ಹೆಂಡತಿ ಜೊತೆಗೆ ಸೇರಿ ಉಪೇಂದ್ರ ಸೂಪರ್ ಡ್ಯಾನ್ಸ್
ನಟ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಡ್ಯಾನ್ಸ್ ಅಂದರೆ ನನಗೆ ಆಗೋದಿಲ್ಲ ಎನ್ನುವ ಉಪ್ಪಿ ಹೆಂಡತಿ ಜೊತೆಗೆ ಸೇರಿ ಸಿಕ್ಕಾಪಟ್ಟೆ ಸ್ಟೆಪ್ ಹಾಕಿದ್ದಾರೆ. ಅಂದಹಾಗೆ, ಇದೆಲ್ಲ ನಡೆದಿರುವುದು 'ಕಾಮಿಡಿ ಟಾಕೀಸ್' ಕಾರ್ಯಕ್ರಮದಲ್ಲಿ.
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಕಾಮಿಡಿ ಟಾಕೀಸ್' ಈಗ ಕೊನೆಯ ಹಂತಕ್ಕೆ ಬಂದಿದೆ. ಈ ಕಾರ್ಯಕ್ರಮದ ಗ್ರಾಂಡ್ ಫಿನಾಲೆಗೆ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಅತಿಥಿಯಾಗಿ ಆಗಮಿಸಿದ್ದಾರೆ. ಈ ಮಹಾ ಸಂಚಿಕೆ ಸದ್ಯದಲ್ಲಿಯೇ ಪ್ರಸಾರ ಆಗಲಿದ್ದು, ಉಪ್ಪಿ ಮತ್ತು ಪ್ರಿಯಾಂಕ ಅವರ ನೃತ್ಯದ ಫೋಟೋವನ್ನು ಕಲರ್ಸ್ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಅಂದಹಾಗೆ, ನಟಿ ರಚಿತಾ ರಾಮ್ ಮತ್ತು ಸೃಜನ್ ಲೋಕೇಶ್ ಕಾಂಬಿನೇಶನ್ ನಲ್ಲಿ ಬಂದ 'ಕಾಮಿಡಿ ಟಾಕೀಸ್' ಕಾರ್ಯಕ್ರಮ ಪ್ರಾರಂಭದಲ್ಲಿ ಗಮನ ಸೆಳೆಯಿತಾದರೂ ಬರು ಬರುತ್ತಾ ಬೋರ್ ಹೊಡೆಸಿತು. ವಿಶೇಷ ಅಂದರೆ, ಈ ಕಾರ್ಯಕ್ರಮದ ತೀರ್ಪುಗಾರರಾಗಿರುವ ನಟಿ ರಚಿತಾ ರಾಮ್ ಉಪೇಂದ್ರ ಜೊತೆಗೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ 'ಉಪ್ಪಿ ರುಪ್ಪಿ' ಎಂಬ ಹೆಸರಿಟ್ಟಿದ್ದು ಅನೇಕ ತಿಂಗಳುಗಳ ಹಿಂದೆಯೇ ಸಿನಿಮಾ ಸೆಟ್ಟೆರಿತ್ತು.


Click it and Unblock the Notifications











