ಉಪ್ಪಿ ಮನೆಯ ಗಣೇಶ ಹಬ್ಬ ಸಖತ್ ಅದ್ದೂರಿಯಾಗಿತ್ತು
Recommended Video

ಗಣೇಶ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲಿಯೂ ನಟ ಉಪೇಂದ್ರ ಅವರಿಗೆ ಗಣೇಶ ಮೆಚ್ಚಿನ ದೇವರು. ಉಪೇಂದ್ರ ಅವರೇ ಹೇಳುವ ಹಾಗೆ ಗಣೇಶನಿಗೆ ಮತ್ತು ಅವರ ಕುಟುಂಬಕ್ಕೆ ದೊಡ್ಡ ನಂಟಿದೆ.
ನಿನ್ನೆ ಗಣೇಶ ಹಬ್ಬ. ಈ ಹಬ್ಬವನ್ನು ಉಪೇಂದ್ರ ಕುಟುಂಬ ಸಖತ್ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಉಪೇಂದ್ರ, ಪ್ರಿಯಾಂಕ ಉಪೇಂದ್ರ, ಉಪ್ಪಿ ಅವರ ತಂದೆ ತಾಯಿ, ಅಣ್ಣ ಅತ್ತಿಗೆ, ನಟ ನಿರಂಜನ್ ಹೀಗೆ ಇಡೀ ಕುಟುಂಬ ಒಟ್ಟಿಗೆ ಸೇರಿ ಹಬ್ಬವನ್ನು ಆಚರಣೆ ಮಾಡಿದೆ.

ಉಪೇಂದ್ರ ಮನೆಯಲ್ಲಿ ದೈವ ಭಕ್ತಿ ಹೆಚ್ಚಿದೆ. ನಟಿ ಪ್ರಿಯಾಂಕ ಉಪೇಂದ್ರ ಎಲ್ಲ ಹಬ್ಬಗಳನ್ನು ತುಂಬ ಚೆನ್ನಾಗಿ ಆಚರಣೆ ಮಾಡುತ್ತಾರೆ. ಗಣೇಶ ಹಬ್ಬದಲ್ಲಿ ಸಹ ಪೂಜೆ ಪುರಸ್ಕಾರ ಎಲ್ಲ ಜೋರಾಗಿತ್ತು. ಹಬ್ಬದ ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಪ್ರಿಯಾಂಕ ಹಂಚಿಕೊಂಡಿದ್ದಾರೆ.

ನಟ ಉಪೇಂದ್ರ ಸಹ ಸಿನಿಮಾದ ಕೆಲಸ ಇದ್ದರೂ ಹಬ್ಬದ ದಿನ ದೇವರ ಪೂಜೆಯಲ್ಲಿ ತೊಡಗಿದ್ದರು. ದೇವರ ಪೂಜೆ ಮಾಡಿ, ತಂದೆ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಇಡೀ ದಿನ ಕುಟುಂಬದ ಜೊತೆಗೆ ಕಳೆದಿದ್ದಾರೆ.


Click it and Unblock the Notifications











