ಉಪ್ಪಿಯ 50ನೇ ಚಿತ್ರಕ್ಕೆ ಅವರೇ ಡೈರೆಕ್ಟರ್ : ಟೈಟಲ್, ಬಜೆಟ್, ಕಥೆಯ ವಿವರ ಬಹಿರಂಗ

Recommended Video

ಉಪ್ಪಿಯ 50ನೇ ಚಿತ್ರಕ್ಕೆ ಅವರೇ ಡೈರೆಕ್ಟರ್ : ಟೈಟಲ್, ಬಜೆಟ್, ಕಥೆಯ ವಿವರ ಬಹಿರಂಗ..! | FILMIBEAT KANNADA

ರಿಯಲ್ ಸ್ಟಾರ್ ಅಭಿಮಾನಿಗಳು ಯಾವಾಗಲೂ ಕಾಯುವುದು ಉಪ್ಪಿಯ ನಿರ್ದೇಶನದ ಸಿನಿಮಾಗಾಗಿ. 'ಉಪ್ಪಿ 2' ಚಿತ್ರದ ಬಳಿಕ ಸೈಲೆಂಟ್ ಆಗಿರುವ ಉಪೇಂದ್ರ ಮತ್ತೆ ಡೈರೆಕ್ಷನ್ ಮಾಡಬೇಕು ಎನ್ನುವುದು ಅಭಿಮಾನಿಗಳ ಒತ್ತಾಯವಾಗಿದೆ.

ಅಭಿಮಾನಿಗಳ ಆಸೆಗೆ ಜೈ ಎಂದಿರುವ ಉಪ್ಪಿ ಈ ವರ್ಷ ಒಂದು ಸಿನಿಮಾವನ್ನು ನಿರ್ದೇಶನ ಮಾಡುತ್ತೇನೆ ಎಂದಿದ್ದಾರೆ. ಮತ್ತೊಂದು ಕಡೆ ಉಪೇಂದ್ರ ನಿರ್ದೇಶನದ ಸಿನಿಮಾದ ಬಗ್ಗೆ ನಿರ್ಮಾಪಕ ಆರ್ ಎಸ್ ಕನಕಪುರ ಶ್ರೀನಿವಾಸ್ ಮಾತನಾಡಿದ್ದಾರೆ. ಈ ಚಿತ್ರದ ಬಗ್ಗೆ ಅನೇಕ ವಿಷಯವನ್ನು ಹಂಚಿಕೊಂಡಿದ್ದಾರೆ.

ಉಪೇಂದ್ರ ಅವರ 50ನೇ ಸಿನಿಮಾವನ್ನು ಅವರೇ ನಿರ್ದೇಶನ ಮಾಡಲಿದ್ದು, ಈ ಚಿತ್ರದ ಅನೇಕ ಕುತೂಹಲಕಾರಿ ವಿಷಯವನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್ ತಿಳಿಸಿದ್ದಾರೆ. ಮುಂದೆ ಓದಿ...

ಸಂತು ಕಥೆ, ಉಪ್ಪಿ ನಿರ್ದೇಶನ

ಸಂತು ಕಥೆ, ಉಪ್ಪಿ ನಿರ್ದೇಶನ

ಇದುವರೆಗೆ ಉಪೇಂದ್ರ ನಿರ್ದೇಶನ ಮಾಡಿರುವ ಎಲ್ಲ ಸಿನಿಮಾಗಳಲ್ಲಿ ಅವರ ಕಥೆಯೇ ಇತ್ತು. ಆದರೆ, ಅವರ ಮುಂದಿನ ನಿರ್ದೇಶನದ ಚಿತ್ರದಲ್ಲಿ ಸಂತು ಕಥೆ ಇರಲಿದೆಯಂತೆ. ನವ ನಿರ್ದೇಶಕ ಸಂತು ಉಪ್ಪಿಗೆ ಒಂದು ಕಥೆ ಮಾಡಿದ್ದು, ಆ ಕಥೆ ಇಷ್ಟ ಆದ ಕಾರಣ ಉಪ್ಪಿಯೇ ಈ ಚಿತ್ರದ ಡೈರೆಕ್ಟರ್ ಆಗಿದ್ದಾರೆ.

ಚಿತ್ರದ ಟೈಟಲ್ 'ಅಧೀರ'

ಚಿತ್ರದ ಟೈಟಲ್ 'ಅಧೀರ'

ವಿಶೇಷ ಅಂದರೆ, ಇದು ಉಪೇಂದ್ರ ಅವರ 50ನೇ ಸಿನಿಮಾ ಆಗಲಿದೆಯಂತೆ. ಈ ಸಿನಿಮಾಗೆ 'ಅಧೀರ' ಎಂಬ ಹೆಸರನ್ನು ಇಡಲಾಗದೆ. ಉಪೇಂದ್ರ ಈ ಸಿನಿಮಾವನ್ನು ಸದ್ಯದಲ್ಲಿಯೇ ಅನೌನ್ಸ್ ಮಾಡಲಿದ್ದಾರಂತೆ. ಈ ಸಿನಿಮಾ ಉಪೇಂದ್ರ ಅವರ ರೆಗ್ಯೂಲರ್ ಸ್ಟೈಲ್ ನಲ್ಲಿ ಇರಲಿದೆಯಂತೆ.

50 ಕೋಟಿ ಬಜೆಟ್

50 ಕೋಟಿ ಬಜೆಟ್

ಉಪೇಂದ್ರ 50ನೇ ಸಿನಿಮಾ, ಅದರಲ್ಲಿಯೂ ಅವರ ನಿರ್ದೇಶನದ ಸಿನಿಮಾ ಎಂದ ಮೇಲೆ ದೊಡ್ಡ ಮಟ್ಟದಲ್ಲಿಯೇ ಇರಬೇಕು ಎನ್ನುವುದು ಅಭಿಮಾನಿಗಳ ಡಿಮ್ಯಾಂಡ್. ಅದೇ ರೀತಿ ಉಪ್ಪಿಯ ಹಾಫ್ ಸೆಂಚುರಿ ಸಿನಿಮಾ 50 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಆಗಲಿದೆಯಂತೆ. ನಿರ್ಮಾಪಕ ಆರ್ ಎಸ್ ಕನಕಪುರ ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರಂತೆ.

ನಾಲ್ಕು ಭಾಷೆ, ಇಬ್ಬರು ಹೀರೋಯಿನ್

ನಾಲ್ಕು ಭಾಷೆ, ಇಬ್ಬರು ಹೀರೋಯಿನ್

ಈ ಸಿನಿಮಾವನ್ನು ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್ ಇದೆಯಂತೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಚಿತ್ರವನ್ನು ತೆರೆಗೆ ತರಬೇಕು ಎನ್ನುವುದು ನಿರ್ಮಾಪಕರ ಆಸೆಯಾಗಿದೆ. ಮತ್ತೊಂದು ವಿಶೇಷ ಅಂದರೆ, ಉಪೇಂದ್ರರಿಗೆ ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರಂತೆ.

More from Filmibeat

English summary
Kannada actor Upendra 50th movie will be directing by himself ?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X