ಸುದೀಪ್25: ಶುಭಕೋರಿದ ಉಪೇಂದ್ರ, ಪ್ರಿಯಾಮಣಿ, ರಮ್ಯಾಕೃಷ್ಣ

ಚಿತ್ರರಂಗದಲ್ಲಿ ಕಿಚ್ಚ ಸುದೀಪ್ 25 ವರ್ಷ ಪೂರೈಸಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಸಂಭ್ರಮ ಜೋರಾಗಿದೆ. ಬೆಳ್ಳಿ ಮಹೋತ್ಸವದಲ್ಲಿರುವ ಸುದೀಪ್‌ಗೆ ಭಾರತೀಯ ಸಿನಿರಂಗದ ಅನೇಕರು ಶುಭಕೋರಿದ್ದಾರೆ. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ವಿಡಿಯೋ ಮೂಲಕ ಕಿಚ್ಚನಿಗೆ ವಿಶ್ ಮಾಡಿದ್ದರು.

Recommended Video

ವಿಡಿಯೋ ಮೂಲಕ ಸುದೀಪ್ ಗೆ ವಿಶ್ ಮಾಡಿದ ಉಪ್ಪಿ | Filmibeat Kannada

ಈಗ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ಸುದೀಪ್ ಸಾಧನೆಗೆ ಶುಭಕೋರಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಉಪ್ಪಿ ''ಇಂಡಸ್ಟ್ರಿಯಲ್ಲಿ 25 ವರ್ಷ ಮುಗಿಸಿ ಮುನ್ನುಗ್ಗುತ್ತಿರುವ ಸುದೀಪ್‌ಗೆ ಶುಭಾಶಯ. ನೀವು ಏನು ಅಂದುಕೊಂಡಿದ್ದೀರೋ ಅದೆಲ್ಲವೂ ಈಡೇರಲಿ. ನಿಮ್ಮ ತಂದೆ-ತಾಯಿ, ಅಭಿಮಾನಿಗಳ ಆಶೀರ್ವಾದವಿರಲಿ'' ಎಂದು ಹಾರೈಸಿದ್ದಾರೆ.

ಬಹುಭಾಷೆ ನಟಿ ಪ್ರಿಯಾಮಣಿ ಸಹ ಸುದೀಪ್ ಅವರಿಗೆ ಶುಭಾಶಯ ವಿಶ್ ಮಾಡಿದ್ದು, ''ಇಂಡಸ್ಟ್ರಿಯಲ್ಲಿ 25 ವರ್ಷ ಪೂರೈಸಿದ್ದಕ್ಕೆ ಶುಭಾಶಯ, ಇದು ಇನ್ನಷ್ಟು ಮುಂದುವರಿಯಲಿ, ನಮ್ಮನ್ನು, ಸಿನಿ ರಸಿಕರನ್ನು ರಂಜಿಸುತ್ತೀರಿ. ನಿಮ್ಮ ಜೊತೆ ನಟಿಸಿದ್ದ ನನಗೆ ನಿಜಕ್ಕೂ ಖುಷಿಯಿದೆ'' ಎಂದು ವಿಶ್ ಮಾಡಿದ್ದಾರೆ.

ನಟ-ನಿರ್ದೇಶಕ ರಮೇಶ್ ಅರವಿಂದ್ ಅವರು ಟ್ವೀಟ್ ಮಾಡಿದ್ದು, ''ಇನ್ನಷ್ಟು ಪ್ರಕಾಶಮಾನವಾಗಿ ಪ್ರಕಾಶಿಸಿ, ಒಳ್ಳೆಯದಾಗಲಿ'' ಎಂದು ಶುಭಕೋರಿದ್ದಾರೆ.

Upendra and Priyamani Wishes To Kiccha Sudeep For 25th year Journey

ಬಹುಭಾಷೆ ನಟಿ ರಮ್ಯಾಕೃಷ್ಣ ಅವರು ಸಹ ಸುದೀಪ್‌ಗೆ ಶುಭಕೋರಿದ್ದಾರೆ. ''25 ವರ್ಷ ಪೂರೈಸಿದ್ದಕ್ಕೆ ಶುಭಾಶಯ. ಇನ್ನು ತುಂಬ ಹೆಚ್ಚು ವರ್ಷ ಮುಂದುವರಿಯಲಿ, ನಿಮ್ಮ ಜೊತೆ ನಟಿಸಿದ ಅನುಭವ ಖುಷಿ ಇದೆ. ಇನ್ನು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲು ಇಷ್ಟ ಇದೆ. ಒಳ್ಳೆಯದಾಗಲಿ'' ಎಂದು ವಿಶ್ ಮಾಡಿದ್ದಾರೆ.

''ಸೈರಾ ನರಸಿಂಹ ರೆಡ್ಡಿ'' ಚಿತ್ರದ ನಿರ್ದೇಶಕ ಸುರೇಂದರ್ ರೆಡ್ಡಿ ಸಹ ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ. ''ಸಿನಿ ಇಂಡಸ್ಟ್ರಿಯಲ್ಲಿ 25 ವರ್ಷ ಪೂರೈಸಿದ್ದಕ್ಕೆ ಶುಭಾಶಯ, ಕೇವಲ ಕನ್ನಡ ಸಿನಿಮಾ ಮಾತ್ರವಲ್ಲ, ಇಡೀ ಭಾರತೀಯ ಸಿನಿಮಾ ನಿಮ್ಮನ್ನು ಹೊಂದಿರುವುದು ಅದೃಷ್ಟವಾಗಿದೆ'' ಎಂದು ಟ್ವೀಟ್ ಮಾಡಿದ್ದಾರೆ.

More from Filmibeat

English summary
Kannada Actor Upendra and Priyamani send video wishes to Kiccha Sudeep for 25th year Journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X