ಸಿಟಿ ಬಿಟ್ಟು ರೆಸಾರ್ಟ್ ಸೇರಿದ ಉಪೇಂದ್ರ ಫ್ಯಾಮಿಲಿ
Recommended Video

ರಿಯಲ್ ಸ್ಟಾರ್ ಉಪೇಂದ್ರ ಅವರನ್ನ ತೆರೆ ಮೇಲೆ ನೋಡಲು ಇನ್ನು ಸಾಕಷ್ಟು ದಿನಗಳು ಕಾಯಬೇಕು. ರಾಜಕೀಯ ಪ್ರವೇಶ ಮಾಡಿರುವ ಉಪ್ಪಿಯನ್ನ ರಿಯಲ್ ಆಗಿ ನೋಡುವ ಅವಕಾಶವಂತು ಎಲ್ಲರಿಗೂ ಸಿಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಉಪ್ಪಿ ಅಭಿಮಾನಿಗಳ ಮನೆ ಬಳಿಗೆ ಬಂದು ತಮ್ಮ ಪಕ್ಷದ ಪ್ರಚಾರ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ.
ಸಿನಿಮಾ, ರಾಜಕೀಯ ಇವುಗಳ ಮಧ್ಯೆ ಉಪ್ಪಿ ಸಿಟಿ ಬಿಟ್ಟು ರೆಸಾರ್ಟ್ ಸೇರಿಕೊಂಡಿದ್ದಾರೆ ಅನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. ರೆಸಾರ್ಟ್ ನಿಂದಲೇ ರಾಜಕೀಯ ಪ್ರಾರಂಭ ಮಾಡಿದ ಉಪ್ಪಿ ಮತ್ತೆ ರೆಸಾರ್ಟ್ ನಲ್ಲೇ ಉಳಿದುಕೊಂಡಿದ್ದಾರಂತೆ. ಬನಶಂಕರಿಯಿಂದ ದೊಡ್ಡ ಆಲದಮರ ಬಳಿ ಇರುವ ರುಪ್ಪಿಸ್ ರೆಸಾರ್ಟ್ ಗೆ ಶಿಫ್ಟ್ ಆಗಿದ್ದಾರೆ.
ಮನೆ ಬಿಟ್ಟು ಉಪ್ಪಿ ರೆಸಾರ್ಟ್ ನಲ್ಲಿ ಏನು ಮಾಡುತ್ತಿದ್ದಾರೆ ಅಂತ ಯೋಚನೆ ಮಾಡಬೇಡಿ. ಉಪ್ಪಿ ಹೊಸ ಗೃಹವನ್ನ ಪ್ರವೇಶ ಮಾಡಿದ್ದಾರೆ. ಸಿಟಿಯಿಂದ ದೂರವಿರುವ ಹಳ್ಳಿಗಳ ಮಧ್ಯೆ ಇರೋ ರೆಸಾರ್ಟ್ ಹಿಂಭಾಗದಲ್ಲಿ ಹೊಸ ಮನೆಯನ್ನ ಕಟ್ಟಿಕೊಂಡಿದ್ದಾರೆ. ಹಾಗಾದ್ರೆ ಉಪ್ಪಿ ಮನೆ ಹೇಗಿದೆ? ರೆಸಾರ್ಟ್ ನಲ್ಲಿ ಮನೆ ಎಲ್ಲಿ ಕಟ್ಟಿದ್ದಾರೆ. ಗೃಹ ಪ್ರವೇಶ ಹೇಗಾಯ್ತು ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ರೆಸಾರ್ಟ್ ನಲ್ಲಿ ಉಪ್ಪಿ ಸಂಸಾರ
ರಿಯಲ್ ಸ್ಟಾರ್ ಉಪೇಂದ್ರ ಹೊಸ ಮನೆಗೆ ಪ್ರವೇಶ ಮಾಡಿದ್ದಾರೆ. ತಾವರೆಕೆರೆಯ ಚುಂಚನಕುಪ್ಪೆ ಬಳಿ ಇರುವ ರುಪ್ಪಿಸ್ ರೆಸಾರ್ಟ್ ನಲ್ಲಿ ಉಪ್ಪಿ ಹೊಸ ಮನೆಯನ್ನ ಕಟ್ಟಿದ್ದಾರೆ. ಇತ್ತಿಚಿಗಷ್ಟೇ ಗೃಹ ಪ್ರವೇಶವನ್ನು ಮಾಡಿದ್ದಾರೆ.

ಹೊಸ ಮನೆಯಲ್ಲಿ ಜೀವನ ನಡೆಸಲು ನಿರ್ಧಾರ
ಬನಶಂಕರಿಯಿಂದ ರುಪ್ಪಿಸ್ ರೆಸಾರ್ಟ್ ಗೆ ಶಿಫ್ಟ್ ಆಗಲು ಉಪ್ಪಿ ಫ್ಯಾಮಿಲಿ ನಿರ್ಧಾರ ಮಾಡಿದೆ. ಸಾಂಪ್ರದಾಯಿಕವಾಗಿ ಗೃಹ ಪ್ರವೇಶ ಸಮಾರಂಭ ಮಾಡಿ ಮುಗಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಉಪ್ಪಿ ಫ್ಯಾಮಿಲಿ ಹೊಸ ಮನೆಯಲ್ಲಿ ಜೀವನ ಕಳೆಯಲಿದೆ.

ತುಂಬಾ ಚೆನ್ನಾಗಿದೆ ಹೊಸ ಮನೆ
ರುಪ್ಪಿಸ್ ರೆಸಾರ್ಟ್ ನ ಹಿಂಭಾಗದಲ್ಲಿ ಹೊಸ ಮನೆಯನ್ನ ಕಟ್ಟಲಾಗಿದೆ. ಈ ಹಿಂದೆ ಪ್ರಿಯಾಂಕ ಉಪೇಂದ್ರ ಅಭಿನಯದ ಮಮ್ಮಿ ಸೇವ್ ಮಿ ಸಿನಿಮಾದ ಚಿತ್ರೀಕರಣಕ್ಕಾಗಿ ಅದೇ ಸ್ಥಳದಲ್ಲಿ ಬಂಗಲೆಯ ಸೆಟ್ ಹಾಕಲಾಗಿತ್ತು. ಆ ಜಾಗದಲ್ಲಿ ದೊಡ್ಡ ಮನೆ ನಿರ್ಮಾಣ ಆಗಿದೆ.

ಸಿಟಿ ಬಿಟ್ಟು ಹಳ್ಳಿ ಸೇರಿ ಕೊಂಡರು ಉಪ್ಪಿ
ಇಷ್ಟು ವರ್ಷಗಳ ಕಾಲ ಬನಶಂಕರಿಯಲ್ಲಿ ವಾಸವಾಗಿದ್ದ ಉಪ್ಪಿ ಇನ್ನು ಮುಂದೆ ರುಪ್ಪಿಸ್ ರೆಸಾರ್ಟ್ ನಲ್ಲಿ ಇರಲಿದೆ. ಹಾಗಂತ ಬನಶಂಕರಿಯ ಮನೆಯನ್ನೂ ಖಾಲಿ ಮಾಡುತ್ತಿಲ್ಲ. ರಾಜಕೀಯ ಪಕ್ಷದ ಕೆಲಸ ಹಾಗೂ ಸಿನಿಮಾ ಕೆಲಸಗಳೆಲ್ಲವೂ ಈ ಮನೆಯಲ್ಲೇ ನಡೆಯಲಿದೆ.


Click it and Unblock the Notifications











