಅಪ್ಪಿಕೊಳ್ಳಬೇಕು ಅಂದ್ರು ಕೂಡ ಅಪ್ಪು ಆಲಂಗಿಸಲು ಆಗದಷ್ಟು ದೂರಕ್ಕೆ ಹಾರಿದ್ದಾರೆ.

Recommended Video

ಕಾರ್ ತೊಳೆಯೋವಾಗ ವಾಕಿಂಗ್ ಮಾಡ್ಕೊಂಡು ಬರ್ತಾ ಇದ್ದ ಅಪ್ಪು

More from Filmibeat

English summary
James, Dwithva are the Upcoming Movies Of Puneeth Rajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X