ಕ್ರೇಜಿ ಸ್ಟಾರ್ ಹುಟ್ಟುಹಬ್ಬಕ್ಕೆ ಉಪೇಂದ್ರ ದಂಪತಿ ಶುಭಾಶಯ
ಕನಸುಗಾರ ವಿ ರವಿಚಂದ್ರನ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಮಗಳ ಮದುವೆ ಮಾಡುತ್ತಿರುವ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ.
ರವಿಚಂದ್ರನ್ ರಿಗೆ ಅಭಿಮಾನಿಗಳ ಹಾಗೂ ಚಿತ್ರರಂಗದ ಸ್ನೇಹಿತರು ಶುಭಾಶಯವನ್ನು ತಿಳಿಸುತ್ತಿದ್ದಾರೆ. ನಟ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಟ್ವಿಟ್ಟರ್ ಖಾತೆಯಲ್ಲಿ ವಿಶ್ ಮಾಡಿದ್ದಾರೆ.
''ಕ್ರೇಜಿ ಸ್ಟಾರ್, ಕನಸುಗಾರ, ಪ್ರೇಮಲೋಕದ ಸರದಾರ ವಿ.ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು'' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ನಟಿ ಪ್ರಿಯಾಂಕ ಉಪೇಂದ್ರ ಸಹ ''ಹ್ಯಾಪಿ ಬರ್ತ್ ಡೇ ರವಿ ಸರ್'' ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಶ್ ಮಾಡಿದ್ದಾರೆ.
ರವಿಚಂದ್ರನ್ ನಟನೆ ಮತ್ತು ನಿರ್ದೇಶನದ 'ಮಲ್ಲ' ಹಾಗೂ 'ಕ್ರೇಜಿಸ್ಟಾರ್' ಸಿನಿಮಾದಲ್ಲಿ ಪ್ರಿಯಾಂಕ ಉಪೇಂದ್ರ ಅಭಿನಯಿಸಿದ್ದಾರೆ.

ಉಪೇಂದ್ರ ಮತ್ತು ರವಿಚಂದ್ರನ್ ಕಾಂಬಿನೇಶನ್ ನಲ್ಲಿ 'ರವಿಚಂದ್ರ' ಎನ್ನುವ ಸಿನಿಮಾ ಲಾಂಚ್ ಆಗಿದ್ದು, ಚಿತ್ರೀಕರಣ ನಡೆಯುತ್ತಿದೆ.
ಇತ್ತೀಚಿಗಷ್ಟೆ ರವಿಚಂದ್ರನ್ ಮಗಳು ಗೀತಾಂಜಲಿ ಮದುವೆಗೆ ಸಹ ನಟ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಇಬ್ಬರು ಹೋಗಿ ಆಶೀರ್ವಾದ ಮಾಡಿ ಬಂದಿದ್ದರು.


Click it and Unblock the Notifications











