For Quick Alerts
  ALLOW NOTIFICATIONS  
  For Daily Alerts

  'KGF' ತರ ಇದೆ ಎಂದು ಮತ್ತೆ ಮತ್ತೆ ಹುಡುಕಿದ ಜನ: 25 ಗಂಟೆಗಳಲ್ಲಿ 'ಕಬ್ಜ' ಟೀಸರ್ ಹೊಸ ದಾಖಲೆ!

  |

  ಉಪೇಂದ್ರ ಬರ್ತ್‌ಡೇ ಸ್ಪೆಷಲ್ಲಾಗಿ ರಿಲೀಸ್ ಆಗಿರುವ 'ಕಬ್ಜ' ಟೀಸರ್ ಧೂಳೆಬ್ಬಿಸಿದೆ. 24 ಗಂಟೆಗಳಲ್ಲಿ 1 ಕೋಟಿ 25 ಲಕ್ಷ ವೀವ್ಸ್ ಪಡೆದುಕೊಂಡು ಸದ್ದು ಮಾಡ್ತಿದೆ. ಟೀಸರ್‌ನ ಬಹುತೇಕ ಫ್ರೇಮ್‌ಗಳಲ್ಲಿ 'KGF' ಸಿನಿಮಾ ಛಾಯೆ ಕಾಣಿಸುತ್ತಿದ್ದರೂ ಕೂಡ ಸಿನಿರಸಿಕರು ಪದೇ ಪದೇ ಟೀಸರ್ ನೋಡಿ ಎಂಜಾಯ್ ಮಾಡ್ತಿದ್ದಾರೆ.

  ಆರ್‌. ಚಂದ್ರು ನಿರ್ದೇಶನ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಕಬ್ಜ'. ರಿಯಲ್ ಸ್ಟಾರ್ ಉಪೇಂದ್ರ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ನಾಯಕಿಯಾಗಿ ಶ್ರಿಯಾ ಶರಣ್ ದರ್ಶನ ಕೊಟ್ಟಿದ್ದು, ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಉಪ್ಪಿ ಹುಟ್ಟುಹಬ್ಬಕ್ಕೂ ಒಂದು ದಿನ ಮೊದಲೇ ಅದ್ಧೂರಿ ಕಾರ್ಯಕ್ರಮದಲ್ಲಿ 'ಕಬ್ಜ' ಟೀಸರ್ ಬಿಡುಗಡೆಯಾಗಿತ್ತು. ತೆಲುಗು ನಟ ರಾಣಾ ದಗ್ಗುಬಾಟಿ ಟೀಸರ್ ಲಾಂಚ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದರು. ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು.

  'ಕಬ್ಜ' ಟೀಸರ್ ತುಂಬಾ 'ಕೆಜಿಎಫ್' ಛಾಯೆ: ಕತೆ?'ಕಬ್ಜ' ಟೀಸರ್ ತುಂಬಾ 'ಕೆಜಿಎಫ್' ಛಾಯೆ: ಕತೆ?

  ಒರಿಯಾ ಹಾಗೂ ಮರಾಠಿ ಸೇರಿ ಒಟ್ಟು 7 ಭಾಷೆಗಳಲ್ಲಿ ಈ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಾಣವಾಗ್ತಿದೆ. ನಿರ್ದೇಶನದ ಜೊತೆಗೆ ಸ್ವತಃ ಆರ್‌. ಚಂದ್ರು ಸಿನಿಮಾ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆಕ್ಷನ್ ಪ್ಯಾಕ್ಡ್ ಟೀಸರ್ ನೋಡಿದವರು ಹುಬ್ಬೇರಿಸಿದ್ದಾರೆ.

  ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ 'ಕಬ್ಜ' ಟೀಸರ್

  ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ 'ಕಬ್ಜ' ಟೀಸರ್

  'ಕಬ್ಜ' ಟೀಸರ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಸಿನಿರಸಿಕರು ಮುಗಿಬಿದ್ದು ಟೀಸರ್ ನೋಡ್ತಿದ್ದಾರೆ. ಪರಿಣಾಮ ಈ ಟೀಸರ್ ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಆರ್‌. ಚಂದ್ರ ಮೇಕಿಂಗ್ ಸ್ಟೈಲ್, ದೊಡ್ಡ ಕ್ಯಾನ್ವಾಸ್ ಎಲ್ಲವೂ ಅದ್ಧೂರಿಯಾಗಿದೆ. ನೆಕ್ಸ್ಟ್ ಲವೆಲ್‌ ಮೇಕಿಂಗ್ ಎಂದು ಸಿನಿರಸಿಕರು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.

  ರೀ ಡೈರೆಕ್ಟ್ರೆ ಮಾನಿಟರ್ ಒಳಗೆ ಮುಳುಗಿ ಹೋಗಿದ್ದೀರಾ?: ಬರ್ತ್‌ಡೇಯಂದೇ ಉಪ್ಪಿ ಕೊಟ್ಟ ಸುಳಿವೇನು?ರೀ ಡೈರೆಕ್ಟ್ರೆ ಮಾನಿಟರ್ ಒಳಗೆ ಮುಳುಗಿ ಹೋಗಿದ್ದೀರಾ?: ಬರ್ತ್‌ಡೇಯಂದೇ ಉಪ್ಪಿ ಕೊಟ್ಟ ಸುಳಿವೇನು?

  24 ಗಂಟೆಗಳಲ್ಲಿ 12.5 ಮಿಲಿಯನ್ ವೀವ್ಸ್

  24 ಗಂಟೆಗಳಲ್ಲಿ 12.5 ಮಿಲಿಯನ್ ವೀವ್ಸ್

  1942ರಲ್ಲಿ 'ಕಬ್ಜ' ಸಿನಿಮಾ ಕಥೆ ಶುರುವಾಗುತ್ತದೆ. ರೆಟ್ರೋ ಸ್ಟೈಲ್‌ನಲ್ಲಿ 60, 70, 80ರ ದಶಕಗಳ ಕಾಲಘಟ್ಟಗಳಲ್ಲಿ ಕಥೆ ಮುಂದುವರೆಯುತ್ತದೆ. ಇನ್ನು ಟೀಸರ್‌ನಲ್ಲಿ ಭಾರ್ಗವ್ ಭಕ್ಷಿ ಕಿಚ್ಚನ ಝಲಕ್‌ ಕೂಡ ನೋಡಬಹುದು. 24 ಗಂಟೆಗಳಲ್ಲಿ ಟೀಸರ್ 12.5 ಮಿಲಿಯನ್ ವೀವ್ಸ್ ಸಾಧಿಸಿದೆ ಎಂದು ಆರ್‌. ಚಂದ್ರು ಘೋಷಿಸಿದ್ದಾರೆ. 3 ಲಕ್ಷದ 80 ಸಾವಿರ ಲೈಕ್ಸ್ ಹಾಗೂ 36 ಸಾವಿರ ಕಾಮೆಂಟ್ಸ್ ಸಿಕ್ಕಿದೆ.

  'ಕಬ್ಜ' ಟೀಸರ್‌ನಲ್ಲಿ 'KGF' ಛಾಯೆ

  'ಕಬ್ಜ' ಟೀಸರ್‌ನಲ್ಲಿ 'KGF' ಛಾಯೆ

  ಆಕ್ಷನ್ ಥ್ರಿಲ್ಲರ್ 'ಕಬ್ಜ' ಸಿನಿಮಾ ಟೀಸರ್ ನಿಜಕ್ಕೂ ಕಣ್ಣಿಗೆ ಹಬ್ಬ. ಆದರೆ ಟೀಸರ್ ತುಂಬಾ 'KGF' ಸರಣಿ ಸಿನಿಮಾಗಳ ಛಾಯೆ ಎದ್ದು ಕಾಣುತ್ತೆ. ಎಲ್ಲರೂ ಇದೇ ಮಾತನ್ನು ಹೇಳುತ್ತಿದ್ದಾರೆ. ಪರಭಾಷಿಕರು ಕೂಡ ಟೀಸರ್ ನೋಡಿ ಇದನ್ನೇ ಕಾಮೆಂಟ್ ಮಾಡ್ತಿದ್ದಾರೆ. ಕೆಲವರು ಮೇಕಿಂಗ್‌ನಲ್ಲಿ ಆ ಸಿನಿಮಾ ಛಾಯೆ ಇದ್ದರೂ ಸರಿ ಒಳ್ಳೆ ಕಥೆ, ಸ್ಕ್ರೀನ್‌ಪ್ಲೇ ಇರಲಿ ಎನ್ನುತ್ತಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಉಪೇಂದ್ರ, "ಕೆಲವರು KGFಗೆ ಹೋಲಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಇದು ಸಂತೋಷನೇ. KGF ತರ ಇನ್ನೊಂದು ಸಿನಿಮಾ ಕನ್ನಡದಲ್ಲಿ ಮಾಡ್ತಿದ್ದೀವಿ ಎಂದರೆ ಹೆಮ್ಮೆಪಡುವ ವಿಚಾರ. ಸಿನಿಮಾ ಬಂದಮೇಲೆ ಗೊತ್ತಾಗುತ್ತೆ. ಅದುಬೇರೆ ಇದು ಬೇರೆ ಅಂತ " ಎಂದಿದ್ದಾರೆ.

  ಡಿಸೆಂಬರ್‌ನಲ್ಲಿ ತೆರೆಮೇಲೆ 'ಕಬ್ಜ'

  ಡಿಸೆಂಬರ್‌ನಲ್ಲಿ ತೆರೆಮೇಲೆ 'ಕಬ್ಜ'

  KGF ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದ ರವಿಬಸ್ರೂರು ಈ ಚಿತ್ರಕ್ಕೂ ಟ್ಯೂನ್ ಹಾಕಿದ್ದಾರೆ. ಟೀಸರ್‌ನಲ್ಲಿ KGF ಛಾಯೆ ಕಾಣುವ ಅವರ ಮ್ಯೂಸಿಕ್ ಕೂಡ ಒಂದು ಕಾರಣ ಎನ್ನಬಹುದು. ಶಿವಕುಮಾರ್ ಆರ್ಟ್‌ವರ್ಕ್‌ ಮತ್ತೊಂದು ಹೈಲೆಟ್. ಡಿಸೆಂಬರ್‌ ವೇಳೆಗೆ ಕಬ್ಜ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ.

  English summary
  Upendra And Sudeep Starrer Kabzaa Teaser Records 12.5 Million Views in 24 Hours. Know More
  Monday, September 19, 2022, 10:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X