ಕಾರ್ನಾಡರ ಕೊಡುಗೆ ನೆನೆದ ಉಪೇಂದ್ರ, ದರ್ಶನ್
Recommended Video
ಸಾಹಿತಿ ಗಿರೀಶ್ ಕಾರ್ನಾಡರ ನಿಧನಕ್ಕೆ ಕನ್ನಡ ಚಿತ್ರರಂಗ ಸಂತಾಪ ಸೂಚಿಸಿದೆ. ನಟ ದರ್ಶನ್ ಹಾಗೂ ಉಪೇಂದ್ರ ಸಹ ಕಾರ್ನಾಡರ ಕೊಡುಗೆಯನ್ನು ನೆನಪು ಮಾಡಿಕೊಂಡಿದ್ದಾರೆ.
''ಕನ್ನಡ ಸಾಹಿತ್ಯ ಲೋಕಕ್ಕೆ ಜ್ಞಾನ ಪೀಠ ಪ್ರಶಸ್ತಿ, ಪದ್ಮಶ್ರೀ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರು, ಚಿಂತಕರು, ನಿರ್ದೇಶಕರು, ಹಿರಿಯ ಸಾಹಿತಿ ಹಾಗೂ ನಟರದ ಗಿರೀಶ್ ಕಾರ್ನಾಡ್ ರವರ ಕೊಡುಗೆ ಅಪಾರ.... ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಭಾವಪೂರ್ಣ ಶ್ರಧ್ದಾಂಜಲಿಗಳು.'' ಎಂದು ನಟ ಉಪೇಂದ್ರ ಸಂತಾಪ ಸೂಚಿಸಿದ್ದಾರೆ.

ನಟ ದರ್ಶನ್ ಕೂಡ ಟ್ವೀಟ್ ಮಾಡಿ ''ಜ್ಞಾನಪೀಠ ಪ್ರಶಸ್ತಿ ವಿಜೇತ, ಹಿರಿಯ ಸಾಹಿತಿ ಹಾಗೂ ಮೇರು ಕಲಾವಿದರಲ್ಲೊಬ್ಬರಾದ ಗಿರೀಶ್ ಕಾರ್ನಾಡ್ ಇಂದು ವಿಧಿವಶರಾಗಿರುವುದು ಕನ್ನಡ ಸಾಹಿತ್ಯ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.'' ಎಂದು ಸಂತಾಪ ವ್ಯಕ್ತ ಪಡಿಸಿದ್ದಾರೆ.
ಉಳಿದಂತೆ, ನಟ ಕಮಲ್ ಹಾಸನ್, ಶಿವರಾಜ್ ಕುಮಾರ್, ಅನಂತ್ ನಾಗ್, ಸುಮಲತಾ ಅಂಬರೀಶ್ ಹೀಗೆ ಅನೇಕರು ಕಾರ್ನಾಡರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಕೆಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಇಂದು ಬೆಳಗ್ಗೆ ಬೆಂಗಳೂರಿನ ಲ್ಯಾವಲ್ಲೆ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.


Click it and Unblock the Notifications











