»   » ಆರ್.ಚಂದ್ರು ಜೊತೆ 'ಕರಗ' ಹೊರಲ್ಲ ಉಪೇಂದ್ರ.!

ಆರ್.ಚಂದ್ರು ಜೊತೆ 'ಕರಗ' ಹೊರಲ್ಲ ಉಪೇಂದ್ರ.!

Posted By:
Subscribe to Filmibeat Kannada

ಕಳೆದ ಎರಡು ದಿನಗಳಿಂದ ಗಾಂಧಿನಗರದಲ್ಲಿ ಉಪೇಂದ್ರ ಅವರ ಮುಂದಿನ ಚಿತ್ರಗಳದ್ದೇ ಸುದ್ದಿ. ಇತ್ತೀಚೆಗಷ್ಟೇ ಉಪ್ಪಿ ಅಭಿನಯಿಸಲಿರುವ 'ಹೋಮ್ ಮಿನಿಸ್ಟರ್' ಸೆಟ್ಟೇರಿತು. ಅದರ ಜೊತೆ 'ಉಪ್ಪಿ-ರುಪ್ಪಿ' ಹಾಗೂ ತಮ್ಮದೇ ಡೈರೆಕ್ಷನ್ ಚಿತ್ರಕ್ಕೆ ರಿಯಲ್ ಸ್ಟಾರ್ ಅಣಿಯಾಗುತ್ತಿದ್ದಾರೆ.

ಹೀಗಿರುವಾಗ, ಮತ್ತೆರೆಡು ಹೊಸ ಚಿತ್ರಗಳಿಗೆ ಉಪೇಂದ್ರ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಇದರಲ್ಲಿ ಒಂದು ಆರ್.ಚಂದ್ರು ನಿರ್ದೇಶನ ಮಾಡಲಿದ್ದಾರಂತೆ. ಇವರಿಬ್ಬರ ಈ ಚಿತ್ರಕ್ಕೆ 'ಕರಗ' ಎಂದು ಹೆಸರಿಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ, ಆರ್.ಚಂದ್ರು ಮತ್ತು ಉಪೇಂದ್ರ ಜೋಡಿಯ ಸಿನಿಮಾಗೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಹೀಗಾಗಿ, ಆರ್.ಚಂದ್ರು ಜೊತೆ ಉಪೇಂದ್ರ ಅವರು 'ಕರಗ' ಹೊರುತ್ತಿಲ್ಲ.

'ಹೋಮ್ ಮಿನಿಸ್ಟರ್' ಟೈಟಲ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೊಸ ಸಿನಿಮಾ!

Upendra and R Chandru's Film Not Karaga

ನಿರ್ದೇಶಕ ಆರ್.ಚಂದ್ರು ಅವರ ಜೊತೆ ಉಪ್ಪಿ 'ಕರಗ' ಹೊರುತ್ತಿಲ್ಲ. ಆದ್ರೆ, ಮತ್ತೊಂದು ಚಿತ್ರದಲ್ಲಿ 'ಕರಗ' ಹೊರಲಿದ್ದಾರೆ ಎನ್ನಲಾಗಿದೆ. ಹೌದು, ಖ್ಯಾತ ನಿರ್ಮಾಪಕ ಹಾಗೂ ವಿತರಕರೊಬ್ಬರು ಉಪ್ಪಿ ಜೊತೆ ಸಿನಿಮಾ ಮಾಡಲಿದ್ದು, ಅವರ ಚಿತ್ರಕ್ಕೆ 'ಕರಗ' ಎಂದು ಹೆಸರಿಡಲಾಗಿದೆಯಂತೆ.

ಸ್ಟಾರ್ ಡೈರೆಕ್ಟರ್ ಜೊತೆ ರಿಯಲ್ ಸ್ಟಾರ್ ಉಪೇಂದ್ರ ಹೊಸ ಸಿನಿಮಾ!

Real Star Upendra got an offer for a Telugu Movie | Filmibeat Kannada

ಸದ್ಯ, 'ಮತ್ತೆ ಹುಟ್ಟಿ ಬಾ ಉಪೇಂದ್ರ' ಚಿತ್ರ ರಿಲೀಸ್ ಗೆ ರೆಡಿಯಾಗಿದೆ. 'ಉಪ್ಪಿ-ರುಪ್ಪಿ' ಭರದಿಂದ ಶೂಟಿಂಗ್ ಸಾಗುತ್ತಿದೆ. ಈಗ 'ಹೋಮ್ ಮಿನಿಸ್ಟರ್' ಸೆಟ್ಟೇರಿದೆ. ಈ ಮಧ್ಯೆ ಉಪ್ಪಿ ನಿರ್ದೇಶನಕ್ಕೆ ಸಿದ್ದವಾಗುತ್ತಿದ್ದಾರೆ. ಅದರ ಜೊತೆಗೆ 'ಕರಗ' ಮತ್ತು ಆರ್.ಚಂದ್ರು ಸಿನಿಮಾನೂ ಶುರುವಾಗುತ್ತೆ. ಒಟ್ನಲ್ಲಿ, ಇನ್ನು ಎರಡು ವರ್ಷ ಉಪ್ಪಿ ಫುಲ್ ಬ್ಯುಸಿ.

English summary
according to reports, Upendra and R Chandru are doing a film together. The film is said to be titled 'Karaga'. but, R chandru says title is not yet decided.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada