ಉಪೇಂದ್ರ 50ನೇ ಸಿನಿಮಾ ಯಾವ ಹಂತದಲ್ಲಿದೆ? ಉಪ್ಪಿ ಹೇಳಿದ್ದೇನು?

ರಿಯಲ್ ಸ್ಟಾರ್ ಉಪೇಂದ್ರ ಅವರ 50ನೇ ಚಿತ್ರವನ್ನ ಖುದ್ದು ತಾವೇ ನಿರ್ದೇಶನ ಮಾಡಲಿದ್ದಾರೆ. ಹೀಗಂತ ಸ್ವತಃ ಉಪ್ಪಿ ಘೋಷಣೆ ಮಾಡಿ ಆಗಿದೆ. ಹೀಗಾಗಿ, ಈ ಸಿನಿಮಾ ಯಾವಾಗ ಆರಂಭವಾಗುತ್ತೆ ಎಂಬ ನಿರೀಕ್ಷೆ, ಲೆಕ್ಕಾಚಾರ ಶುರುವಾಗಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟೋತ್ತಿಗಾಗಲೇ ಉಪ್ಪಿ 50ನೇ ಚಿತ್ರಕ್ಕೆ ಚಾಲನೆ ಸಿಗಬೇಕಿತ್ತು. ಆದರೆ ಇದುವರೆಗೂ ಆ ಚಿತ್ರಕ್ಕೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಯಾವ ಹಂತದಲ್ಲಿದೆ ಎಂಬುದು ಸಹ ಗೊತ್ತಿಲ್ಲ.

ಇದೀಗ, 50ನೇ ಚಿತ್ರದ ಬಗ್ಗೆ ಖುದ್ದು ಉಪ್ಪಿ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. 'ಇಷ್ಟು ದಿನ ಎಲೆಕ್ಷನ್ ಇದ್ದ ಕಾರಣ ಆ ಪ್ರಾಜೆಕ್ಟ್ ಗೆ ಕೈ ಹಾಕಿಲಿಲ್ಲ. ಒಮ್ಮೆ ಪ್ರಾಜೆಕ್ಟ್ ಘೋಷಣೆ ಮಾಡಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ಸಿನಿಮಾ ಅನೌನ್ಸ್ ಮಾಡಿದ ಮೇಲೆ ಅದಕ್ಕೆ ಏಳೆಂಟು ತಿಂಗಳು ಸಮಯ ಬೇಕು' ಎಂದಿದ್ದಾರೆ.

Upendra 50th movie condition

''ಸ್ಕ್ರಿಪ್ಟ್ ವರ್ಕ್ ಮಾಡಲು ಸಮಯ ಬೇಕು. ಅದಕ್ಕೆ ಅಂತಾನೇ ಸಮಯ ಕೊಡಬೇಕು. ಯಾವುದು ಕಿರಿಕಿರಿ, ತೊಂದರೆ ಇರಬಾರದು. ಡಿಸ್ಟರ್ಬ್ ಮಾಡಬಾರದು. ಚುನಾವಣೆ ಕೆಲಸ ಇದ್ದ ಕಾರಣ ಕೈಗೆತ್ತಿಕೊಂಡಿಲ್ಲ. ಈಗ ಸಮಯಕ್ಕಾಗಿ ಕಾದು ನೋಡುತ್ತಿದ್ದೇನೆ. ಸ್ವಲ್ಪ ಸಮಯ ಬಿಡುವು ಸಿಗುತ್ತಿದೆ ಎಂದು ಗೊತ್ತಾದ ತಕ್ಷಣ ಸಿನಿಮಾ ಅನೌನ್ಸ್ ಮಾಡ್ತೀನಿ'' ಎಂದು ಉಪೇಂದ್ರ ತಿಳಿಸಿದ್ದಾರೆ.

ಆರ್ ಚಂದ್ರು ಜೊತೆ ಮಾಡಿರುವ ಐ ಲವ್ ಯೂ ತೆರೆಕಾಣಲು ಸಜ್ಜಾಗಿದೆ. ಇದಾದ ಬಳಿಕ ಬುದ್ದಿವಂತ 2 ಸಿನಿಮಾ ಆರಂಭಿಸಿದ್ದಾರೆ. ಬಹುಶಃ ಈ ಚಿತ್ರ ಮುಗಿದ ತಕ್ಷಣ ತಮ್ಮದೇ ಪ್ರಾಜೆಕ್ಟ್ ಗೆ ಉಪ್ಪಿ ಚಾಲನೆ ನೀಡಬಹುದು ಎಂಬ ನಿರೀಕ್ಷೆ ಇದೆ.

More from Filmibeat

English summary
Real star upendra ready to direct his 50th movie. but he want to time for that project. according to uppi, after buddivantha he will starts his directional movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X