»   » ಉಪೇಂದ್ರ 2 ಈ ಹುಟ್ಟುಹಬ್ಬಕ್ಕೆ ಗ್ಯಾರಂಟಿ

ಉಪೇಂದ್ರ 2 ಈ ಹುಟ್ಟುಹಬ್ಬಕ್ಕೆ ಗ್ಯಾರಂಟಿ

Posted By:
Subscribe to Filmibeat Kannada

ವಿಭಿನ್ನ ಕತೆ, ವಿಶಿಷ್ಟ ಸಂಭಾಷಣೆ, ವಿಶೇಷ ಹಾಡುಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದ ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ 'ಉಪೇಂದ್ರ' ಚಿತ್ರದ ಎರಡನೇ ಭಾಗ ಸದ್ಯದಲ್ಲೇ ಸೆಟ್ಟೇರಲಿದೆ. ಈ ವಿಷಯವನ್ನು ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಅವರು 'ಸೂಪರೋ ರಂಗಾ' ಚಿತ್ರದ ಸುದ್ದಿಗೋಷ್ಠಿಯಲ್ಲಿ ದೃಢಪಡಿಸಿದ್ದಾರೆ.

ಕಳೆದ ವರ್ಷದ ಹುಟ್ಟುಹಬ್ಬದ ದಿನ(ಸೆ.18) ಅಂಕಿ ಸಂಖ್ಯೆ, ಅಕ್ಷರಗಳಿಂದ ಕೂಡಿದ್ದ ವಿಚಿತ್ರವಾದ ಬಾಕ್ಸ್ ಇರುವ ಪೋಸ್ಟರ್ ರಿಲೀಸ್ ಮಾಡಿದ್ದ ಉಪೇಂದ್ರ ಅವರು ಈ ಬಾರಿ ಚಿತ್ರವನ್ನು ಆರಂಭಿಸುವ ಸೂಚನೆ ಕೊಟ್ಟಿದ್ದಾರೆ.

1999ರಲ್ಲಿ ತೆರೆಕಂಡು ಬಾಕ್ಸಾಫೀಸ್ ಕೊಳ್ಳೆಹೊಡೆದಿದ್ದ 'ಉಪೇಂದ್ರ' ಚಿತ್ರದಲ್ಲಿ ಮೂವರು ನಾಯಕಿಯರಿದ್ದರು. ರವೀನಾ ಟಂಡನ್, ಪ್ರೇಮಾ ಹಾಗೂ ದಾಮಿನಿ. ಸದ್ಯಕ್ಕೆ ಈ ಮೂವರು ತಾರೆಯರು ಮಂಕಾಗಿರುವುದರಿಂದ ಇವರ ಬದಲಿಗೆ ಯಾರನ್ನು ಉಪ್ಪಿ ಆರಿಸುತ್ತಾರೆ ಎಂಬುದನ್ನು ಅವರ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

Upendra 2 movie set to launch on Uppi's Birthday

ಹಳೆ ತಂಡದಲ್ಲಿದ್ದ ಗುರುಕಿರಣ್ ಅವರು ಸಂಗೀತ, ಎಚ್ ಸಿ ವೇಣು ಅವರ ಛಾಯಾಗ್ರಹಣ ಈ ಚಿತ್ರದಲ್ಲೂ ಮುಂದುವರೆಯಲಿದೆ. ಉಪೇಂದ್ರ ಅವರ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತದೋ ಅಥವಾ ಬೇರೆಯವರ ನಿರ್ಮಾಣದಲ್ಲಿ ಸೆಟ್ಟೇರುತ್ತದೋ ಎಂಬುದರ ಬಗ್ಗೆ ಕುತೂಹಲವಿದ್ದರೂ ಬಹುತೇಕ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಅವರು ಚಿತ್ರ ನಿರ್ಮಾಣಕ್ಕೆ ಮುಂದಾಗುವುದು ಗ್ಯಾರಂಟಿ ಎನ್ನಲಾಗಿದೆ.

ಉಪ್ಪಿ ಅವರ 45ನೇ ಹುಟ್ಟುಹಬ್ಬಕ್ಕೆ (ಸೆಪ್ಟೆಂಬರ್ 18, 2013) ಚಿತ್ರವನ್ನು ತೆರೆಗೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.ಆದರೆ ಇದು 'ಉಪೇಂದ್ರ' (1999) ಚಿತ್ರದ ಮುಂದಿವರಿದ ಭಾಗವಂತೂ ಖಂಡಿತ ಅಲ್ಲ ಎಂದಿದ್ದಾರೆ ಉಪ್ಪ್ಪಿ.

ಕಳೆದ ಒಂದು ವರ್ಷದಲ್ಲಿ ಸಿಕ್ಕಾಪಟ್ಟೆ ಪೆನ್ನು, ಪೇಪರ್ ಖರ್ಚು ಮಾಡಿರುವ ಉಪ್ಪಿ ಅವರು ಅದಕ್ಕಿಂತ ಹೆಚ್ಚಾಗಿ ತಲೆ ಓಡಿಸಿದ್ದು ಅದ್ಭುತ ಸ್ಕ್ರಿಪ್ಟ್ ಕೊನೆಗೂ ತಯಾರಿಸಿದ್ದಾರಂತೆ. ಎಲ್ಲಾ ಪಕ್ಕಾ ಆದಮೇಲೆ ಚಿತ್ರ ಸೆಟ್ಟೇರುವ ವಿಷಯವನ್ನು ಖಚಿತಪಡಿಸಿದ್ದಾರೆ. ಉಪೇಂದ್ರ ಅವರ ಹುಟ್ಟುಹಬ್ಬದ ದಿನ ತೆಂಗಿನ ಕಾಯಿ ಒಡೆದು ಉಪೇಂದ್ರ 2 ಚಿತ್ರಕ್ಕೆ ಮುಹೂರ್ತ ನಡೆಸಿದರೂ ಶೂಟಿಂಗ್ ಮಾತ್ರ ಇನ್ನಷ್ಟು ವಿಳಂಬವಾಗಲಿದೆ.ಉಪ್ಪಿ ಅಭಿನಯದ ಸೂಪರೋ ರಂಗಾ ಚಿತ್ರ ಮುಗಿಸಲು ಕನಿಷ್ಠ ಮೂರ್ನಾಲ್ಕು ತಿಂಗಳು ಬೇಕಂತೆ. ಹೀಗಾಗಿ ಉಪೇಂದ್ರ 2 ಚಿತ್ರಕ್ಕಾಗಿ ಇನ್ನಷ್ಟು ಕಾಲ ಅಭಿಮಾನಿಗಳು ಕಾಯಲೇಬೇಕಾಗಿದೆ.

ಸೂಪರ್ (2010) ಚಿತ್ರದ ಬಳಿಕ ಉಪೇಂದ್ರ ಯಾವ ಚಿತ್ರವನ್ನೂ ನಿರ್ದೇಶಿಸಿಲ್ಲ. ಉಪ್ಪಿ ಡೈರೆಕ್ಟರ್ ಹ್ಯಾಟ್ ಧರಿಸಿದರೆ ಆ ಚಿತ್ರ ಸೋಲುವ ಮಾತೇ ಇಲ್ಲ ಎಂಬ ನಂಬಿಕೆಯಿದೆ.ಮುಂದೇನಾಗುತ್ತೋ ಕಾದು ನೋಡೋಣ..

English summary
Real Star Upendra's much anticipated film 'Upendra 2' is all said to be launched on his birthday on September 18th. Upendra himself has confirmed that this new directorial venture will be launched soon during the launch of his new film 'Superro Ranga'.
Please Wait while comments are loading...