ಸ್ಟೈಲಿಶ್ ಅಲ್ಲು ಅರ್ಜುನ್ ಜೊತೆ ಉಪ್ಪಿ ಖಡಕ್ ಪೋಸ್

By Harshitha

ತೆಲುಗು ಸಿನಿಮಾದಲ್ಲಿ ಉಪೇಂದ್ರ ಅಭಿನಯಿಸುತ್ತಿರುವ ಸುದ್ದಿ ನಿಮಗೆ ಗೊತ್ತು. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ 'ಸನ್ ಆಫ್ ಸತ್ಯಮೂರ್ತಿ' ಚಿತ್ರದಲ್ಲಿ ಉಪ್ಪಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅಷ್ಟೇ ಅಲ್ಲ, ಸಿನಿಮಾದಲ್ಲಿ ರಿಯಲ್ ಸ್ಟಾರ್ ವಿಲನ್..!

ಈಗಾಗಲೇ ರಿಲೀಸ್ ಆಗಿರುವ ಎಲ್ಲಾ ಟೀಸರ್ ಗಳಲ್ಲೂ ಅಲ್ಲು ಅರ್ಜುನ್ ಸೂಪರ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಆದ್ರೆ, ಉಪ್ಪಿ ಮಾತ್ರ ರಾಯಲಸೀಮಾ ರೆಡ್ಡಿಗಾರು ರೇಂಜಲ್ಲಿ ಬಿಳಿ ಶರ್ಟು ಮತ್ತು ಪಂಚೆ ತೊಟ್ಟು ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.

Upendra and Allu Arjun starrer Son of Satyamurthy working still and new teaser out

ಇದೀಗ ರಿಲೀಸ್ ಆಗಿರುವ ಹೊಚ್ಚ ಹೊಸ ಫೋಟೋದಲ್ಲೂ ಉಪ್ಪಿಯ 'ರೆಡ್ಡಿ' ದರ್ಬಾರ್ ಹೈಲೈಟ್. ಬಿಳಿ ಬನಿಯನ್ ತೊಟ್ಟು ಆಂಧ್ರ ಮೀಲ್ಸ್ ಸವಿಯುತ್ತಿರುವ ಉಪ್ಪಿ ಜೊತೆ ಮಾಡರ್ನ್ ಲುಕ್ ನಲ್ಲಿ ಅಲ್ಲು ಅರ್ಜುನ್ ಇದ್ದಾರೆ. ಇನ್ನೂ 'ಗೌರಮ್ಮ'ನ ಗೆಟಪ್ ನಲ್ಲಿ ಸ್ನೇಹಾ ಕಾಣಿಸಿಕೊಂಡಿದ್ದಾರೆ. ['ಉಪ್ಪಿಟ್ಟು' ಬಿಟ್ಟು ಆಂಧ್ರ ಮೀಲ್ಸ್ ಗೆ ಕೈಹಾಕಿದ ಉಪೇಂದ್ರ]

ಹಾಗ್ನೋಡಿದ್ರೆ, ಟಾಲಿವುಡ್ ವಿಲನ್ ಗಳ ಯೂನಿಫಾರ್ಮ್ ಈ ವೈಟ್ ಅಂಡ್ ವೈಟ್. ಅದ್ರಲ್ಲೂ ಉಪ್ಪಿ ನೀಡಿರುವ ಖಡಕ್ ಪೋಸ್ ಗಳನ್ನ ನೋಡಿದ್ರೆ, ವಿಲನ್ ಪಾತ್ರವನ್ನ ಉಪ್ಪಿ ಪೋಷಿಸಿದ್ದಾರಾ ಅನ್ನುವ ಅನುಮಾನ ಮೂಡುವುದು ಸಹಜ.

ಆದ್ರೆ, ಈ ಬಗ್ಗೆ ಉಪ್ಪಿಯಾಗಲಿ, 'ಸನ್ ಆಫ್ ಸತ್ಯಮೂರ್ತಿ' ಚಿತ್ರತಂಡವಾಗಲಿ ಪಾತ್ರಗಳ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದ್ರೆ, ನಾಯಕ ಅಲ್ಲು ಅರ್ಜುನ್ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ 'ಸನ್ ಆಫ್ ಸತ್ಯಮೂರ್ತಿ' ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡುತ್ತಿದ್ದಾರೆ. [ಅಲ್ಲು ಅರ್ಜುನ್-ಉಪೇಂದ್ರ ಚಿತ್ರದ ಸೊಗಸಾದ ಟೀಸರ್]

ತಮ್ಮ ಫೇಸ್ ಬುಕ್, ಟ್ವಿಟ್ಟರ್ ಮತ್ತು ಯೂಟ್ಯೂಬ್ ಅಕೌಂಟ್ ನಲ್ಲಿ 'ಸನ್ ಆಫ್ ಸತ್ಯಮೂರ್ತಿ' ಚಿತ್ರ ಎಲ್ಲಾ ಅಪ್ ಡೇಟ್ಸ್ ಮತ್ತು ಟೀಸರ್ ಗಳನ್ನ ಶೇರ್ ಮಾಡುತ್ತಾ ಅಭಿಮಾನಿಗಳನ್ನ ಸೆಳೆಯುತ್ತಿದ್ದಾರೆ ಅಲ್ಲು ಅರ್ಜುನ್. [ಟಾಲಿವುಡ್ ಗೆ ಖಳನಟನಾಗಿ ಎಂಟ್ರಿ ಕೊಟ್ಟ ಉಪೇಂದ್ರ?]

ಹೀಗಾಗಿ ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ರ ಈ ಚಿತ್ರ ಬಹುನಿರೀಕ್ಷೆ ಹುಟ್ಟುಹಾಕಿದೆ. ಅದ್ರಲ್ಲೂ, ಉಪ್ಪಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟಹಾಗಾಗಿದೆ.

More from Filmibeat

English summary
After a long time Real Star Upendra is shooting for a Telugu film 'Son Of Satyamurthy' directed by Trivikram Srinivas. Upendra and Allu Arjun are sharing screen space for the first time in this film. Check out the new teaser and working still here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X