ಉಪೇಂದ್ರ ಹೊಸ ಸಿನಿಮಾ ಹೆಸರಿನ ಅರ್ಥವೇನು?

ಉಪೇಂದ್ರ ಇಂದು 'ಸೂಪರ್ ಸ್ಟಾರ್' ನಟ, ಆದರೆ ಉಪೇಂದ್ರ ನಟರಾಗುವ ಮುನ್ನ ನಿರ್ದೇಶಕರಾಗಿ ಬಹಳ ಖ್ಯಾತರು. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ನಿರ್ದೇಶಕ ಉಪೇಂದ್ರ.

ಉಪೇಂದ್ರ ನಟನೆಗೆ ಎಷ್ಟು ಅಭಿಮಾನಿಗಳಿದ್ದಾರೊ ಅದರಷ್ಟೆ ಅಭಿಮಾನಿಗಳು ನಿರ್ದೇಶಕ ಉಪೇಂದ್ರಗೂ ಇದ್ದಾರೆ. ಉಪೇಂದ್ರ ಎಷ್ಟೇ ಸಿನಿಮಾಗಳಲ್ಲಿ ನಟಿಸಿದರೂ ನಿರ್ದೇಶನ ಮಾಡುವಂತೆ ಅವರ ಮೇಲೆ ಒತ್ತಡ ಬರುತ್ತಲೇ ಇರುತ್ತದೆ.

ನಾಯಕ ನಟನಾಗಿ ಎರಡು ದಶಕ ಪೂರೈಸಿಸಿರುವ ಉಪೇಂದ್ರ ತಮ್ಮ ಬಹುಪಾಲು ಸಮಯವನ್ನು ನಟನೆಗೆ ಮೀಸಲಿಟ್ಟಿದ್ದಾರೆ. ಆದರೆ ಅಭಿಮಾನಿಗಳ ಒತ್ತಾಸೆಗೆ ಕಟ್ಟುಬಿದ್ದು ಮೂರು-ನಾಲ್ಕು ವರ್ಷಕ್ಕೊಮ್ಮೆ ನಿರ್ದೇಶನ ಸಹ ಮಾಡುತ್ತಿರುತ್ತಾರೆ. ಇದೀಗ ಉಪ್ಪಿ ತಮ್ಮ ನಿರ್ದೇಶನದ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಪ್ರತಿಬಾರಿಯೂ ಹೆಸರಿನಿಂದಲೇ ಗಮನ ಸೆಳೆಯುವುದು ಉಪೇಂದ್ರರ 'ಸ್ಟೈಲ್' ಈ ಬಾರಿಯೂ ತಮ್ಮ ಹೊಸ ಸಿನಿಮಾಕ್ಕೆ ಭಿನ್ನವಾದ ಹೆಸರಿಟ್ಟಿದ್ದಾರೆ ಉಪ್ಪಿ.

ಉಪೇಂದ್ರ ನಿರ್ದೇಶನ ಮಾಡಿದ್ದ ಸಿನಿಮಾ ಒಂದಕ್ಕೆ ಕೇವಲ ಚಿಹ್ನೆಯನ್ನು ಹೆಸರಾಗಿ ಇಟ್ಟಿದ್ದರು ನಂತರ ಅದನ್ನು ಅಭಿಮಾನಿಗಳು 'ಸೂಪರ್' ಎಂದು ಕರೆದರು. ಈ ಬಾರಿಯೂ ಸಹ ಉಪ್ಪಿ ತಮ್ಮ ಸಿನಿಮಾಕ್ಕೆ ಕೇವಲ ಒಂದು ಚಿಹ್ನೆಯನ್ನು ಹೆಸರಾಗಿ ಇಟ್ಟಿದ್ದಾರೆ. ಆ ಚಿಹ್ನೆಯನ್ನು ಆಧರಿಸಿ ಸಿನಿಮಾದ ಹೆಸರನ್ನು ಅಭಿಮಾನಿಗಳೇ ಊಹಿಸುತ್ತಿದ್ದಾರೆ. ಈ ನಡುವೆ ತಮ್ಮ ಸಿನಿಮಾದ ಹೆಸರೇನು? ಎಂಬ ಬಗ್ಗೆ ಉಪೇಂದ್ರ ಚುಟುಕಾಗಿ ಮಾಧ್ಯಮವೊಂದರ ಜೊತೆ ಮಾತನಾಡಿದ್ದಾರೆ.

ಭಿನ್ನ ಹೆಸರಿಟ್ಟಿದ್ದಾರೆ ಉಪೇಂದ್ರ

ಭಿನ್ನ ಹೆಸರಿಟ್ಟಿದ್ದಾರೆ ಉಪೇಂದ್ರ

ಉಪೇಂದ್ರ ತಮ್ಮ ಸಿನಿಮಾಕ್ಕೆ ಭಿನ್ನವಾದ ಚಿಹ್ನೆಯೊಂದನ್ನು ಹೆಸರಾಗಿ ಇಟ್ಟಿದ್ದಾರೆ. ಯೂ ಆಕಾರದ ಒಳಗೆ ಐ ಆಕಾರವೊಂದಿದೆ. ನೋಡಲು ನಾಮದಂತೆ ಕಾಣುತ್ತಿದೆ ಈ ಬಗ್ಗೆ ಮಾತನಾಡಿರುವ ಉಪೇಂದ್ರ, ''ಸಿನಿಮಾದ ಹೆಸರು ಏನು ಎಂಬುದು ಜನರ ಆಲೋಚನೆಗೆ ಬಿಟ್ಟಿದ್ದು, ಸಿನಿಮಾವನ್ನು 'ಯು' 'ಐ' ಎಂದುಕೊಳ್ಳಬಹುದು, ಮೂರು ನಾಮ ಎಂದುಕೊಳ್ಳಬಹುದು ನೀನು ಮತ್ತು ನಾನು ಎಂದು ಬೇಕಾದರು ಅಂದುಕೊಳ್ಳಿ. ಎಲ್ಲವೂ ಅವರವರ ಯೋಚನೆಗೆ ಬಿಟ್ಟಿದ್ದು'' ಎಂದಿದ್ದಾರೆ ಉಪ್ಪಿ.

ಜನರ ಊಹೆ ಆಧರಿಸಿ ಸಿನಿಮಾದ ಕತೆ!

ಜನರ ಊಹೆ ಆಧರಿಸಿ ಸಿನಿಮಾದ ಕತೆ!

ಸಿನಿಮಾದ ಕತೆ ಏನಾಗಿರಲಿದೆ ಎಂಬ ಬಗ್ಗೆಯೂ ಮಾತನಾಡಿರುವ ಉಪೇಂದ್ರ, ''ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದ್ದೇನೆ. ಜನರ ಅದನ್ನು ನೋಡಿ ಹೇಗೆ ಪ್ರತಿಕ್ರಿಯಿಸುತ್ತಾರೋ ಸಿನಿಮಾದ ಕತೆ ಹಾಗೆ ಇರಲಿದೆ'' ಎಂದು ಟ್ವಿಸ್ಟ್ ಕೊಟ್ಟಿದ್ದಾರೆ ಉಪ್ಪಿ. ಟೈಟಲ್ ಅನ್ನು ಜನ ಹೇಗೆ ಸ್ವೀಕರಿಸಿ ಏನು ಊಹೆ ಮಾಡುತ್ತಾರೊ ಅದರ ಆಧಾರದಲ್ಲಿಯೇ ಸಿನಿಮಾದ ಕತೆ ಕಟ್ಟುತ್ತಾರಂತೆ ಉಪೇಂದ್ರ! ಸಿನಿಮಾದ ಚಿತ್ರೀಕರಣ ಮೇ ತಿಂಗಳಿನಿಂದ ಪ್ರಾರಂಭವಾಗಲಿದೆ. ಈ ಸಿನಿಮಾವನ್ನು ಕೆಪಿ ಶ್ರೀಕಾಂತ್ ಮತ್ತು ಮನೋಹರ್ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚಿನ 'ರೈಡರ್' ಬಳಿಕ ಲಹರಿ ಮತ್ತೊಮ್ಮೆ ಈ ಸಿನಿಮಾದ ಮೂಲಕ ನಿರ್ಮಾಣಕ್ಕೆ ಕೈ ಹಾಕಿದೆ.

ವಿಭಿನ್ನವಾದ ಪೋಸ್ಟರ್ ಬಿಡುಗಡೆ

ವಿಭಿನ್ನವಾದ ಪೋಸ್ಟರ್ ಬಿಡುಗಡೆ

ಉಪೇಂದ್ರ ಹೊಸ ಸಿನಿಮಾದ ಪೋಸ್ಟರ್ ಗಮನಿಸಿದರೆ ಅಲ್ಲೂ ಕೂಡ ಸಾಕಷ್ಟು ವಿಭಿನ್ನ ವೈಶಿಷ್ಟ್ಯಗಳು ತಲೆಗೆ ಹುಳ ಬಿಡುತ್ತವೆ. ಮೊದಲನೆಯದಾಗಿ ಉಪ್ಪಿ ಕುದುರೆ ಏರಿ ಬಂದಿದ್ದಾರೆ. ಕುದುರೆಗೆ ಕೊಂಬು ಇರುವುದಿಲ್ಲ. ಆದರೆ ಈ ಪೋಸ್ಟರ್‌ನಲ್ಲಿ ಕುದುರೆಗೆ ಕೊಂಬು ಇದೆ. ಕೊಂಬಿನ ಕುದುರೆ ಮೇಲೆ ವಾರಿಯರ್ ರೀತಿಯಲ್ಲಿ ಉಪೇಂದ್ರ ಕುಳಿತಿದ್ದಾರೆ. ಒಂದು ಕಡೆ ಬಾಹ್ಯಾಕಾಶ, ಉಪಗ್ರಹ ಕಾಣುತ್ತದೆ. ಹಾಗೆ ಒಂದು ಊರು, ರೈಲು ಗಾಡಿ ಮತ್ತು ಗುಡ್ಡ ಬೆಟ್ಟದ ಪ್ರದೇಶ ಕಾಣಿಸುತ್ತದೆ. ಇನ್ನು ಪೋಸ್ಟರ್ ಮೇಲೆ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಇಂಗ್ಲಿಷ್‌ನಲ್ಲಿ ಸಾಲು ಬರೆಯಲಾಗಿದೆ. ಅದು 'ಇವನು ಯಾವಾಗ ಬರ್ತಾನೆ ಗೊತ್ತಿಲ್ಲ, ಆದರೆ ಖಂಡಿತಾವಾಗಿ ಬರುತ್ತಾನೆ' ಎನ್ನುವ ಅರ್ಥ ಕೊಡುತ್ತದೆ.

ಹಲವು ಸಿನಿಮಾಗಳಲ್ಲಿ ಉಪೇಂದ್ರ ಬ್ಯುಸಿ

ಹಲವು ಸಿನಿಮಾಗಳಲ್ಲಿ ಉಪೇಂದ್ರ ಬ್ಯುಸಿ

ಕಳೆದ ಮೂರು ವರ್ಷದ ಅವಧಿಯಲ್ಲಿ ಹಲವು ಸಿನಿಮಾಗಳಲ್ಲಿ ಉಪೇಂದ್ರ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಉಪೇಂದ್ರ ನಟಿಸಿರುವ 'ತ್ರಿಶೂಲಂ', 'ಬುದ್ಧಿವಂತ 2' ಹಾಗೂ 'ಲಗಾಮ್' ಸಿನಿಮಾಗಳು ಬಿಡುಗಡೆ ಆಗಬೇಕಿವೆ. ಆರ್.ಚಂದ್ರು ನಿರ್ದೇಶನದ ದೊಡ್ಡ ಬಜೆಟ್ ಸಿನಿಮಾ 'ಕಬ್ಜ'ನಲ್ಲಿಯೂ ಉಪೇಂದ್ರ ನಟಿಸುತ್ತಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಸಿನಿಮಾದ ಮುಖ್ಯ ಪಾತ್ರದಲ್ಲಿ ಸುದೀಪ್ ಸಹ ನಟಿಸಿದ್ದಾರೆ. ಇದೀಗ ತಮ್ಮದೇ ನಿರ್ದೇಶನದ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಇವುಗಳ ಜೊತೆಗೆ ಉಪ್ಪಿ ನಟನೆಯ 'ಹೋಮ್ ಮಿನಿಸ್ಟರ್' ಸಿನಿಮಾ ಏಪ್ರಿಲ್ 01 ರಂದು ತೆರೆಗೆ ಬರಲಿದೆ. ಉಪ್ಪಿ ಅಭಿನಯದ ತೆಲುಗು ಸಿನಿಮಾ 'ಗನಿ' ಏಪ್ರಿಲ್ 08 ರಂದು ತೆರೆಗೆ ಬರುತ್ತಿದೆ.

More from Filmibeat

English summary
Upendra announce his new directorial movie. He talked about his new movie's name. He says It is upto people they can call it anything they want.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X