ಬುದ್ಧಿವಂತನ ನಂತರ ಪುಣ್ಯಾತ್ಮನಾಗಿ ಬರ್ತಿದ್ದಾರೆ ಉಪೇಂದ್ರ

ಬುದ್ಧಿವಂತನಾಗಿ ಮೋಡಿ ಮಾಡಿರುವ ಉಪೇಂದ್ರ ಇದೀಗ 'ಪುಣ್ಯಾತ್ಮ' ನಾಗಿ ತೆರೆ ಮೇಲೆ ಬರಲು ಸಕಲ ತಯಾರಿ ನಡೆಸಿದ್ದಾರೆ.

Recommended Video

KABZA A NEW VISION OF UNDERWORLD PHOTOSHOOT | UPENDRA | KABZA | R CHANDRU| Filmibeat Kannada

ಪ್ರತಿಭಾವಂತ ನಿರ್ದೇಶಕ ಶಶಾಂಕ್ ನಿರ್ದೇಶಕತ್ವದಲ್ಲಿ ನಟ ಉಪೇಂದ್ರ ನಟಿಸುತ್ತಿದ್ದು, ಸಿನಿಮಾಕ್ಕೆ 'ಪುಣ್ಯಾತ್ಮ' ಎಂದು ಹೆಸರಿಡಲಾಗಿದೆ. ಇದೇ ಮೊದಲ ಬಾರಿಗೆ ಶಶಾಂಕ್ ಹಾಗೂ ಉಪೇಂದ್ರ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ.

ಸ್ಕ್ರಿಪ್ಟ್ ಭಾಗವನ್ನು ಪೂರ್ಣಗೊಳಿಸಿರುವ ಶಶಾಂಕ್ ಈಗಾಗಲೇ ಉಪೇಂದ್ರ ಅವರಿಗೆ ಕತೆ ಹೇಳಿದ್ದು, ಉಪೇಂದ್ರ ಸಹ ಒಪ್ಪಿಗೆ ಸೂಚಿಸಿದ್ದಾರೆ. ಇನ್ನುಳಿದ ಪಾತ್ರಗಳ ಆಯ್ಕೆ ಪ್ರಗತಿಯಲ್ಲಿದೆ.

ಈ ಹಿಂದೆಯೇ ಶಶಾಂಕ್ ಹಾಗೂ ಉಪೇಂದ್ರ ಒಟ್ಟಿಗೆ ಸಿನಿಮಾ ಮಾಡಬೇಕಿತ್ತು. ಸಿನಿಮಾ ಇನ್ನೇನು ಸೆಟ್ಟೇರಲಿದೆ ಎಂದೇ ಹೇಳಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಅದು ತಪ್ಪಿಹೋಗಿತ್ತು.

ಲೊಕೇಶನ್ ಹುಡುಕುತ್ತಿರುವ ಶಶಾಂಕ್

ಲೊಕೇಶನ್ ಹುಡುಕುತ್ತಿರುವ ಶಶಾಂಕ್

'ಪುಣ್ಯಾತ್ಮ' ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯ ಪ್ರಗತಿಯಲ್ಲಿದ್ದು ಇದರ ಜೊತೆಗೆ ಲೊಕೇಶನ್ ಹುಡುಕುವ ಕಾರ್ಯದಲ್ಲಿ ಸಹ ಶಶಾಂಕ್ ಬ್ಯುಸಿಯಾಗಿದ್ದಾರೆ. ಇದೊಂದು ಕಾಮಿಡಿ ಮತ್ತು ಆಕ್ಷನ್ ಭರಿತ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ.

ಎರಡು ಸಿನಿಮಾದಲ್ಲಿ ಬ್ಯುಸಿಯಾಗಿರುವ ಉಪ್ಪಿ

ಎರಡು ಸಿನಿಮಾದಲ್ಲಿ ಬ್ಯುಸಿಯಾಗಿರುವ ಉಪ್ಪಿ

ಉಪೇಂದ್ರ ಅವರು ಕಬ್ಜ ಮತ್ತು ಬುದ್ಧಿವಂತ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಎರಡೂ ಸಿನಿಮಾಗಳ ಬಹುತೇಕ ಚಿತ್ರೀಕರಣ ಮುಗಿದಿದ್ದು, ಲಾಕ್‌ಡೌನ್ ಅಂತ್ಯದ ಬಳಿಕ ಚಿತ್ರೀಕರಣ ಮುಗಿಯಲಿದೆ.

ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಚಿತ್ರೀಕರಣ

ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಚಿತ್ರೀಕರಣ

ಸಿನಿಮಾಕ್ಕಾಗಿ ಪಕ್ಕಾ ಯೋಜನೆಯನ್ನು ಶಶಾಂಕ್ ತಯಾರಿಸಿದ್ದು, ಉಪೇಂದ್ರ ಅವರ ಸದ್ಯದ ಎರಡೂ ಸಿನಿಮಾ ಮುಗಿದ ಬಳಿಕ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಆ ವೇಳೆಗೆ ಪಕ್ಕಾ ಶೆಡ್ಯೂಲ್ ಫಿಕ್ಸ್ ಮಾಡಲಿದ್ದಾರೆ ಶಶಾಂಕ್.

ಎಫ್‌ಯುಸಿ ಸದಸ್ಯರಾಗಿರುವ ಶಶಾಂಕ್

ಎಫ್‌ಯುಸಿ ಸದಸ್ಯರಾಗಿರುವ ಶಶಾಂಕ್

ನಿರ್ದೇಶಕ ಶಶಾಂಕ್ ಎಫ್‌ಯುಸಿ (ಫಿಲ್ಮ್ ಯುನೈಟೆಡ್ ಕ್ಲಬ್‌) ನ ಸದಸ್ಯರಾಗಿದ್ದು. ಕ್ಲಬ್‌ನ ಮೂಲಕ ಮಾಡುತ್ತಿರುವ ಸಿನಿಮಾ ಇದಲ್ಲ. ಕ್ಲಬ್‌ನ ಪಾಲ್ಗೊಳ್ಳುವಿಕೆಯ ಹೊರತಾದ ಸಿನಿಮಾ ಇದಾಗಿರಲಿದೆ. ಎಫ್‌ಯುಸಿ ವೆಬ್‌ಸೈಟ್‌ನಲ್ಲಿ ಆಗಾಗ್ಗೆ ತಮ್ಮ ಸಿನಿಮಾ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ ಶಶಾಂಕ್.

More from Filmibeat

English summary
Upendra and director Shashank teaming up for movie 'Punyathma'. Movie start filming from November.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X