ಯೂಟ್ಯೂಬ್‌ನಲ್ಲಿ 'ಇರುವೆ' ಸದ್ದು; ಉಪ್ಪಿ ಜಾಹೀರಾತು ನಿರ್ದೇಶಿಸಿದ್ದ ರಾಜೇಶ್ ರಾಮಸ್ವಾಮಿಯ ಕಿರುಚಿತ್ರ

By ಫಿಲ್ಮಿಬೀಟ್ ಡೆಸ್ಕ್

ಸಿನಿಮಾ ನಿರ್ದೇಶನ ಮಾಡಬೇಕು. ನಟಿಸಬೇಕು ಅಂತ ಕನಸು ಕಟ್ಟಿಕೊಂಡವರು ಮೊದಲು ಕಿರುಚಿತ್ರದ ಕಡೆಗೆ ಗಮನ ಕೊಡುತ್ತಿದ್ದರು. ಒಂದು ಕಿರುಚಿತ್ರವನ್ನು ನಿರ್ಮಾಣ ಮಾಡಿ ತಮ್ಮ ಪ್ರತಿಭೆಯನ್ನು ತಾವೇ ಪರೀಕ್ಷೆ ಮಾಡಿಕೊಳ್ಳುತ್ತಿದ್ದರು. ಮತ್ತೆ ಕೆಲವರು ಸಿನಿಮಾ ಕನಸನ್ನು ಇಟ್ಟುಕೊಂಡೇ ಶಾರ್ಟ್ ಫಿಲ್ಮ್‌ಗೆ ಕೈ ಹಾಕುತ್ತಿದ್ದರು. ಆದ್ರೀಗ ಕನ್ನಡದಲ್ಲಿ ಕಿರು ಚಿತ್ರರಂಗ ಸಂಖ್ಯೆ ಕಡಿಮೆ ಆಗಿದೆ.

ಇಂತಹ ಸಮಯದಲ್ಲಿಯೇ 'ಇರುವೆ' ಅನ್ನುವ ಕಿರುಚಿತ್ರವೊಂದು ನಿರ್ಮಾಣ ಮಾಡಿದೆ. 17 ನಿಮಿಷದ ಈ ಕಿರು ಚಿತ್ರದಲ್ಲಿ ಕನ್ನಡದ ಜನಪ್ರಿಯರ ನಟರು ನಟಿಸಿದ್ದಾರೆ. ಅಂದ್ಹಾಗೆ, ಜಾಹೀರಾತುಗಳಿಗೆ ಆಕ್ಷನ್ ಕಟ್ ಹೇಳಿದ್ದ ರಾಜೇಶ್ ರಾಮಸ್ವಾಮಿ 'ಇರುವೆ' ಕಿರುಚಿತ್ರದ ನಿರ್ದೇಶಕರು. ಇವರು ಬೆಂಗಳೂರಿನ 'ದಿ ಸ್ಕ್ರಿಪ್ಟ್ ರೂಮ್‌'ನ ಸಂಸ್ಥಾಪಕರು ಕೂಡ ಹೌದು.

Iruve short film trending in youtube

'ಇರುವೆ' ನಿರ್ದೇಶಕ ರಾಜೇಶ್ ರಾಮಸ್ವಾಮಿ ಎರಡು ದಶಕಗಳ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ನಟಿಸಿದ್ದ ಜಾಹೀರಾತನ್ನು ನಿರ್ದೇಶಿಸಿದ್ದರು. ಉಪ್ಪಿ ಹೇಳುವ "ಎಲ್ಲಾ ಓಕೆ.. ಕೂಲ್ ಡ್ರಿಂಕ್ ಯಾಕೆ?" ಎಂದು ಡೈಲಾಗ್ ಬಿಟ್ಟಿದ್ದ ಆ ಜಾಹೀರಾತು ಯಾವುದೆಂದು ನೆನಪಿಗೆ ಬಂದಿರಬಹುದು. ಅದೇ ನಿರ್ದೇಶಕ 'ಇರುವೆ' ಅನ್ನುವ ಕಿರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

'ಇರುವೆ' ಕಿರುಚಿತ್ರದಲ್ಲಿ ಹಿರಿಯ ನಟ ದತ್ತಣ್ಣ, ಮಹಾಂತೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೇ ಪ್ರಕಾಶ್ ತುಮಿನಾಡ್, ರೋಹಿತ್ ಶ್ರೀನಾಥ್, ಸೋನು ವೇಣುಗೋಪಾಲ್ ಮತ್ತು ಅನಿರುದ್ಧ್ ಆಚಾರ್ಯ ಈ ಕಿರುಚಿತ್ರದ ಪ್ರಮುಖ ಕಲಾವಿದರು. ಸದ್ಯ ಈ ಕಿರುಚಿತ್ರ ದಿ ಸ್ಕ್ರಿಪ್ಟ್ ರೂಮ್ ಅನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.

Iruve short film trending in youtube

ರಾಜೇಶ್ ರಾಮಸ್ವಾಮಿ ಈ ಕಿರುಚಿತ್ರವನ್ನು ಮಾಡಿದ್ದು ಯಾಕೆ? ಅನ್ನೋದನ್ನು ಹೇಳಿದ್ದಾರೆ. "ನಾನು ಮಾಲ್ಗುಡಿ ಡೇಸ್‌ನ ದೊಡ್ಡ ಅಭಿಮಾನಿ. ಆರ್‌ಕೆ ನಾರಾಯಣ್ ಅವರ ಕಥೆ ನನಗೆ ಇಷ್ಟ. ಈ ಕಥೆಗಳನ್ನು ಶಂಕರ್‌ನಾಗ್ ಅವರು ಕಿರುತೆರೆಗೆ ಅಳವಡಿಸಿದ ರೀತಿನೂ ಇಷ್ಟ. ಈ ಸಾಮಾನ್ಯ ಜನರ ಸರಳ ನಿರೂಪಣಾ ಶೈಲಿ, ಸೂಕ್ಷ್ಮವಾದ ಅವಲೋಕನಗಳನ್ನು ನಾನೊಬ್ಬ ವೀಕ್ಷಕನಾಗಿ, ಓದುಗನಾಗಿ ಆನಂದಿಸುವ ಸಂಗತಿ. ಅಂದಿನಿಂದ, ನನಗೆ ಪ್ರತಿದಿನ ಭೇಟಿಯಾಗುವ ಈ ಸಾಮಾನ್ಯ ಜನರ ಬಗ್ಗೆ ಕುತೂಹಲವಿದೆ. ಆ ಕಥೆಗಳನ್ನು ಇಟ್ಟುಕೊಂಡು ಇರುವೆ ಕಿರುಚಿತ್ರ ತಯಾರಿಸಲಾಗಿದೆ." ಎನ್ನುತ್ತಾರೆ ರಾಜೇಶ್ ರಾಮಸ್ವಾಮಿ.

ಇನ್ನು 'ಇರುವೆ' ಕಿರುಚಿತ್ರ 70 ವರ್ಷ ವಯಸ್ಸಿನ ಗೋವಿಂದಯ್ಯನ ಕಥೆ. ಅವರ ಮನೆಯಲ್ಲಿರುವ ಕೆಂಪು ಇರುವೆಗಳ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ. ಅಂದ್ಹಾಗೆ ಇದು ದಿ ಸ್ಕ್ರಿಪ್ಟ್ ರೂಮ್‌ನ ಚೊಚ್ಚಲ ನಿರ್ಮಾಣವಾಗಿದೆ. "ನಾವು ಮೊದಲ ಬಾರಿಗೆ ಕಥೆಯೊಂದಿಗೆ ದತ್ತಣ್ಣ ಅವರನ್ನು ಸಂಪರ್ಕಿಸಿದಾಗ, ಅವರು ಸರಿ.. ನನಗೆ ಕಥೆ ಇಷ್ಟವಾಯಿತು. ಆದರೆ ಈ ಸಿನಿಮಾ ಮಾಡಲು ನಿಮ್ಮ ಮುಖ್ಯ 'ಉದ್ದೇಶ' ಯಾವುದು? ಎಂದು ಕೇಳಿದ್ದರು. ಆ ಪ್ರಶ್ನೆ ನನ್ನನ್ನೂ ಕಾಡಲು ಪ್ರಾರಂಭವಾಯ್ತು. ಪ್ರಾಮಾಣಿಕವಾಗಿ, ಸರ್, ತಮಾಷೆಗಾಗಿ ಎಂದು ಹೇಳಿದೆ. ಈ ಕಾರಣಕ್ಕೆ ಇರುವೆ ಕಿರುಚಿತ್ರವನ್ನು ಉಚಿತವಾಗಿ ವೀಕ್ಷಿಸಲು ಯೂಟ್ಯೂಬ್‌ನಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದೇವೆ" ಎಂದು ರಾಜೇಶ್ ರಾಮಸ್ವಾಮಿ ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X