For Quick Alerts
  ALLOW NOTIFICATIONS  
  For Daily Alerts

  ಕಾಶಿನಾಥ್ ಹುಟ್ಟುಹಬ್ಬ: ಗುರುವಿಗೆ ಶುಭಾಶಯ ಹೇಳಿದ ಉಪೇಂದ್ರ ಮತ್ತು ತರುಣ್ ಸುಧೀರ್

  |

  ಸ್ಯಾಂಡಲ್ ವುಡ್ ಖ್ಯಾತ ನಟ ಮತ್ತು ನಿರ್ದೇಶಕ ಕಾಶಿನಾಥ್ ಅವರ ಹುಟ್ಟುಹಬ್ಬ. ಇಂದು 69ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನಲೆ ಅವರ ಅವರ ಶಿಷ್ಯರಾದ ಉಪೇಂದ್ರ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಾಶಿನಾಥ್ ಅವರನ್ನು ಸ್ಮರಿಸಿದ್ದಾರೆ.

  ನಮ್ಮನ್ನು ರಕ್ಷಿಸುತ್ತಿರುವವರನ್ನು ಗೌರವಿಸೋಣ ಎಂದ ಶಿವಣ್ಣ | Shivanna | Corona Warriors

  ಚಿತ್ರರಂಗದಲ್ಲಿ ಹೊಸ ಅಲೆಯನ್ನಬ್ಬಿದ ನಟ ಕಾಶಿನಾಥ್, ನಟನಾಗಿ, ನಿರ್ದೇಶಕನಾಗಿ ಮತ್ತು ಸಂಗೀತ ನಿರ್ದೇಶನದಲ್ಲೂ ತಮ್ಮದೆ ಆದ ಛಾಪು ಮೂಡಿಸಿದ್ದರು. 43 ಚಿತ್ರಗಳಲ್ಲಿ ಬಣ್ಣಹಚ್ಚಿರುವ ಕಾಶಿನಾಥ್ ಕನ್ನಡದಲ್ಲಿ 13 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕಾಶಿನಾಥ್ 2018ರಲ್ಲಿ ನಿಧನರಾಗಿದ್ದಾರೆ.

  ಸ್ಯಾಂಡಲ್ ವುಡ್ ನಲ್ಲಿ ಕಾಶಿನಾಥ್ ಅವರಿಗೆ ದೊಡ್ಡ ಶಿಷ್ಯ ಬಳಗವಿದೆ. ಕಾಶಿನಾಥ್ ಗರಡಿಯಲ್ಲಿ ಪಳಗಿದ ನಟ ಮತ್ತು ನಿರ್ದೇಶಕ ಉಪೇಂದ್ರ ಇಂದು ಗುರುವನ್ನು ನೆನಪಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ದಾರಿತೋರಿದ ಗುರುವಿಗೆ ಸಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ.

  "ಅರಿವು ಮೂಡಿಸಿದ ಗುರು. ಜನ್ಮದಿನದ ಶುಭಾಶಯಗಳು" ಎಂದು ಗುರುವಿಗೆ ಶುಭಾಶಯ ತಿಳಿಸಿದ್ದಾರೆ.

  ಇನ್ನೂ ನಿರ್ದೇಶಕ ತರುಣ್ ಸುಧೀರ್ ಸಹ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದಾರೆ. "ಹುಟ್ಟುಹಬ್ಬದ ಶುಭಾಶಯಗಳು ಕಾಶಿ ಸರ್. ನಿಮ್ಮ ಜೊತೆ ಕೆಲಸ ಮಾಡಿದ್ದು ನನ್ನ ಸ್ಮರಣೀಯ ಕ್ಷಣ. ನಿಮ್ಮನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ" ಎಂದು ವಿಶ್ ಮಾಡಿ ಕಾಶಿನಾಥ್ ಜೊತೆ ಇರುವ ಫೋಟೋ ಹಂಚಿಕೊಂಡಿದ್ದಾರೆ.

  Upendra And Tarun Sudhir Birthday Wish To Kashinath.

  ತರುಣ್ ಸುಧೀರ್ ನಿರ್ದೇಶನದ ಚೌಕ ಸಿನಿಮಾದಲ್ಲಿ ಕಾಶಿನಾಥ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚೌಕ ಸಿನಿಮಾದಲ್ಲಿ ಕಾಶಿನಾಥ್ ಪಾತ್ರ ಸಿನಿಪ್ರಿಯರ ಮೆಚ್ಚುಗೆ ಪಡೆದಿತ್ತು.

  English summary
  Actor Upendra and Tarun Sudhir birthday wish to Actor Kashinath.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X