ಸಂಕ್ರಾಂತಿಗೆ ಉಪೇಂದ್ರ ಮುಂದಿನ ಸಿನಿಮಾದ ಟೈಟಲ್ ಲಾಂಚ್
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ದೇಶಕ ಶಶಾಂಕ್ ಹೊಸ ಸಿನಿಮಾ ಮಾಡುತ್ತಿರುವ ಸುದ್ದಿ ಈಗಾಗಲೇ ಬಂದಿದೆ. ಈ ಸಿನಿಮಾದ ಶೀರ್ಷಿಕೆ ಇದೀಗ ಘೋಷಣೆ ಆಗುತ್ತಿದೆ.
ಜನವರಿ 15 ರಂದು ಸಿನಿಮಾದ ಟೈಟಲ್ ಬಿಡುಗಡೆ ಆಗಲಿದೆ. ಸಂಕ್ರಾಂತಿ ಹಬ್ಬಕ್ಕೆ ರಿಯಲ್ ಸ್ಟಾರ್ ಚಿತ್ರದ ಶೀರ್ಷಿಕೆ ರಿವೀಲ್ ಆಗಲಿದೆ. ಈ ಸುದ್ದಿಯ ಮೂಲಕ ಹೊಸ ವರ್ಷದ ಶುಭಾಶಯವನ್ನು ಚಿತ್ರತಂಡ ತಿಳಿಸಿದೆ.
ಮೊದಲ ಬಾರಿಗೆ ಶಶಾಂಕ್ ಹಾಗೂ ಉಪೇಂದ್ರ ಕಾಂಬಿನೇಶನ್ ಸಿನಿಮಾ ಬರುತ್ತಿದೆ. ನಿರ್ದೇಶನದ ಜೊತೆಗೆ ಈ ಚಿತ್ರವನ್ನು ಶಶಾಂಕ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. 'ತಾಯಿಗೆ ತಕ್ಕ ಮಗ' ಸಿನಿಮಾದ ನಂತರ ಈ ಚಿತ್ರದ ತಯಾರಿಯನ್ನು ಶಶಾಂಕ್ ಮಾಡಿಕೊಂಡಿದ್ದಾರೆ.

'ಮೊಗ್ಗಿನ ಮನಸ್ಸು', 'ಕೃಷ್ಣನ್ ಲವ್ ಸ್ಟೋರಿ, 'ಬಚ್ಚನ್', 'ಕೃಷ್ಣ ಲೀಲಾ' ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಶಶಾಂಕ್ ಉಪೇಂದ್ರಗೆ ಯಾವ ರೀತಿಯ ಸಿನಿಮಾ ಮಾಡುತ್ತಾರೆ ಎನ್ನುವ ನಿರೀಕ್ಷೆ ಇದೆ.
ಉಪೇಂದ್ರ ಸದ್ಯ 'ಕಬ್ಚ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದ ಜೊತೆಗೆ ಶಶಾಂಕ್ ಚಿತ್ರದ ಕೆಲಸಗಳು ನಡೆಯಲಿದ್ದು, 2020ಕ್ಕೆ ಸಿನಿಮಾದ ಪ್ರೇಕ್ಷಕರ ಮುಂದೆ ಬರಲಿದೆ.


Click it and Unblock the Notifications