ಪಕ್ಷದ ಹೆಸರನ್ನ ಡಿಫ್ರೆಂಟ್ ಆಗಿ ಉದ್ಘಾಟನೆ ಮಾಡಿದ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಅವರು ಏನೇ ಮಾಡಿದರು ಡಿಫ್ರೆಂಟ್ ಎಂಬ ಮಾತಿದೆ. ಅದು ರಾಜಕೀಯಕ್ಕೆ ಬಂದಾಗಲೂ, ಈಗ ಪಕ್ಷದ ಹೆಸರು ಘೋಷಣೆ ಮಾಡಿದಾಗಲೂ ಮತ್ತೆ ಸಾಬೀತಾಗಿದೆ.
ಹೌದು, ಇಂದು (ಅಕ್ಟೋಬರ್ 31) ಮಧ್ಯಾಹ್ನ ಬೆಂಗಳೂರಿನ ಗಾಂಧಿ ಭವನದಲ್ಲಿ ಉಪೇಂದ್ರ ಅವರ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ಪಕ್ಷದ ಹೆಸರನ್ನ ಉದ್ಘಾಟನೆ ಮಾಡಲಾಯಿತು.

ವಿಶೇಷ ಅಂದ್ರೆ, ಈ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ರಾಜಕೀಯ ಗಣ್ಯರು ಅಲ್ಲ, ಚಲನಚಿತ್ರ ಕಲಾವಿದರು ಅಲ್ಲ, ಕನ್ನಡ ಸುದ್ದಿ ಮಾಧ್ಯಮದ ವರದಿಗಾರರು. ಕಾರ್ಯಕ್ರಮದ ಅತಿಥಿಗಳು ಕೂಡ ಅವರೇ ಅಗಿದ್ದರು. ವೇದಿಕೆ ಮೇಲೆ ಜರ್ನಲಿಸ್ಟ್ ಗಳನ್ನ ಕೂರಿಸಿ, ಉಪೇಂದ್ರ ಮತ್ತು ಪಾರ್ಟಿ ಬೆಂಬಲಿಗರು ವೇದಿಕೆಯ ಮುಂದೆ ಕೂತಿದ್ದರು. ಇದು ಉಪೇಂದ್ರ ಅವರ ವಿಭಿನ್ನತೆಯನ್ನ ತೋರಿಸುತ್ತದೆ.
More from Filmibeat
English summary
Real Star Upendra Announced His New Political Party (Karnataka Pragnavantha Janatha Party). ನಟ ಉಪೇಂದ್ರ ಅವರು ತಮ್ಮ ರಾಜಕೀಯ ಪಕ್ಷದ ಹೆಸರನ್ನ ಘೋಷಣೆ ಮಾಡಿದರು.


Click it and Unblock the Notifications











